ಪ್ರಧಾನಿ ಕಾರ್ಯಕ್ರಮಕ್ಕಾಗಿ ಬಾಡಿಗೆ ಕಾರುಗಳು ವಶಕ್ಕೆ
Team Udayavani, Oct 28, 2017, 10:59 AM IST
ಮಹಾನಗರ: ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಾವಲು ಪಡೆ ವಾಹನಗಳಾಗಿ ಖಾಸಗಿ ಹಾಗೂ
ಪ್ರವಾಸಿ ಕಾರುಗಳ ಆವಶ್ಯಕತೆ ಇದೆ. ಆದರೆ, ಸರಕಾರ ಖಾಸಗಿ ಹಾಗೂ ಪ್ರವಾಸಿ ಕಾರುಗಳ ಮಾಲಕರಿಗೆ ಬಾಡಿಗೆ ಸರಿಯಾಗಿ ನೀಡುವುದಿಲ್ಲ ಎಂಬ ನೆಪವೊಡ್ಡಿ ಕೆಲವರು ಬಾಡಿಗೆಗೆ ಮುಂದಾಗದ ಹಿನ್ನೆಲೆಯಲ್ಲಿ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಕೆಲವು ಪ್ರವಾಸಿ, ಬಾಡಿಗೆ ಕಾರುಗಳನ್ನು ವಶಪಡಿಸಿಕೊಂಡಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಅವರು ಸುಮಾರು 20 ಕಾರುಗಳನ್ನು ‘ಅಗತ್ಯ ಬಳಕೆ ಕಾಯ್ದೆ’ಯ
ನಿಯಮದಂತೆ ವಶಕ್ಕೆ ಪಡೆದು ಪ್ರಧಾನಿ ಕಾರ್ಯಕ್ರಮಕ್ಕೆ ಬಳಸಲು ವ್ಯವಸ್ಥೆ ಮಾಡಿದ್ದಾರೆ.
ಪ್ರಧಾನಿ ಆಗಮನ ಸಂದರ್ಭ ಬೆಂಗಾವಲು ವಾಹನಗಳಾಗಿ ಕೆಲವು ಇನೋವಾ ಹಾಗೂ ಇತರ ಕಾರುಗಳನ್ನು ಒದಗಿಸುವಂತೆ ಜಿಲ್ಲಾಡಳಿತವು ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಸೂಚಿಸಿತ್ತು. ಈ ಬಗ್ಗೆ ಆರ್‌ಟಿಒದಿಂದ ವಿವಿಧ ಕಾರುಗಳ
ಮಾಲಕರ ಸಂಘಕ್ಕೆ ಕರೆ ಮಾಡಿ ವಿಚಾರಿಸಿದಾಗ ಕೆಲವರು ನಿರಾಕರಿಸಿದ್ದಾರೆ. ಈ ಹಿಂದೆ ಸರಕಾರಿ ಓಡಾಟಕ್ಕೆಂದು
ಕಾರು ಬಾಡಿಗೆ ಪಡೆದು ಬಾಡಿಗೆ ಹಣ ದೊರೆಯುವಾಗ ಸಾಕಷ್ಟು ಸಮಯ ಆಗಿತ್ತು. ಸೂಕ್ತ ರೀತಿಯಲ್ಲಿ ಬಾಡಿಗೆ
ಕೂಡ ನೀಡುತ್ತಿಲ್ಲ. ಸಾಲ ಮಾಡಿ ವಾಹನ ಪಡೆದು ಮಾಸಿಕವಾಗಿ ಬ್ಯಾಂಕಿಗೆ ಪಾವತಿ ಮಾಡುವ ಕಾಲಕ್ಕೆ ಬಾಡಿಗೆ ಹಣವೇ ಆಧಾರವಾಗುತ್ತದೆ. ಆದರೆ, ಬಾಡಿಗೆ ಸೂಕ್ತ ಸಮಯದಲ್ಲಿ ದೊರೆಯದಿದ್ದರೆ ಕಷ್ಟವಾಗುತ್ತದೆ ಎಂದು ಆರೋಪಿಸಿ ಕೆಲವು ವಾಹನ ಮಾಲಕರು ಬಾಡಿಗೆ ಹೋಗಲು ನಿರಾಕರಿಸಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.