ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ!


Team Udayavani, Oct 27, 2017, 4:44 PM IST

manu—anoosha.jpg

ತನ್ನ ಪಾಡಿಗೆ ತಾನು ಬೈಕ್‌ನಲ್ಲಿ ಬರುತ್ತಿರುತ್ತಾನೆ ಅವನು. ತಕ್ಷಣ ಅವನಿಗೇನೋ ಅನಿಸುತ್ತದೆ. ಯಾರದೋ ತಲೆಯ ಮೇಲೆ ಒಂದು ಮೂಟೆ ಬೀಳುತ್ತಿದ್ದಂತೆ, ತಾನು ಅವನನ್ನು ರಕ್ಷಿಸುತ್ತಿದ್ದಂತೆ ಸ್ವಪ್ನ ಬಿದ್ದ ಹಾಗಾಗುತ್ತದೆ. ಅದಾಗಿ ಎರಡು ನಿಮಿಷಗಳ ನಂತರ ಅದೇ ಘಟನೆ ಜರುಗತ್ತದೆ. ಇನ್ನೊಮ್ಮೆ ನಿದ್ದೆ ಮಾಡುವಾಗ, ದೊಡ್ಡ ಬಾಕ್ಸ್‌ನಲ್ಲಿ ಹಾವಿದೆ ಎಂದು ಕನಸು ಬೀಳುತ್ತದೆ. ತಕ್ಷಣ ಎದ್ದು ಅದೇ ಸ್ಪಾಟ್‌ಗೆ ಹೋದರೆ ಅಲ್ಲೊಂದು ಬಾಕ್ಸ್‌ ಇರುತ್ತದೆ.

ಅದನ್ನು ತೆಗೆದು ನೋಡಿದರೆ, ಹಾವು ಮಾತ್ರ ಇರುವುದಿಲ್ಲ. ಆದರೆ, ಅಲ್ಲೊಂದು ಹಾವಿದ್ದ ಕುರುಹು ಸ್ಪಷ್ಟವಾಗುತ್ತದೆ. ಮತ್ತೂಮ್ಮೆ ಆಫೀಸಿನಲ್ಲಿ ಕೆಲಸ ಮಾಡುವಾಗ, ಆಫೀಸ್‌ ಬಾಯ್‌ ಬಂದು ಇವತ್ತು ಕಾಫಿ ಇಲ್ಲ, ಅದರ ಬದಲು ಟೀ ಇದೆ ಎಂದು ಹೇಳುತ್ತಾನೆ ಎಂದು ಹೇಳಿದಂತಾಗುತ್ತದೆ. ತಕ್ಷಣ ಅದನ್ನೇ ಹೇಳಿಬಿಡುತ್ತಾನೆ. ಎಲ್ಲರೂ ಹುಚ್ಚು ಅನ್ನಿತಿರುವಾಗಲೇ ಆಫೀಸ್‌ ಬಾಯ್‌ ಬಂದು ಕಾಫಿ ಇಲ್ಲ ಎಂದು ಕೈಯಾಡಿಸುತ್ತಾನೆ. 

ಅಲ್ಲಿಗೆ ಅವನಿಗಷ್ಟೇ ಅಲ್ಲ, ಆತನಿಗೆ ಮುಂದೇನಾಗುತ್ತದೆ ಎಂದು ಮೊದಲೇ ಗೊತ್ತಾಗಿಬಿಡುತ್ತದೆ ಎಂದು ಸ್ಪಷ್ಟವಾಗುತ್ತದೆ. ಆ ತರಹ ಗೊತ್ತಾಗುವುದರಿಂದ ಅವನಲ್ಲಿ ಭಯ, ಆತಂಕ ಎರಡೂ ಹೆಚ್ಚಾಗುತ್ತದೆ. ಮನೋವೈದ್ಯರ ಹತ್ತಿರ ಹೋದರೆ ಹೆದರುವ ಅವಶ್ಯಕತೆ ಇಲ್ಲ, ಎಲ್ಲ ಸರಿ ಹೋಗುತ್ತದೆ ಎನ್ನುತ್ತಾರೆ. ಆದರೆ, ಅವನಿಗೆ ಮಾತ್ರ ಆತಂಕ, ಭಯ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟರಲ್ಲೇ ಅದೊಂದು ರಾತ್ರಿ ಆ ಭಯಾನಕ ಘಟನೆ ನಡೆದು ಹೋಗುತ್ತದೆ.

ಆ ಭಯಾನಕ ಘಟನೆ ಏನು ಎಂಬ ಕುತೂಹಲವಿದ್ದರೆ ಚಿತ್ರ ನೋಡಬೇಕು. ಕನ್ನಡದ ಮೊದಲ ಸಿಕ್ಸ್ತ್ ಸೆನ್ಸ್‌ನ ಸಿನಿಮಾ ಎಂಬ ಹೆಗ್ಗಳಿಕೆ ಹೊತ್ತು ಬಿಡುಗಡೆಯಾದ ಸಿನಿಮಾ “ಮೋಜೋ’. ಮನುಷ್ಯನಲ್ಲಿ ಆರನೇ ಇಂದ್ರೀಯ ಜಾಗೃತವಾದರೆ ಏನಾಗುತ್ತದೆ ಎಂಬ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಶ್ರೀಶ ಬೆಳಕವಾಡಿ. ಆದರೆ, ಅದನ್ನು ಹೇಳುವ ನಿಟ್ಟಿನಲ್ಲಿ ಒಂದಿಷ್ಟು ವಿಷಯಗಳನ್ನು ಸೇರಿಸುತ್ತಾರೆ.

ಸೇರಿಸುತ್ತಾ ಸೇರಿಸುತ್ತಾ ಚಿತ್ರ ಎಲ್ಲಿಯೋ ಸಾಗುತ್ತದೆ. ಮೊದಲು ಆರನೇ ಇಂದ್ರೀಯ ಅಂತನಿಸಿದರೂ, ನಂತರ ಅದು ಕಲ್ಪನೆ ಇರಬಹುದಾ, ಭ್ರಮೆಯಾ, ಕನಸಾ, ದೆವ್ವದ ಚೇಷ್ಟೆಯಾ, ಷಡ್ಯಂತ್ರವಾ, ಮಾನಸಿಕ ಅಸಮತೋಲನವಾ ಅಥವಾ ಯಾರೋ ಮಾಡಿದ ಕಪಟ ನಾಟಕವಾ … ಹೀಗೆ ನೂರೆಂಟು ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಾ ಹೋಗುತ್ತದೆ. ಹೀಗೆ ಎಲ್ಲವೂ ಕಲಸುಮೇಲೋಗರವಾಗಿ ಚಿತ್ರ ಹೇಗೋ ಮುಗಿದು ಹೋಗುತ್ತದೆ.

ಚಿತ್ರ ಮುಗಿದ ಮೇಲೂ ಈ ಪ್ರಶ್ನೆಗಳು ಪ್ರೇಕ್ಷಕನ ತಲೆಯಲ್ಲಿ ಗುಂಯ್‌ಗಾಟ್ಟುತ್ತಿರುತ್ತದೆ. ಆ ನಿಟ್ಟಿನಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ, ಮನರಂಜನೆ ನಿರೀಕ್ಷಿಸುವವರಿಗೆ ಸಿನಿಮಾ ಅಷ್ಟು ಬೇಗ ಅರ್ಥವಾಗುವುದು ಕಷ್ಟ. ಹಾಗಾಗಿ ಇದೊಂದು ಅಪ್ಪಟ ಬುದ್ಧಿವಂತರ ಚಿತ್ರ ಎಂದು ಕರೆಯಬಹುದು. ಬುದ್ಧಿವಂತಿಕೆಯೊಂದಷ್ಟೇ ಅಲ್ಲ, ಸ್ವಲ್ಪ ತಾಳ್ಮೆಯೂ ಬೇಕು. ಏಕೆಂದರೆ, ಚಿತ್ರಕ್ಕೆ ಸ್ಪಷ್ಟ ರೂಪ ಬರುವುದೇ ಕೊನೆಯಲ್ಲಿ.

ಅಲ್ಲಿಯವರೆಗೂ ನಾಯಕ ಅದೆಷ್ಟು ಗೊಂದಲಕ್ಕೊಳಗಾಗಿರುತ್ತಾನೋ, ಪ್ರೇಕ್ಷಕನದ್ದೂ ಅದೇ ಪಾಡು. ಬುದ್ಧಿವಂತಿಕೆ ಮತ್ತು ತಾಳ್ಮೆ ಎರಡೂ ಇದ್ದರೆ ಚಿತ್ರ ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭವ ಕೊಡುವುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಒಂದೊಂದು ಘಟನೆ ನಡೆದಾಗಲೂ ಚಿತ್ರಕ್ಕೊಂದು ಹೊಸ ಟ್ವಿಸ್ಟ್‌ ಸಿಗುತ್ತಾ ಹೋಗುತ್ತದೆ. ಹೊಸ ಟ್ವಿಸ್ಟ್‌ ಸಿಗುತ್ತಿದ್ದಂತೆ ಚಿತ್ರ ಹೀಗಿರಬಹುದಾ ಎಂದನಿಸುತ್ತದೆ.

ಹಾಗಾಗಿ ಸಂಪೂರ್ಣವಾಗಿ ಅರ್ಥವಾಗುವುದಕ್ಕೆ, ಚಿತ್ರ ಮುಗಿಯುವವರೆಗೂ ಕಾಯಬೇಕು. ಹಾಗೆ ಅರ್ಥವಾಗಿಬಿಟ್ಟರೆ, ಬುದ್ಧಿವಂತ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. “ಮೋಜೋ’ ಚಿತ್ರದಲ್ಲಿ ಕೆಲವೇ ಪಾತ್ರಗಳಿವೆ. ಆ ಪೈಕಿ ಶ್ರೀನಾಥ್‌ ವಸಿಷ್ಠ ಬಿಟ್ಟರೆ, ಎಲ್ಲರೂ ಹೊಸಬರು. ಆ ಪೈಕಿ ಗಮನಸೆಳೆಯುವುದು ಮನು ಮತ್ತು ಅನೂಷಾ ಇಬ್ಬರೇ. ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ, ಚಿತ್ರಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಖುಷಿ ಕೊಡುತ್ತದೆ.

ಚಿತ್ರ: ಮೋಜೋ
ನಿರ್ದೇಶನ: ಶ್ರೀಶ ಬೆಳಕವಾಡಿ
ನಿರ್ಮಾಣ: ಗಜಾನನ ಭಟ್‌
ತಾರಾಗಣ: ಮನು, ಅನೂಷಾ, ಸಂದೀಪ್‌ ಶ್ರೀಧರ್‌, ನಂದನ್‌ ಜಾಂಟಿ, ಸ್ಮಿತಾ ಕುಲಕರ್ಣಿ ಮುಂತಾದವರು 

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.