ಕಾರವಾರ ಬಂದರು ಅಭಿವೃದ್ಧಿಗೆ ಕೇಂದ್ರದಿಂದ 50 ಕೋಟಿ ಬಿಡುಗಡೆ
Team Udayavani, Oct 28, 2017, 9:43 AM IST
ನವದೆಹಲಿ: ಜಲಮಾರ್ಗಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ “ಸಂಗ್ರಾಮ ಕೋಸ್ಟಲ್ ಬರ್ತ್’ ಯೋಜನೆ ಅಡಿಯಲ್ಲಿ ಜವಾಹರಲಾಲ್ ನೆಹರು ಟ್ರಸ್ಟ್ (ಜೆಎನ್ಪಿಟಿ) ಹಾಗೂ ಕಾರವಾರ ಬಂದರು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಂದರು ಸಚಿವಾಲಯ, ಜೆಎನ್ಪಿಟಿಗೆ 25 ಕೋಟಿ ರೂ.ಹಾಗೂ ಕರ್ನಾಟಕದ ಪ್ರಮುಖ ಬಂದರುಗಳಲ್ಲಿ ಒಂದಾದ ಕಾರವಾರ ಬಂದರಿಗೆ 50 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಮುಖ ಕರಾವಳಿ ಅಭಿವೃದ್ಧಿ ಯೋಜನೆಯಾದ “ಸಂಗ್ರಾಮ’ದ ಅಡಿಯಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸರಕು ಪೂರೈಕೆಗೆ ಅನುಕೂಲವಾಗುವಂತೆ ಬಂದರುಗಳನ್ನು ಅಭಿವೃದ್ಧಿಪಡಿಸುವ ಹಾಗೂ ಬಂದರು ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಯೋಜನೆಯ ಶೇ.50ರಷ್ಟನ್ನು ಕೇಂದ್ರ ನೀಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಕಡಲ್ಕೊರೆತ ತಡೆಗೆ ಎಡಿಬಿ ಒಪ್ಪಂದ
ಕರ್ನಾಟಕದ ಪಶ್ಚಿಮ ಕರಾವಳಿ ಭಾಗದ ಕಡಲ್ಕೊರೆತ ಪರಿಶೀಲನೆಗೆ ಹಾಗೂ ತಡೆಗಟ್ಟುವ ಯೋಜನೆಗೆ ಸಂಬಂಧಿಸಿದಂತೆ “ದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ)’ ಭಾರತದ ಜತೆ 65.5 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡುವುದಕ್ಕೂ ಕೆಲವೇ ದಿನ ಮೊದಲು ಈ ಒಪ್ಪಂದ ಏರ್ಪಟ್ಟಿದೆ. ಕಡಲ್ಕೊರೆತದಿಂದ ಆಗುತ್ತಿರುವ ಹಾನಿಗೆ ಕಡಿವಾಣ ಹಾಕಲು ಮಹತ್ವದ ಬೆಳವಣಿಗೆ ಇದಾಗಿದ್ದು, 250 ಮಿಲಿಯನ್ ಡಾಲರ್ ಯೋಜನೆಯ 2ನೇ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೆಂದು ಮೀಸಲಿರಿಸ ಲಾಗಿರುವ ಹಣವನ್ನು ಕೂಡಲೇ ವಿನಿಯೋಗಕ್ಕೆ ನೀಡಲಾಗುತ್ತದೆ. ಯಾವ ಭಾಗದಲ್ಲಿ ಹೆಚ್ಚೆಚ್ಚು ಹಾನಿಯಾಗಿದೆ ಎನ್ನುವುದರ ಅಧ್ಯಯನ ವರದಿ ಪಡೆದು, ಬಳಿಕ ತುರ್ತು ಎನಿಸಿದ ಭಾಗದ ಕಾಮಗಾರಿ ವಿನಿಯೋಗಕ್ಕೆ ಮಂಜೂರು ಮಾಡಲಾಗುವುದು. ಅಲ್ಲದೆ, ಕರ್ನಾಟಕದ ಲೋಕೋಪಯೋಗಿ ಕಾಮಗಾರಿ ಸೇರಿ, ಬಂದರು ಹಾಗೂ ಒಳನಾಡಿನ ನೀರು ಸರಬರಾಜಿಗೆ ಇದರಿಂದ ಬಲ ನೀಡುವುದು ನಮ್ಮ ಉದ್ದೇಶವೂ ಆಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.