ಮೃಗಾಲಯ ಚಿರತೆ ಅಲ್ಲ, ಚಾಮುಂಡಿ ಬೆಟ್ಟದ್ದು
Team Udayavani, Oct 27, 2017, 12:01 PM IST
ಮೈಸೂರು: ಬೋನಿನೊಳಗೆ ಸೆರೆಯಾಗಿರಬೇಕಿದ್ದ ಚಿರತೆಯೊಂದು ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದ ಘಟನೆ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದ್ದು, ಯಶಸ್ವಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮುಂಡಿಬೆಟ್ಟದ ಸಮೀಪದ ಮೃಗಾಲಯಕ್ಕೆ ಆಗಮಿಸಿದ್ದ ಚಿರತೆ ಮೃಗಾಲಯದ ಆವರಣದ ಮರವನ್ನೇರಿ ನಿದ್ರೆಗೆ ಜಾರಿತ್ತು. ಈ ನಡುವೆ ಗುರುವಾರ ಬೆಳಗ್ಗೆ 9 ಗಂಟೆ ವೇಳೆ ಎಂದಿನಂತೆ ಕೆಲಸದಲ್ಲಿ ತೊಡಗಿದ್ದ ಮೃಗಾಲಯದ ಪ್ರಾಣಿಪಾಲಕ ರಾಜಶೇಖರ್ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮರದ ಮೇಲೆ ಚಿರತೆ ಮಲಗಿರುವುದನ್ನು ಗಮನಿಸಿದ್ದರು.
ಮೃಗಾಲಯದ ಬೋನಿನಲ್ಲಿರಬೇಕಿದ್ದ ಚಿರತೆ ಹೊರಕ್ಕೆ ಬಂದಿರುವುದನ್ನು ಕಂಡು ಆತಂಕಗೊಂಡ ರಾಜಶೇಖರ್, ಕೂಡಲೇ ಮೃಗಾಲಯದ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯಾಧಿಕಾರಿಗಳಾದ ಡಾ.ರಮೇಶ್, ಡಾ.ಮದನ್, ಮೃಗಾಲಯ ಸಿಬ್ಬಂದಿ ಸತತ 2 ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಮರದ ಮೇಲೆ ಕುಳಿತಿದ್ದ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಗೊಂದಲ: ಮೃಗಾಲಯದ ಮರದ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಆತಂಕದ ಜತೆಗೆ ಗೊಂದಲ ಮೂಡಿಸಿತ್ತು. ಮೃಗಾಲಯದ ಚಿರತೆಗಳು ಬೋನಿನಲ್ಲೇ ಇರುವುದು ಖಾತರಿ ಬಳಿಕ, ಮೃಗಾಲಯದಲ್ಲಿ ಕಾಣಿಸಿಕೊಂಡ ಚಿರತೆ ಹೊರಗಿನಿಂದ ಬಂದಿರುವುದನ್ನು ಖಚಿತಪಡಿಸಿಕೊಂಡರು. ನಂತರ ಸಿಬ್ಬಂದಿಯೊಂದಿಗೆ ಬೆರೆತು ತುರ್ತಾಗಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿದರು.
ತಪ್ಪಿದ ಅನಾಹುತ: ಚಿರತೆಗಳ ಆವಾಸ ಸ್ಥಾನವಾಗಿರುವ ಚಾಮುಂಡಿಬೆಟ್ಟದಿಂದ ಬಂದ ಚಿರತೆ ಮೃಗಾಲಯದಲ್ಲಿ ಕಾಣಿಸಿಕೊಂಡು ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರ ಅಚ್ಚರಿಕೆ ಕಾರಣವಾಯಿತು. ಸೆರೆಸಿಕ್ಕಿದ ಚಿರತೆ ಮೃಗಾಲಯದ ಬದಲು ಅಕ್ಕಪಕ್ಕದ ಜನವಸತಿ ಪ್ರದೇಶಕ್ಕೆ ನುಗ್ಗಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಹೊರಹೋದ ಪ್ರವಾಸಿಗರು: ಚಿರತೆ ಮೃಗಾಲಯಕ್ಕೆ ನುಗ್ಗಿರುವ ವಿಷಯ ಗೊತ್ತಾಗುವ ಹೊತ್ತಿಗೆ ನೂರಾರು ಪ್ರವಾಸಿಗರು ಮೃಗಾಲಯ ವೀಕ್ಷಣೆಗೆಂದು ಪ್ರವೇಶಿಸಿದ್ದರು. ಆದರೆ, ಮೃಗಾಲಯದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು- ಸಿಬ್ಬಂದಿ ಪ್ರವಾಸಿಗರ ಮನವೊಲಿಸಿ, ಅವರನ್ನು ಹೊರ ಕಳುಹಿಸಿದರು. ಸತತ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿದ ನಂತರ ಪ್ರವಾಸಿಗರಿಗೆ ಎಂದಿನಂತೆ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಯಿತು.
ಕಾರಂಜಿಕೆರೆ ಬಳಿಯ ಗೇಟ್‌ನಿಂದ ಚಿರತೆ ಒಳ ಬಂದಿರಬಹುದು…
ಮೈಸೂರು: ಮೈಸೂರು ಮೃಗಾಲಯದಲ್ಲಿ ಮರ ಏರಿ ಮಲಗಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಗುರುವಾರ ಬೆಳಗ್ಗೆ ಮೃಗಾಲಯದ ಸಿಬ್ಬಂದಿ ಪ್ರಾಣಿಗಳಿಗೆ ಮೇವು ನೀಡುವ ವೇಳೆ ತಿರುಗಾಟದಲ್ಲಿದ್ದಾಗ ಮರದ ಮೇಲೆ ಚಿರತೆ ಮಲಗಿರುವುದು ಕಾಣಿಸಿದೆ.
ಕೂಡಲೇ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಅರವಳಿಕೆ ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಡೆಗೂ ಅಂದಾಜು 3 ವರ್ಷ ವಯಸ್ಸಿನ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ನಿರ್ಬಂಧ: ಮೃಗಾಲಯ ವೀಕ್ಷಣೆಗೆ ಬೇರೆ ಬೇರೆ ರಾಜ್ಯಗಳಿಂದ ಬೆಳಗ್ಗೆಯೇ ನೂರಾರು ಪ್ರವಾಸಿಗರು ಆಗಮಿಸಿದ್ದರಾದರೂ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿತ್ತು. ಚಿರತೆ ಸೆರೆ ಹಿಡಿದ ನಂತರ ಎಂದಿನಂತೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಯಿತು.
ಸಾರ್ವಜನಿಕರ ಪ್ರವೇಶಕ್ಕೂ ಮೊದಲೇ ಚಿರತೆ ಪತ್ತೆಯಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು ಎಂದು ಮೃಗಾಲಯದ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಮೊದಲಿಗೆ ಮೃಗಾಲಯದ ಚಿರತೆಯೇ ಬೋನಿನಿಂದ ಹೊರಬಂದು ಮರ ಏರಿ ಮಲಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃಗಾಲಯದ ಚಿರತೆಗಳೆಲ್ಲಾ ಬೋನಿನಲ್ಲೇ ಇರುವುದು ಖಚಿತವಾದ ನಂತರ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು.
ಮೃಗಾಲಯದ ಹಿಂಭಾಗದ ಕಾರಂಜಿಕೆರೆ ಬಳಿಯ ಗೇಟ್ ಮೂಲಕ ಈ ಚಿರತೆ ಒಳ ಬಂದಿರಬಹುದು ಎನ್ನಲಾಗುತ್ತಿದ್ದು, ಹೊರಗಿನ ಪ್ರಾಣಿಗಳು ಮೃಗಾಲಯದ ಒಳ ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.