ವಿದೇಶಿಯರಿಂದ ಭರತನಾಟ್ಯ
Team Udayavani, Oct 28, 2017, 11:46 AM IST
“ಕಲಾಸಂಪದ’ ನೃತ್ಯಸಂಸ್ಥೆಯ ಲಯ ಲಾಸ್ಯ ಲಹರಿ ವಾರ್ಷಿಕೋತ್ಸವ ಕಾರ್ಯಕ್ರಮದ ಎರಡನೆಯ ಭಾಗವಾಗಿ ರಸಾನುಭವ ಭರತನಾಟ್ಯ ಹಾಗೂ ಕಥಕ್ ಜುಗಲ್ಬಂದಿ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸ್ಪೇನ್ ದೇಶದ ಭರತನಾಟ್ಯ ನೃತ್ಯ ಕಲಾವಿದೆ ಮೋನಿಕಾ ಡಿ ಲ ಫುಂಟೆ ಅವರಿಂದ ಭರತನಾಟ್ಯ.
ಎ.ಕೆ.ರಾಮಾನುಜಂ ಅವರ “ವೆನ್ ಮಿರರ್ ಅರ್ ವಿಂಡೋಸ್’ ಕೃತಿಯ ಕಾವ್ಯಭಾಗಕ್ಕೆ ಗುಲ್ಲಿರ್ಮೋ ರೋಡ್ರಿಗ ದಂಪತಿಗಳ ನೃತ್ಯ ಪ್ರಸ್ತುತಿ ಹಾಗೂ ಸೋಮಶೇಖರ್ ಚೂಡಾನಾಥ್ ಮತ್ತು ಶ್ವೇತಾ ವೆಂಕಟೇಶ್ ಅವರಿಂದ ಕಥಕ್ ನೃತ್ಯದ ಜುಗಲ್ಬಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಐ.ಸಿ.ಸಿ.ಆರ್ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಏರ್ಪಡಿಸಲಾಗಿದೆ.
ಎಲ್ಲಿ?: ಕೆ.ಜಿ.ಎಸ್. ಸಭಾಂಗಣ, ಭಾರತೀಯ ವಿದ್ಯಾಭವನ
ಯಾವಾಗ?: ಅಕ್ಟೋಬರ್ 28, ಸಂಜೆ 6
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.