ರಾಹುಲ್‌ ಜೊತೆ ಕೈ ಜೋಡಿಸಿದವರ ಕಥೆ


Team Udayavani, Oct 28, 2017, 1:13 PM IST

28-27.jpg

ರಾಹುಲ್‌ ಗಾಂಧಿಯವರು ಗುಜರಾತ್‌ನ ಯುವಕ ಅಲ್ಪೇಶ್‌ ಠಾಕೂರ್‌ನನ್ನು ಭೇಟಿಯಾದರು. ಈ ಭೇಟಿಯ ನಂತರ ಅಲ್ಪೇಶ್‌ ಕಾಂಗ್ರೆಸ್‌ ಪಕ್ಷವನ್ನು ಸೇರಿಕೊಂಡುಬಿಟ್ಟರು. ಆದರೆ ಇದೂ ಕೂಡ ಭಾಮಕ ತಥ್ಯ! ಸತ್ಯವೇನೆಂದು ಗೊತ್ತೇ? ಈ ಅಲ್ಪೇಶ್‌ ಠಾಕೂರ್‌ ಹಿಂದೊಮ್ಮೆ ಕಾಂಗ್ರೆಸ್‌ನ ಪರವಾಗಿ ಜಿಲ್ಲಾ ಪರಿಷತ್‌ ಚುನಾವಣೆಯಲ್ಲಿ ಅಖಾಡಕ್ಕಿಳಿದು ಸೋಲನುಭವಿಸಿದ್ದ. ಹಾಗಿದ್ದರೆ ರಾಹುಲ್‌ ಗಾಂಧಿ ಮತ್ತು ಅವರ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ಸಿಗನಾಗಿರುವ ಅಲ್ಪೇಶ್‌ ಠಾಕೂರ್‌ನನ್ನು ಮತ್ತೂಮ್ಮೆ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸುವ ಢೋಂಗಿ ನಾಟಕವಾಡಿತೇಕೆ?

ಗುಜರಾತ್‌ ರಾಜ್ಯವು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಹೀಗಾಗಿ ಸಹಜವಾಗಿಯೇ ರಾಜಕೀಯ ಚಟುವಟಿಕೆಗಳು ವೇಗ ಪಡೆಯುತ್ತಿವೆ. ಆದರೆ ಈ ವೇಳೆಯಲ್ಲೇ ಅತ್ತ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಗಾಬರಿ ಮತ್ತು ಹತಾಶೆಯು ವಿಧವಿಧ ರೂಪದಲ್ಲಿ ಎದುರಾಗುತ್ತಿದೆ. ಪ್ರತಿ ದಿನವೂ ಮಾಧ್ಯಮಗಳಲ್ಲಿ ಇದರ ಝಲಕ್‌ ಸಿಗುತ್ತಿದೆ. 

“ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇವರನ್ನು ಗುಪ್ತವಾಗಿ ಭೇಟಿಯಾಗಲಿದ್ದಾರೆ’ ಎಂಬ ಸುದ್ದಿ ಒಮ್ಮೆ ಬಂದರೆ “ರಾಹುಲ್‌ ಗಾಂಧಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಲಿದ್ದಾರೆ’ ಎನ್ನುವ ಹೊಸ ಹೊಸ ಸುದ್ದಿಗಳು ಇನ್ನೊಂದೆಡೆ ಬರುತ್ತಲೇ ಇವೆ. ಒಟ್ಟಲ್ಲಿ ಈ ರಹಸ್ಯ ಭೇಟಿಗಳ ವಿಷಯವಾಗಿ ಚರ್ಚೆ ಮಾಡುವುದಕ್ಕಿಂತ ಮೊದಲು ಒಂದು ರೋಚಕ ಸತ್ಯವನ್ನಂತೂ ಅರ್ಥಮಾಡಿಕೊಳ್ಳಲೇಬೇಕು. 

ರಾಹುಲ್‌ ಗಾಂಧಿಯವರು ಚುನಾವಣಾ ಸಮಯದಲ್ಲಿ ಯಾರ್ಯಾರ ಜೊತೆಗೆ ಕೈ ಜೋಡಿಸುತ್ತಾರೋ ಅವರ ಕಥೆ ಏನಾಗಿದೆ? ಯಾವ ಫ‌ಲಿತಾಂಶ  ಬಂದಿದೆ? ಎನ್ನುವುದನ್ನು ತಿರುಗಿ ನೋಡಿ…  ಕಾಂಗ್ರೆಸ್‌ ಉಪಾಧ್ಯಕ್ಷರು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್‌ ಪಾರ್ಟಿಯೊಂದಿಗೆ ಕೈ ಜೋಡಿಸಿದರು. ಆಗೇನಾಯಿತು? ಕಮ್ಯುನಿಸ್ಟರು ಹೀನಾಯ ಸೋಲನುಭವಿಸಿದರು. 

ಜಮ್ಮು ಕಾಶ್ಮೀರಕ್ಕೆ ತೆರಳಿದ ರಾಹುಲ್‌ ಗಾಂಧಿ ಅಲ್ಲಿ ಒಮರ್‌ ಅಬ್ದುಲ್ಲಾರೊಂದಿಗೆ ಮೈತ್ರಿ ಮಾಡಿಕೊಂಡರು. ಆಗ ಆದದ್ದೇನು? ಒಮರ್‌ ಅಬ್ದುಲ್ಲಾ ಅವರ ಪಕ್ಷವು ಭಾರೀ ವೈಫ‌ಲ್ಯ ಅನುಭವಿಸುವಂತಾಯಿತು. ಇನ್ನು ಎಲ್ಲಕ್ಕಿಂತಲೂ ಅತಿ ದೊಡ್ಡ ಮತ್ತು ಅತಿ ಹತ್ತಿರದ ಉದಾಹರಣೆಯೆಂದರೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ. ಅಲ್ಲಿ ಮಾನ್ಯ ರಾಹುಲ್‌ ಗಾಂಧಿಯವರು ಅಖೀಲೇಶ್‌ ಯಾದವ್‌ ಜೊತೆ, ಅಂದರೆ ಅವರ ಸಮಾಜವಾದಿ ಪಾರ್ಟಿಯ ಕೈ ಹಿಡಿದುಕೊಂಡರು.  ಆ ಮೂಲಕ ಸಮಾಜವಾದಿ ಪಕ್ಷದ ಅಳಿದುಳಿದ ವಿಶ್ವಾಸಾರ್ಹತೆಯನ್ನೂ ಮಣ್ಣುಪಾಲು ಮಾಡಿಬಿಟ್ಟರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಅಖೀಲೇಶ್‌ರ ಪಕ್ಷವನ್ನೂ ನೀರಲ್ಲಿ ಮುಳುಗಿಸಿದರು. ಹೀಗಾಗಿ ಕಾಂಗ್ರೆಸ್‌ ಉಪಾಧ್ಯಕ್ಷರ ಚುನಾವಣಾ ಮೈತ್ರಿಗಳ ಹಿಂದಿನ ದಾಖಲೆಗಳನ್ನೆಲ್ಲ ನೋಡಿದರೆ, ಅವರು ಎಲ್ಲೆಲ್ಲಿ ಯಾರ್ಯಾರ ಜೊತೆ ಕೈ ಜೋಡಿಸಿದ್ದಾರೋ ಆ ಜನರು-ಪಕ್ಷಗಳು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ ಎನ್ನುವುದು ಸಾಬೀತಾಗುತ್ತದೆ.  

ಕಾಂಗ್ರೆಸ್‌ ಸೇರಿದ ಕಾಂಗ್ರೆಸ್ಸಿಗ!: ಈಗ ರಾಹುಲ್‌ ಗಾಂಧಿಯವರ ರಹಸ್ಯ ಭೇಟಿಗಳ/ಮಾತುಕತೆಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ. ಎಷ್ಟಿದ್ದರೂ ಕೊನೆಗೆ ಕಾಂಗ್ರೆಸ್‌ ಜನರ ನಡುವೆಯೇ ಹೋಗಲೇಬೇಕಲ್ಲವೇ? ಹಾಗಿದ್ದರೆ ಜನರೆದುರು ಮುಕ್ತ ಅಜೆಂಡಾದೊಂದಿಗೆ, ಬಹಿರಂಗ ನೀತಿಗಳೊಂದಿಗೆ ಏಕೆ ಎದುರಾಗುತ್ತಿಲ್ಲ? ಅದನ್ನು ಬಿಟ್ಟು ಈ ರಹಸ್ಯ ಭೇಟಿಗಳೇಕೆ ಬೇಕು? ಬಹುಶಃ ಕಾಂಗ್ರೆಸ್‌ ಪಕ್ಷಕ್ಕೆ ಭ್ರಮೆಯ ರಾಜಕೀಯ ನಡೆಸುವುದೇ ಜಾಸ್ತಿ ಇಷ್ಟವೆನಿಸುತ್ತದೆ. ರಾಹುಲ್‌ ಗಾಂಧಿಯವರು ಗುಜರಾತ್‌ನ ಯುವಕ ಅಲ್ಪೇಶ್‌ ಠಾಕೂರ್‌ನನ್ನು ಭೇಟಿಯಾದರು. ಈ ಭೇಟಿಯ ನಂತರ ಅಲ್ಪೇಶ್‌ ಕಾಂಗ್ರೆಸ್‌ ಪಕ್ಷವನ್ನು ಸೇರಿಕೊಂಡುಬಿಟ್ಟರು. ಆದರೆ ಇದೂ ಕೂಡ ಭಾಮಕ ತಥ್ಯ! ಸತ್ಯವೇನೆಂದು ಗೊತ್ತೇ? ಈ ಅಲ್ಪೇಶ್‌ ಠಾಕೂರ್‌ ಹಿಂದೊಮ್ಮೆ ಕಾಂಗ್ರೆಸ್‌ನ ಪರವಾಗಿ ಜಿಲ್ಲಾ ಪರಿಷತ್‌ ಚುನಾವಣೆಯಲ್ಲಿ ಅಖಾಡಕ್ಕಿಳಿದು ಸೋಲನುಭವಿಸಿದ್ದ. ಹಾಗಿದ್ದರೆ ರಾಹುಲ್‌ ಗಾಂಧಿ ಮತ್ತು ಅವರ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ಸಿಗನಾಗಿರುವ ಅಲ್ಪೇಶ್‌ ಠಾಕೂರ್‌ನನ್ನು ಮತ್ತೂಮ್ಮೆ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ ಢೋಂಗಿ ನಾಟಕವಾಡಿತೇಕೆ? ಹೀಗೆ ಮಾಡಲು ಕಾರಣವೇನು? ಇದು ತೆಗೆದುಹಾಕುವಂಥ ಪ್ರಶ್ನೆ ಅಲ್ಲವೇ ಅಲ್ಲ. ತನ್ನದೇ ಪಕ್ಷದ ನಾಯಕನನ್ನು ತನ್ನದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಇಂಥ ಅಪರೂಪದ ವಿದ್ಯಮಾನ ಬಹುಶಃ ದೇಶದಲ್ಲಿ ಇದೇ ಮೊದಲು ನಡೆದಿರಬೇಕು! 

ಸರಿಬಿಡಿ, ಈಗ ಮೂಲ ಪ್ರಶ್ನೆಗೆ ಬರೋಣ. ಒಂದು ವೇಳೆ ನಾವು ಗಮನಕೊಟ್ಟು ವಿಚಾರ ಮಾಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಸ್ವಾತಂತ್ರಾ ನಂತರದ ಅತಿದೊಡ್ಡ ಸತ್ಯವೇನೆಂದರೆ ಕಾಂಗ್ರೆಸ್‌ ಪಕ್ಷ ಇದುವರೆಗೂ ಯಾರಿಗೂ ನ್ಯಾಯ ಒದಗಿಸಿಲ್ಲ, ಆದರೆ ಎಲ್ಲರಿಗೂ ಅನ್ಯಾಯವನ್ನಂತೂ ಮಾಡಿದೆ. ಹೀಗಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸಮಸ್ಯೆಗಳ/ವಿಚಾರಗಳ ಆಧಾರದ ಮೇಲೆ ಮಾತನಾಡುವುದಕ್ಕೆ ಅದರ ಬಳಿ ಏನೇನೂ ಉಳಿದಿಲ್ಲ. ಇದೇ ಕಾರಣದಿಂದಲೇ ಇದುವರೆಗೂ ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿ ಸರ್ಕಾರದ ಅಭಿವೃದ್ಧಿ ರಾಜಕಾರಣದ ಮೇಲೆ ಯಾವುದೇ ವಾಸ್ತವಿಕ ಪ್ರಶ್ನೆಯನ್ನು ಎದುರಿಡಲು ಸಾಧ್ಯವಾಗಿಲ್ಲ, ಜೊತೆಗೆ ಬಿಜೆಪಿ ಎದುರಿಡುತ್ತಿರುವ ಪ್ರಶ್ನೆಗಳಿಗೆ ವಾಸ್ತವಿಕ ಉತ್ತರವನ್ನು ಕೊಡುವುದಕ್ಕೂ ಆಗುತ್ತಿಲ್ಲ. 

ದೇಶದ ಜನರಿಗೆ ಈಗಂತೂ ಕಾಂಗ್ರೆಸ್‌ನ ಮೇಲೆ ಮತ್ತು ಅದರ ನೇತಾರನ ಮೇಲೆ ಎಳ್ಳಷ್ಟೂ ಭರವಸೆಯಿಲ್ಲ
 ಎನ್ನುವುದು ಈ ಪಕ್ಷಕ್ಕೆ ಆಗಲೇ ಅರಿವಾಗಿದೆೆ. ಈ ಕಾರಣಕ್ಕಾಗಿಯೇ ಅದು ಇಲ್ಲದ ಸಮಸ್ಯೆಗಳನ್ನು ಹುಡುಕಲು ಪ್ರಯತ್ನಿಸುತ್ತಿದೆ. 
ಅಲ್ಪೇಶ್‌ ಠಾಕೂರ್‌ನನ್ನು ಪರ ಮಾತನಾಡುತ್ತದೆ  ಕಾಂಗ್ರೆಸ್‌. ಹಾಗಿದ್ದರೆ  ರಾಜ್ಯಸಭೆಯಲ್ಲಿ ಓಬಿಸಿ ಕಮೀಶನ್‌ಗೆ
ಸಾಂವಿಧಾನಿಕ ಸ್ಥಾನಮಾನ ಕೊಡುವುದಕ್ಕಾಗಿ ಬಿಜೆಪಿ ಸರ್ಕಾರ ಎದುರಿಟ್ಟಿದ್ದ  ವಿಧೇಯಕವನ್ನು ಇದೇ ಕಾಂಗ್ರೆಸ್‌ ಪಕ್ಷ ವಿರೋಧಿಸಿದ್ದು ಏಕೆ? ಗುಜರಾತ್‌ನ ಜನತೆ ಮೊದಲಿನಿಂದಲೂ ಸಕಾರಾತ್ಮಕ ಮತ್ತು ವಿಕಾಸವಾದಿ ದೃಷ್ಟಿಕೋನದಿಂದ ಮುನ್ನಡೆಯುತ್ತಾ ಬಂದವರು. ಹೀಗಿರುವಾಗ ರಾಹುಲ್‌ ಗಾಂಧಿಯವರಿಗಾಗಲಿ ಅಥವಾ ಅವರ ಪಕ್ಷದ ಬಳಿಯಾಗಲಿ ಗುಜರಾತಿಗರಿಗೆ ಸರಿಹೋದುವಂಥ ಮಾಡಲ್‌ ಇಲ್ಲ. ಇವರೇನಿದ್ದರೂ ನಕಾರಾತ್ಮಕ ಅಜೆಂಡಾದ ಮೇಲೆ ರಾಜಕೀಯ ಮಾಡುವವರು. ಇತ್ತ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ “ಸಕಾರಾತ್ಮಕ’ ನಡೆಯಿಂದಾಗಿ ಪದೇ ಪದೆ ಜನಾದೇಶವನ್ನು ಪಡೆಯುತ್ತಲೇ ಬಂದಿದೆ. 

(ಲೇಖಕರು ಪ್ರಸ್ತುತ ಬಿಹಾರ ಮತ್ತು ಗುಜರಾತ್‌ ಬಿಜೆಪಿಯ ಉಸ್ತುವಾರಿ)
ಭೂಪೇಂದ್ರ ಯಾದವ್‌, ಬಿಜೆಪಿ ಸಂಸದ

ಟಾಪ್ ನ್ಯೂಸ್

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.