ಲಕ್ಷ್ಮೇಶ್ವರದ ಸ್ವಯಂಭೂ ಸೋಮೇಶ್ವರ ದೇವಾಲಯ
Team Udayavani, Oct 28, 2017, 3:55 AM IST
ಉಳಿದೆಲ್ಲ ಕಡೆಗಳಲ್ಲೂ ಶಿವನು ಲಿಂಗರೂಪಿಯಾಗಿದ್ದರೆ, ಲಕ್ಷ್ಮೇಶ್ವರದ ಸ್ವಂಯಭೂ ಸೋಮೇಶ್ವರನ ದೇವಾಲಯದ ಗರ್ಭಗುಡಿಯಲ್ಲಿ ವೃಷಭಾರೂಢನಾಗಿ ಪಾರ್ವತಿಯೊಂದಿಗಿರುವ ಶಿವನ ಮೂರ್ತಿ ಇದೆ.
ದೇವಾಲಯಗಳ ತವರು ಎಂದೇ ಖ್ಯಾತವಾದ ಲಕ್ಷ್ಮೇಶ್ವರದಲ್ಲಿ ಸುಮಾರು 50ಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಸ್ವಯಂಭೂ ಸೋಮೇಶ್ವರ ದೇವಾಲಯ. ಈ ಪ್ರದೇಶವನ್ನು 10ನೇ ಶತಮಾನದಲ್ಲಿ ಆಳುತ್ತಿದ್ದ ಸರ್ವೇಶ್ವರನೆಂಬ ಮಾಂಡಲಿಕ ತನಗೆ ಮಗ ಹುಟ್ಟಿದಾಗ ಪುತ್ರೋತ್ಸವದ ಸಂಭ್ರಮದಲ್ಲಿ ಚಾಲುಕ್ಯರ ಮಾದರಿಯಲ್ಲಿ ಸ್ವಯಂಭೂ ಸೋಮೇಶ್ವರ ದೇವಾಲಯವನ್ನು ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ. ಅಂದಿನಿಂದ ಸೋಮೇಶ್ವರ ಮಾಂಜರ ಕುಲದೇವತೆಯಾಗಿ ಇಲ್ಲಿ ಪೂಜೆಗೊಳ್ಳುತ್ತಿದ್ದಾನೆ ಎಂದು ಐತಿಹ್ಯ ಹೇಳುತ್ತದೆ. ಚಾಲುಕ್ಯರ ವಾಸ್ತುವೈಭವಕ್ಕೆ ಸಾಕ್ಷಿಯಾಗಿರುವ ಸೋಮೇಶ್ವರ ದೇವಾಲಯ ಭವ್ಯವಾಗಿದ್ದು ನೃತ್ಯಮಂಟಪ, ಸಭಾಮಂಟಪ, ಪೌಳಿ, ಘಟಿಕಾಸ್ಥಳ ಪೂರ್ವಕ್ಕಿರುವ ಮಹಾದ್ವಾರ ಹಾಗೂ ಅದರ ಮುಂದಿರುವ ಎಡಬಲಗಳಲ್ಲಿರುವ ಚಂದ್ರಶಾಲೆ ಎಲ್ಲವೂ ಅಪೂರ್ವವಾಗಿವೆ.
ದೇವಾಲಯದ ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಮಹಾದ್ವಾರ ಗಳಿವೆ. ದೇಗುಲದ ಸುತ್ತ ಕಲ್ಲಿನ ಕೋಟೆ ಇದ್ದು ದೇಗುಲದ ಇಕ್ಕೆಲಗಳಲ್ಲಿ ಚಂದ್ರಶಾಲೆ ಗಳಿವೆ. ಮಾಘ ಮಾಸದಲ್ಲಿ ಬೆಳಗಿನ ಹೊತ್ತು ಸೂರ್ಯಕಿರಣಗಳು ದೇವರ ಮೇಲೆ ಬೀಳುವಂತೆ ನಿರ್ಮಿಸಿರುವ ವಾಸ್ತು ಶಿಲ್ಪಿ ಗಳ ವೈಜ್ಞಾನಿಕ ಕಲ್ಪನೆ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಈ ದೇವಸ್ಥಾನದ ಸುತ್ತಲೂ ಪಂಚಲಿಂಗಗಳ ಚಿಕ್ಕ ಗುಡಿಗಳಿದ್ದು, ಸೋಮೇಶ್ವರ ದೇವಾಲಯದ ಭವ್ಯತೆ ಯನ್ನು ನೂರ್ಮಡಿಗೊಳಿಸಿವೆ. ಇಲ್ಲಿನ ಗರ್ಭಗೃಹದಲ್ಲಿ ಶಿವನ ಲಿಂಗರೂಪದ ಬದಲು ವೃಷಭಾರೂಢನಾಗಿ ಪಾರ್ವತಿಯ ಸಮೇತ ನೆಲೆಸಿದ್ದಾನೆ. ಇಲ್ಲಿ ಶಿವನ ಮೂರ್ತಿಗೆ ಪೂಜೆ ನಡೆಯುವುದು ವಿಶೇಷ. ನಂದಿಯ ಮೇಲೆ ಕುಳಿತ ಪಾರ್ವತಿ ಪರಮೇಶ್ವರರ ವಿಗ್ರಹ ಅತ್ಯಾಕರ್ಷಕವಾಗಿದ್ದು, ಮಾಘ ಮಾಸ ದಲ್ಲಿ ರಥೋತ್ಸವ ನಡೆಯುತ್ತದೆ. ಸಂಪೂರ್ಣ ವಾಗಿ ಕಲಾಕೌಶಲ್ಯದಿಂದ ಕೂಡಿದ ದೇವಾಲಯದಲ್ಲಿ 10ಕ್ಕೂ ಹೆಚ್ಚು ಕಲ್ಲಿನ ಕಂಬಗಳಿವೆ. ನುಣುಪಾದ ಗ್ರಾನೈಟ ಶಿಲೆಯ ಈ ಕಂಬಗಳು ದರ್ಪಣದೋಪಾದಿಯಲ್ಲಿ ಪ್ರತಿಫಲಿಸುತ್ತವೆ.
ಹಿಂದೆ ಇದೊಂದು ಪ್ರಮುಖ ವಿದ್ಯಾಕೇಂದ್ರವಾಗಿತ್ತೆಂದೂ ಇತಿಹಾಸ ಕಾರರು ಅಭಿಪ್ರಾಯ ಪಟ್ಟಿದ್ದಾರೆ. ಗುಡಿಯ ಹಿಂಭಾಗದಲ್ಲಿ 10ಅಡಿ ಆಳದ ಮೆಟ್ಟಿಲುಗಳಿರುವ ದೊಡ್ಡ ಬಾವಿಯಿದ್ದು ಇದನ್ನು ಗೌರಿ ಎಂಬಾಕೆ ಕಟ್ಟಿಸಿದಳೆಂದು ಶಾಸನಗಳಿಂದ ತಿಳಿದುಬರುತ್ತದೆ. ದೇವಾ ಲಯದ ಪುರಾತತ್ವ ಇಲಾಖೆಯ ವ್ಯಾಪ್ತಿಗೊಳಪಟ್ಟಿದೆ. ದೇಶದ ಪ್ರಮುಖ ನಗರಗಳಿಂದ ಧಾರವಾಡ ನಗರಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಇದ್ದು ಇಲ್ಲಿಂದ ಲಕ್ಷ್ಮೇಶ್ವರಕ್ಕೆ ಕೇವಲ 7 ಕಿ.ಮೀ ಪ್ರಯಾಣಿಸಿದರೆಲಕ್ಷ್ಮೇಶ್ವರ ಸಿಗುತ್ತದೆ. ಅಲ್ಲಿ ಹೋದರೆ ಈ ದೇವಾಲಯವನ್ನು ಸಂದರ್ಶಿಸಬಹುದಾಗಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.