ಸಾರಿಗೆ,ಪ್ರವಾಸೋದ್ಯಮ ಪ್ರದರ್ಶನ
Team Udayavani, Oct 28, 2017, 11:55 AM IST
ಮಹಾನಗರ: ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್‌ಎಕ್ಸಿಬಿಷನ್ ಅನ್ನು ಶುಕ್ರವಾರ ನಗರದ ನವಭಾರತ ಸರ್ಕಲ್ ಬಳಿಯಿರುವ ಟಿ.ವಿ. ರಮಣ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಮೇಯರ್ ಕವಿತಾ ಸನಿಲ್ ಉದ್ಘಾಟಿಸಿದರು.
ಐಐಟಿಇ ಬೆಂಗಳೂರಿನ ನಿರ್ದೇಶಕ ಅನುರಾಗ್ ಗುಪ್ತಾ, ಕಲ್ಕೂರ ಜಾಹೀರಾತು ಸಂಸ್ಥೆಯ ಎಂ. ನಾರಾಯಣ ಭಟ್
ಮೊದಲಾದವರು ಉಪಸ್ಥಿತರಿದ್ದರು.
ಐಐಟಿಟಿಇ ವತಿಯಿಂದ ಏರ್ಪಡಿಸಲಾಗಿರುವ ಎಕ್ಸಿಬಿಷನ್‌ನಲ್ಲಿ ಸಾರಿಗೆ, ಪ್ರವಾಸ, ರೈಲ್ವೇ, ಆತಿಥ್ಯ ಮತ್ತಿತರ ಇದಕ್ಕೆ ಪೂರಕವಾದ ಸಂಗತಿಗಳನ್ನು ಜನರಿಗೆ ಪರಿಚಯಿಸಲಾಗುತ್ತದೆ. ಈ 3 ದಿನಗಳ ಪ್ರವಾಸಿ ಪ್ರದರ್ಶನದಲ್ಲಿ ಮುಖ್ಯವಾಗಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರವಾಸಿ ಕೇಂದ್ರಗಳು, ಹೊಟೇಲ್‌ಗಳು, ರೆಸಾರ್ಟ್‌ಗಳು ಹಾಗೂ ಇನ್ನಿತರ ಸೇವೆಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸದ ಸಂಯೋಜಕರು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳನ್ನು ಪೂರೈಸುವವರ ಕುರಿತಾದ ವಿಸ್ತೃತ ಮಾಹಿತಿ ಒದಗಿಸಲಾಗುತ್ತದೆ.
ಮಧ್ಯ ಪ್ರದೇಶದ ಪ್ರವಾಸೋದ್ಯಮ, ಜಾರ್ಖಂಡ್ ಪ್ರವಾಸೋದ್ಯಮ, ಉತ್ತರಾಖಂಡ ಪ್ರವಾಸೋದ್ಯಮ, ಗುಜರಾತ್ ಪ್ರವಾಸೋದ್ಯಮ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳು ಇನ್ನಿತರ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳು ಈ ಎಕ್ಸಿಬಿಷನ್‌ನಲ್ಲಿ ಪ್ರಸ್ತುತಗೊಳ್ಳಲಿರುವುದು. ಮಾತ್ರವಲ್ಲ ಅನೇಕ ಪ್ರಮುಖ ಟ್ರಾವೆಲ್ ಏಜೆಂಟ್‌ಗಳು, ಹೊಟೇಲ್‌ಗಳು, ರೆಸಾರ್ಟ್‌ಗಳು ಪಾಲ್ಗೊಳ್ಳುತ್ತಲಿವೆ. ಅಡಿಗಾಸ್ ಯಾತ್ರಾ, ಟ್ರೀಬೋ ಹೊಟೇಲ್ಸ್, ರಾಶಿ ಎಕೊಟ್ಯೂರಿಸಂ, ಮುಸ್ಲಿಂ ಟ್ರಾವೆಲ್ ಆ್ಯಂಡ್ ಟೂರ್ ಇತ್ಯಾದಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ಅವರ ಪ್ಯಾಕೇಜ್‌ಗಳು, ಸೇವೆಗಳ ಮಾಹಿತಿ ಒದಗಿಸಲಿದ್ದಾರೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮವನ್ನು ಉತ್ತೇಜಿಸುವುದೇ ಎಕ್ಸಿಬಿಷನ್‌ನ
ಮೂಲ ಉದ್ದೇಶವಾಗಿದೆ. ಜನರ ಆಸಕ್ತಿಗೆ ತಕ್ಕಂತೆ ಪ್ರವಾಸೋದ್ಯಮದ ಕುರಿತಾದ ಮಾಹಿತಿಗಳನ್ನು ಒಂದೇ ಸೂರಿನಡಿ ಒದಗಿಸುವ ಪ್ರಯತ್ನ ಇದಾಗಿದೆ. ಕ್ರಿಸ್ ಮಸ್ ಸಂಭ್ರಮ, ವಾರದ ಪ್ರವಾಸ, ಹನಿಮೂನ್ ವೆಕೇಷನ್ ಮತ್ತು ಬ್ಯುಸಿನೆಸ್ ಟೂರುಗಳನ್ನು ನಡೆಸಲು ಈ ಚಳಿಗಾಲವು ಪ್ರಶಸ್ತವಾಗಿದ್ದು, ಈ ಸೌಲಭ್ಯವನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ.
ವಿವಿಧ ಅತ್ಯಾಕರ್ಷಣೀಯ ಪ್ರವಾಸೋದ್ಯಮ ಪ್ಯಾಕೇಜ್‌ಗಳಿದ್ದು, ಈಗಾಗಲೇ ಪ್ರವಾಸದ ಪ್ಲಾನಿಂಗ್ ಮಾಡುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳು, ಟ್ರಾವೆಲರ್ ಸಂಸ್ಥೆಗಳು ಕೂಡ ವಿಸ್ತತವಾದ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಪಡೆದುಕೊಳ್ಳಬಹುದಾಗಿದೆ. ಅ.29ರ ವರೆಗೆ ಪ್ರತಿ ದಿನ ಬೆಳಗ್ಗೆ 11.30ರಿಂದ ರಾತ್ರಿ 7.30ರ ವರೆಗೆ ಪ್ರದರ್ಶನ ತೆರೆದುಕೊಂಡಿದ್ದು, ಪ್ರವೇಶ ಉಚಿತವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.