ನಾಯರ್‌ ಶತಕ; ಜಯದ ಕನಸಲ್ಲಿ ಕರ್ನಾಟಕ

Team Udayavani, Oct 27, 2017, 8:23 AM IST

27-7.jpg

ಶಿವಮೊಗ್ಗ: ಕರುಣ್‌ ನಾಯರ್‌ ಬಾರಿಸಿದ ಅಮೋಘ ಶತಕ, ಸ್ಟುವರ್ಟ್‌ ಬಿನ್ನಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಣಜಿ ಪಂದ್ಯದ 3ನೇ ದಿನದಾಟದಲ್ಲಿ ಕರ್ನಾಟಕ ದ್ವಿತೀಯ ಸರದಿಯಲ್ಲಿ 332 ರನ್‌ ಗಳಿಸಿ ಚೇತೋಹಾರಿ ಪ್ರದರ್ಶನವಿತ್ತಿದೆ. ಹೈದರಾಬಾದ್‌ಗೆ 380 ರನ್‌ ಗೆಲುವಿನ ಗುರಿ ನೀಡಿದ್ದು, 92 ರನ್ನಿಗೆ 2 ಪ್ರವಾಸಿಗರ 2 ವಿಕೆಟ್‌ ಬಿದ್ದಿದೆ. 

ಶುಕ್ರವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 8 ವಿಕೆಟ್‌ ನೆರವಿನಿಂದ ಇನ್ನೂ 288 ರನ್‌ ಗಳಿಸಬೇಕಾದ ಒತ್ತಡ ಹೈದರಾಬಾದ್‌ ಮೇಲಿದೆ. ಎರಡೂ ಪಂದ್ಯ ರದ್ದಾದ್ದರಿಂದ ಅಂಬಾಟಿ ರಾಯುಡು ಪಡೆಗೆ ಸ್ಪಷ್ಟ ಗೆಲು ವೊಂದು ತುರ್ತಾಗಿ ಬೇಕಿದೆ. ಆದರೆ ಶ್ರೇಯಸ್‌ ಗೋಪಾಲ್‌-ಕೃಷ್ಣಪ್ಪ ಗೌತಮ್‌ ಜೋಡಿಯ ಸ್ಪಿನ್‌ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಉರುಳಿದ ಎರಡೂ ವಿಕೆಟ್‌ಗಳು ಇವರ ಬುಟ್ಟಿಗೇ ಬಿದ್ದಿವೆ. ಅಲ್ಲದೇ ಕರ್ನಾಟಕದ ದ್ವಿತೀಯ ಸರದಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ ಹೈದರಾಬಾದ್‌ನ ಮೆಹಿª ಹಸನ್‌ (88ಕ್ಕೆ 5) ಮತ್ತು ಆಕಾಶ್‌ ಭಂಡಾರಿ (64ಕ್ಕೆ 3) ಇಬ್ಬರೂ ಸ್ಪಿನ್ನರ್‌ಗಳೆಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಕೊನೆಯ ದಿನ “ಸ್ಪಿನ್‌ ಅಟ್ಯಾಕ್‌’ ಆದರೆ ಕರ್ನಾಟಕದ ಸತತ 2ನೇ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.

ಹೈದರಾಬಾದ್‌ ಈಗಾಗಲೇ ಆರಂಭಕಾರ ಅಕ್ಷತ್‌ ರೆಡ್ಡಿ (15) ಮತ್ತು ಕೀಪರ್‌ ಕೆ. ಸುಮಂತ್‌ (9) ವಿಕೆಟ್‌ ಕಳೆದುಕೊಂಡಿದೆ. ಸುಮಂತ್‌ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ವಾಧಿಕ 68 ರನ್‌ ಹೊಡೆದಿದ್ದರು. ಮತ್ತೂಬ್ಬ ಆರಂಭಕಾರ ತನ್ಮಯ್‌ ಅಗರ್ವಾಲ್‌ 43 ರನ್‌ ಹಾಗೂ ನಾಯಕ ಅಂಬಾಟಿ ರಾಯುಡು 18 ರನ್‌ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರು 3ನೇ ವಿಕೆಟಿಗೆ ಈಗಾಗಲೇ 42 ರನ್‌ ಒಟ್ಟುಗೂಡಿಸಿದ್ದಾರೆ. ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರೆ ಕರ್ನಾಟಕ ನಿರಾತಂಕ ಓಟ ಬೆಳೆಸಬಹುದು.

ಕರುಣ್‌ ನಾಯರ್‌ ಶತಕದಾಟ
ಟೀಮ್‌ ಇಂಡಿಯಾ ಡ್ನೂಟಿ ಮುಗಿಸಿ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ರಂಜನೀಯ ಶತಕದ ಮೂಲಕ ಕರ್ನಾಟಕಕ್ಕೆ ಆಸರೆಯಾದರು. ಇವರಿಗೆ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಉತ್ತಮ ಬೆಂಬಲವಿತ್ತರು. ನಾಯರ್‌ 134 ರನ್‌ ಬಾರಿಸಿದರೆ, ಬಿನ್ನಿ 72 ರನ್‌ ಕೊಡುಗೆ ಸಲ್ಲಿಸಿದರು. ಇವರಿಬ್ಬರ 5ನೇ ವಿಕೆಟ್‌ ಜತೆಯಾಟದಲ್ಲಿ 160 ರನ್‌ ಒಟ್ಟುಗೂಡಿದ್ದರಿಂದ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸುವಂತಾಯಿತು.

229 ಎಸೆತಗಳನ್ನು ನಿಭಾಯಿಸಿದ ಕರುಣ್‌ ನಾಯರ್‌ 17 ಬೌಂಡರಿ ನೆರವಿನಿಂದ 134 ರನ್‌ ಬಾರಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯರ್‌ ಹೊಡೆದ 11ನೇ ಶತಕ. 37 ರನ್ನಿನಿಂದ ಅವರು ಬ್ಯಾಟಿಂಗ್‌ ಮುಂದುವರಿಸಿದ್ದರು. 26 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಬಿನ್ನಿ 144 ಎಸೆತಗಳಿಂದ 72 ರನ್ನುಗಳ ಅಮೂಲ್ಯ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಇವರಿಬ್ಬರು ತಂಡದ ಮೊತ್ತವನ್ನು 57ರಿಂದ 217ರ ತನಕ ವಿಸ್ತರಿಸಿದರು. ನಾಯರ್‌ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು. ಸಿ.ಎಂ. ಗೌತಮ್‌ 21, ವಿನಯ್‌ ಕುಮಾರ್‌ 14, ಎಸ್‌. ಅರವಿಂದ್‌ 10 ರನ್‌ ಮಾಡಿ ಔಟಾದರು. ಕರ್ನಾಟಕ 4ಕ್ಕೆ 127 ರನ್‌ ಗಳಿಸಿದಲ್ಲಿಂದ ಗುರುವಾರದ ಆಟ ಮುಂದುವರಿಸಿತ್ತು.

ನಾಯರ್‌-ಬಿನ್ನಿ ಹೊರತುಪಡಿಸಿದರೆ ಕರ್ನಾಟಕದ ಸರದಿಯಲ್ಲಿ ನಾಲ್ವರು ಖಾತೆ ಯನ್ನೇ ತೆರೆಯದಿದ್ದುದನ್ನು “ದೊಡ್ಡ ಸುದ್ದಿ’ ಎನ್ನಲಡ್ಡಿಯಿಲ್ಲ. ಇವರೆಂದರೆ ಮಾಯಾಂಕ್‌ ಅಗರ್ವಾಲ್‌, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌. ಇವರಲ್ಲಿ ಅಗರ್ವಾಲ್‌ ಅವರದು ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯ ಸಂಪಾದನೆ!

ಸಂಕ್ಷಿಪ್ತ ಸ್ಕೋರ್‌: 
ಕರ್ನಾಟಕ-183 ಮತ್ತು 332 
(ನಾಯರ್‌ 134, ಬಿನ್ನಿ 72, ಸಮರ್ಥ್ 29, ರಾಹುಲ್‌ 23, ಸಿ.ಎಂ. ಗೌತಮ್‌ 21, ಮೆಹಿª ಹಸನ್‌ 88ಕ್ಕೆ 5, ಆಕಾಶ್‌ ಭಂಡಾರಿ 64ಕ್ಕೆ 3). ಹೈದರಾಬಾದ್‌-136 ಮತ್ತು 2 ವಿಕೆಟಿಗೆ 92 (ತನ್ಮಯ್‌ ಅಗರ್ವಾಲ್‌ ಬ್ಯಾಟಿಂಗ್‌ 43, ರಾಯುಡು ಬ್ಯಾಟಿಂಗ್‌ 18, ಗೌತಮ್‌ 32ಕ್ಕೆ 1, ಶ್ರೇಯಸ್‌ 21ಕ್ಕೆ 1).

ಟಾಪ್ ನ್ಯೂಸ್

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.