ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ತಾಲೀಮು


Team Udayavani, Oct 28, 2017, 11:06 AM IST

28-16.jpg

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಧರ್ಮಸ್ಥಳ ಹಾಗೂ ಉಜಿರೆಗೆ ಬರುವ ಹಿನ್ನೆಲೆಯಲ್ಲಿ ಭದ್ರತಾ ವಿಭಾಗದಿಂದ ಶುಕ್ರವಾರವೇ ತಾಲೀಮು ಆರಂಭವಾಗಿದೆ. ಎಸ್‌ಪಿಜಿ ಜತೆಗೆ ಪೊಲೀಸರು ಹಾಗೂ ಶ್ವಾನದಳ, ಬಾಂಬ್‌ ನಿಗ್ರಹ ದಳ, ನಕ್ಸಲ್‌ ನಿಗ್ರಹ ಪಡೆಯ ಸಿಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾವೇಶವನ್ನು ಉದ್ದೇಶಿಸಿ ಭಾಷಣದ  ಹಿನ್ನೆ°ಲೆಯಲ್ಲಿ ಪ್ರಧಾನಿ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಸ್ಥಳದಲ್ಲಿ ಬೀಡುಬಿಟ್ಟಿದೆ.

ಜರ್ಮನ್‌ ಮಾದರಿ ಚಪ್ಪರ
ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ (ಎಸ್‌ಪಿಜಿ) ಐಜಿ ಎಂ.ಪಿ. ಗುಪ್ತಾ ಸೇರಿದಂತೆ 11 ಅಧಿಕಾರಿಗಳ ತಂಡ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕಾರ್ಯಗಳನ್ನು ನಡೆಸುತ್ತಿದೆ. ವೇದಿಕೆ ನಿರ್ಮಾಣ ಕಾರ್ಮಿಕರ ಮೇಲೆ ನಿಗಾ ಇರಿಸಲು ಪೊಲೀಸರನ್ನು ನೇಮಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಕಾರ್ಮಿಕರು ಬೃಹತ್‌ ಜರ್ಮನ್‌ ಮಾದರಿ ಚಪ್ಪರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್‌ಗಳ ಸಹಾಯದಿಂದ ಬೃಹತ್‌ ತೊಲೆಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಮೈದಾನದ ಯಾವುದೇ ಮೂಲೆಯಲ್ಲಿ ಕುಳಿತರೂ ವೇದಿಕೆ ಹಾಗೂ ಅದರಲ್ಲಿದ್ದವರು ಸ್ಪಷ್ಟವಾಗಿ ಸಭಿಕರಿಗೆ ಕಾಣುವಂತಹ ವಿನ್ಯಾಸ ಮಾಡಲಾಗಿದೆ. ಇಲ್ಲಿನ ಕ್ಷಣ ಕ್ಷಣದ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಸ್‌ಪಿಜಿಯ ಅರವಿಂದ್‌ ತಿಳಿಸಿದ್ದಾರೆ.

ವಿಶೇಷ ವೇದಿಕೆ
100×30 ಅಡಿಯ ಮುಖ್ಯ ಸಭಾ ವೇದಿಕೆ ಚಪ್ಪರ. ಅದೊರಳಗೆ 40×30 ಅಡಿ ಕಾರ್ಯಕ್ರಮ ನಡೆಯುವ ವೇದಿಕೆ
ನಿರ್ಮಿಸಲಾಗುತ್ತಿದೆ. ವೇದಿಕೆಯ ಪಕ್ಕದಲ್ಲಿ ಎರಡು ಕಚೇರಿಗಳನ್ನು ತೆರೆಯಲಾಗುತ್ತದೆ. ಒಂದು ಪ್ರಧಾನಿಯವರಿಗಾಗಿ 20×20 ಅಡಿ ಚಪ್ಪರ ಹಾಗೂ ಇನ್ನೊಂದು ಪ್ರಧಾನಿ ಕಚೇರಿ(ಪಿಎಂಒ)ಗಾಗಿ 20×20 ಅಡಿ ಕಚೇರಿ ತೆರೆಯಲಾಗುತ್ತದೆ. ವೇದಿಕೆಯ ಬಳಿ ಬ್ಯಾಕ್‌ ಆಫೀಸ್‌, 60 ಅಡಿ ಅಂತರದಲ್ಲಿ ಡಿ ಜೋನ್‌ ನಿರ್ಮಿಸಲಾಗುತ್ತಿದೆ. ಅಲ್ಲಿ ಬ್ಯಾರಿಕೇಡ್‌ ಹಾಕಲಾಗುತ್ತದೆ. ವೇದಿಕೆಯ ಮುಂಭಾಗ ಪೆಂಡಾಲ್‌, ಬದಿಗಳಲ್ಲಿ ಹಾಕಲಾಗುವ ಪೆಂಡಾಗಳಲ್ಲಿ 35,000 ಆಸನಗಳನ್ನು ಹಾಕಲಾಗುತ್ತದೆ. ಮೈದಾನ ಪ್ರವೇಶಿಸಲು 5 ಪ್ರವೇಶ ದ್ವಾರಗಳು ಇರುತ್ತವೆ.

ದೇವಸ್ಥಾನದಲ್ಲಿ ಅರ್ಧ ತಾಸು
ಮೋದಿ ಅವರು ದೇವಸ್ಥಾನದಲ್ಲೇ ವಸ್ತ್ರ ಬದಲಿಸಿ ಅರ್ಧ ತಾಸು ಕಳೆಯಲಿದ್ದಾರೆ. 

ಹೆಗ್ಗಡೆ ಪರಿಶೀಲನೆ
ಕಾರ್ಯಕ್ರಮದ ಸಿದ್ಧತೆಗಳ ಕುರಿತು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಸ್ವತಃ ಪರಿಶೀಲನೆ ನಡೆಸಿದರು. ಸಭಾವೇದಿಕೆ ಸೇರಿದಂತೆ ಎಲ್ಲ ಕಡೆಗೆ ಭೇಟಿ ನೀಡಿದರು. ಡಾ| ಎಲ್‌.ಎಚ್‌. ಮಂಜುನಾಥ್‌, ಡಾ| ಬಿ. ಯಶೋವರ್ಮ ಇದ್ದರು.

ಪ್ರಥಮ ಪ್ರಧಾನಿ
ಪ್ರಧಾನಿ ಮೋದಿ ಅವರು ಧರ್ಮಸ್ಥಳ ಅಥವಾ ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡುತ್ತಿರುವ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಈ ಮೊದಲು ಇಂದಿರಾ ಗಾಂಧಿ ಅವರು 1977 ಹಾಗೂ 1980ರಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದಾಗ ಮಾಜಿಯಾಗಿದ್ದರು. 1991ರಲ್ಲಿ ರಾಜೀವ್‌ ಗಾಂಧಿ ಅವರು ಕೂಡ ಮಾಜಿ ಪ್ರಧಾನಿಯಾಗಿದ್ದಾಗಲೇ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಎಚ್‌.ಡಿ. ದೇವೇಗೌಡ ಅವರು ಕೂಡ ಮಾಜಿಯಾಗಿದ್ದಾಗಲೇ ಭೇಟಿ ನೀಡಿದವರು. 

ಪ್ರಧಾನಿ ಸಂಚಾರಕ್ಕೆ  4 ಹೆಲಿಕಾಪ್ಟರ್‌, ಕಾರು ಆಗಮನ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಂದ ಧರ್ಮಸ್ಥಳಕ್ಕೆ ತೆರಳಲು ವಾಯುಪಡೆಯ 4 ಹೆಲಿಕಾಪ್ಟರ್‌ಗಳು ಗುರುವಾರ ಮಂಗಳೂರಿಗೆ ಆಗಮಿಸಿವೆ. ಪ್ರಧಾನಿ ಅವರು ಪ್ರಯಾಣಿಸುವ ಹೆಲಿಕಾಪ್ಟರ್‌ ಅನ್ನು ಅವರ ಭದ್ರತಾ ಪಡೆ ಅಂತಿಮಗೊಳಿಸಲಿದೆ. 
ಪ್ರಧಾನಿ ಅವರು ಧರ್ಮಸ್ಥಳದಿಂದ ಉಜಿರೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಸ್ತೆ ಮೂಲಕ ತೆರಳಲಿದ್ದು, ಅದಕ್ಕಾಗಿ ವಿಶೇಷ ವಿನ್ಯಾಸದ ನಾಲ್ಕು ಕಾರುಗಳನ್ನು ಬುಧವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ವಾಯು ಪಡೆ ವಿಮಾನದ ಮೂಲಕ ಹೊಸದಿಲ್ಲಿಯಿಂದ ತರಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜತೆಗೆ ನಾಲ್ಕು ಹೆಲಿಕಾಪ್ಟರ್‌ ಮತ್ತು ಕಾರುಗಳಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ.

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.