ಲಾಳ ಕಟ್ಟುವವರ ಬದುಕಿನ ಕಥೆ-ವ್ಯಥೆ
Team Udayavani, Oct 28, 2017, 4:00 AM IST
ಲಾಳ ಕಟ್ಟುವವರು ಹೆಚ್ಚಾಗಿ ಸೋಮವಾರದಂದೇ ಈ ಕೆಲಸ ಮಾಡುತ್ತಾರೆ. ಏಕೆಂದರೆ ಸೋಮವಾರದಂದು ಬಸವಣ್ಣನ ವಾರವೆಂದು ರೈತರಿಗೆ ಮತ್ತು ಎತ್ತುಗಳಿಗೆ ರಜೆಯ ದಿನವಾಗಿರುತ್ತದೆ. ಲಾಳ ಕಟ್ಟುವವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದಾಗಿ ಎತ್ತುಗಳ ಬಳಕೆ ಕಡಿಮೆಯಾಗಿರುವುದು, ಲಾಳ ಕಟ್ಟುವವರಿಗೆ ಬೇಡಿಕೆಯೇ ಇಲ್ಲದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಚಪ್ಪಲಿಗಳ ವಿಷಯದಲ್ಲಿ ನಮ್ಮ ಪೂರ್ವಿಕರು ಜಾಣರು, ಅವರು ಚಪ್ಪಲಿಯ ಮಹತ್ವವನ್ನು ಎಷ್ಟು ಚೆನ್ನಾಗಿ ಅರಿತಿದ್ದರು. ಏಕೆಂದರೆ, ಸಾವಿರಾರು ರೂಪಾಯಿಯನ್ನು ಖರ್ಚು ಮಾಡಿ ಚಪ್ಪಲಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ, ತಾವು ಬರಿಗಾಲಿನಲ್ಲಿ ಇದ್ದರೂ ಸಹ ಅನಾದಿಕಾಲದಿಂದಲೂ ಎತ್ತುಗಳ ಕಾಲಿಗೆ ಲಾಳಗಳನ್ನು ಹಾಕಿಸುತ್ತಿ¨ªಾರೆ. ಈ ಲಾಳಗಳು ಎತ್ತುಗಳಿಗೆ ಮತ್ತು ಕುದುರೆಗಳ ಪಾಲಿಗೆ ಚಪ್ಪಲಿಗಳೇ. ಚಪ್ಪಲಿಗಳು ನಮ್ಮ ಪಾದಗಳನ್ನು ಸಂರಕ್ಷಿಸುತ್ತವಲ್ಲ; ಅದೆ ರೀತಿ ಪ್ರಾಣಿಗಳ ಕೊಳಗವನ್ನು (ಗೊರಸು) ಲಾಳಗಳು ಸಂರಕ್ಷಿಸುತ್ತವೆ.
ಗಮನಿಸಿ. ಲಾಳ ಕಟ್ಟುವವರು ಹೆಚ್ಚಾಗಿ ಸೋಮವಾರದಂದೇ ಈ ಕೆಲಸ ಮಾಡುತ್ತಾರೆ. ಏಕೆಂದರೆ ಸೋಮವಾರದಂದು ಬಸವಣ್ಣನ ವಾರವೆಂದು ರೈತರಿಗೆ ಮತ್ತು ಎತ್ತುಗಳಿಗೆ ರಜೆಯ ದಿನವಾಗಿರುತ್ತದೆ. ಲಾಳ ಕಟ್ಟುವವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದಾಗಿ ಎತ್ತುಗಳ ಬಳಕೆ ಕಡಿಮೆ ಯಾಗಿರುವುದು ಲಾಳ ಕಟ್ಟುವವರಿಗೆ ಬೇಡಿಕೆಯೇ ಇಲ್ಲದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ನಾಲ್ಕು ಐದು ತಲೆಮಾರಿನಿಂದ ಲಾಳ ಕಟ್ಟುವ ವೃತ್ತಿಯನ್ನು ನಂಬಿ ಬದುಕುತ್ತಿರುವರು ಧಾರವಾಡದ ಇಮ್ಮಾಮಸಾಬ… ಮಾಭೂಸಾಬ… ನಾಲಬಂದ್‌ಗೆ ಬದುಕು ಕಷ್ಟವೇ ಆಗಿದೆ. ಲಾಳ (ನಾಲ) ಬಡಿಯುವ ವೃತ್ತಿಯಿಂದಾಗಿ ಇವರ ಅಡ್ಡ ಹೆಸರು ಸಹ ನಾಲ ಬಂದ್ ಎಂದಾಗಿದೆ. ನಾಲ ಬಡಿಯುವರಿಗೆ ನಾಲಮನ್, ನಾಲಬಂದ್, ನಾಲ ಕಟ್ಟುವಾತ ಎಂದು ಹಳ್ಳಿವಾಡದಲ್ಲಿ ಇಂದಿಗೂ ಕರೆಯುತ್ತಾರೆ.
ಎತ್ತುಗಳ ಕೋಡಿಗೆ ಹಗ್ಗ ಹಾಕಿ, ಹಗ್ಗವನ್ನು ಹೊಟ್ಟೆ ಸುತ್ತ ಏರಿಸಿ, ಎತ್ತನ್ನು ಮಕಾಡೆ ಕೆಡಗುವುದರಲ್ಲಿ ಎತ್ತಿದ ಕೈ ಮಾಭೂಸಾಬರದ್ದು. ಎತ್ತಿನ ಯಜಮಾನ ಮೂಗು ದಾರ ಹಿಡಿದುಕೊಂಡು ನಿಂತರೆ ಸಾಕು, ಮಿಕ್ಕದ್ದನ್ನು ನಾಲ್‌ವುನ್‌ಗಳು ನೋಡಿಕೊಳ್ಳುತ್ತಾರೆ.
ಹೊಲ, ಮನೆಯ ಕೆಲಸದಲ್ಲಿ ಹೆಚ್ಚು ಬಳಸುವುದರಿಂದ ಮತ್ತು ಟಾರ್‌ರೋಡ್ ನಲ್ಲಿ ಸಂಚರಿಸುವಾಗ ಎತ್ತುಗಳ ಕಾಲಿನಲ್ಲಿರುವಂಥ ಕೊಳಗದ ಘರ್ಷಣೆಯಿಂದಾಗಿ ಸವಕಳಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಕೆಲವು ಎತ್ತುಗಳು ಕಾಲನ್ನು ಎಳೆಯುವುದರಿಂದಲೂ ಹೀಗೆ ಆಗುತ್ತದೆ. ಈ ಸವಕಳಿಯಿಂದ ರಕ್ತಸ್ರಾವ ಉಂಟಾಗಿ ಎತ್ತುಗಳು ನಡೆಯಲಾಗದೆ ತೊಂದರೆ ಅನುಭವಿಸುತ್ತವೆ. ಆದರಿಂದ ಈ ಗೊರಸುಗಳ ಸವಕಳಿ ತಪ್ಪಿಸಲು ಮತ್ತು ರಕ್ಷಣೆಗೆಂದು ಎರಡು ತಿಂಗಳಿಗೊಮ್ಮೆಯಾದರೂ, ರೈತರು ಎತ್ತುಗಳಿಗೆ ಈ ಲಾಳವನ್ನು ಬಡಿಸುತ್ತಾರೆ. ಎತ್ತುಗಳಿಗೆ ಹಾಕುವ ಲಾಳಕ್ಕೂ ಕುದುರೆಗೆ ಹಾಕುವ ಲಾಳಕ್ಕೂ ವ್ಯತ್ಯಾಸವಿದೆ.
ಎತ್ತಿನ ಕೊಳಗವು ಎರಡು ಭಾಗವಾಗಿ ಹೋಳಾಗಿರುವುದರಿಂದ ಲಾಳವು ಅರ್ಧ ಚಂದ್ರಾ ಕೃತಿಯಲ್ಲಿರುತ್ತವೆ. ಕುದುರೆಗೆ ಇಂಗ್ಲೀಷನ್ ಯು ಆಕಾರದ ಲಾಳವನ್ನು ಬಡಿಯುತ್ತಾರೆ. ಕುದುರೆಗಳು ಲಾಳ ಇಲ್ಲದೆ ಓಡುವುದು ಕಷ್ಟಕರ, ಅಲ್ಲದೆ ಕುದುರೆ ನಿಂತುಕೊಂಡೇ ಇರುವುದರಿಂದ ಖುರಪುಟದ ಸವಕಳಿಯಾಗದಂತೆ ತಡೆಯಲು ಲಾಳಗಳು ಸಹಕಾರಿಯಾಗಿವೆ.
ಕುಸುರಿ ಕೆಲಸದಷ್ಟೇ ನಾಜೂಕು
ನಮಗೆ ಉಗುರು ಇರುವಂತೆ ಎತ್ತುಗಳಿಗೆ ಗೊರಸುಗಳಿರುತ್ತವೆ. ಉಗುರು ಕಣ್ಣಿನ ಭಾಗದಲ್ಲಿ ಚರ್ಮ ಮತ್ತು ಉಗುರು ಬೇರ್ಪಟ್ಟ ಉಗುರು ಮುಂದೆ ಬೆಳದು ಬರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಎತ್ತಿನ ಗೊರಸು ಮಾಂಸಖಂಡದಿಂದ ಹೆಚ್ಚಿಗೆ ಬೆಳೆದು ಬಂದಂಥ ಭಾಗದ ತಳಕ್ಕೆ ಲಾಳವನ್ನು ಇಟ್ಟು ಓರೆಯಾಗಿ ಮೊಳೆಯನ್ನು ಹೊರ ಬರುವಂತೆ ಬಡಿಯಲಾಗುತ್ತದೆ. ಈ ಮೊಳೆಗಳು ವಿಶೇಷ ರೀತಿಯ ವಿನ್ಯಾಸವನ್ನು ಹೊಂದಿರುತ್ತವೆ. ಖಂಡಕ್ಕೆ ಹತ್ತದಂತೆ ನಾಜೂಕಿನಿಂದ ಮೊಳೆಯನ್ನು ಹೊಡೆಯಬೇಕು. ಮೊದಲ ಬಾರಿ ಲಾಳ ಹಾಕಿದಾಗ ಎತ್ತುಗಳಿಗೆ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಂತರದಲ್ಲಿ ಅದು ರೂಢಿಯಾಗುವುದು.
ಆಧುನಿಕತೆಯ ಕರಿ ಛಾಯೆ.
ಜಗತ್ತು ಆಧುನಿಕತೆಯತ್ತ ಸಾಗುತ್ತಿದಂತೆ ರೈತರು ಸಹ ಬದಲಾಗುತ್ತಿ¨ªಾರೆ. ಇದರಿಂದಾಗಿ ಈಗ ಎತ್ತುಗಳ ಅನಿವಾರ್ಯತೆ ಕಡಿಮೆಯಾಗುತ್ತಿದೆ. ಈ ಹಿಂದೆ ಬೆಳಗ್ಗೆಯಿಂದ ಸಂಜೆಯವರೆಗೂ ಲಾಳ ಕಟ್ಟಿಸಲು ಎತ್ತುಗಳು ಸರದಿ ಸಾಲಿನಲ್ಲಿ ನಿಲ್ಲಿಸುತ್ತಿದ್ದರು. ಆದರೆ ಈಗ ಲಾಳ ಕಟ್ಟಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
ಈರನ ಗೌಡ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.