ಸಮಾಜವಾದಿ ಕ್ರಾಂತಿ ಶತಮಾನೋತ್ಸವ: ಜಾಥಾ
Team Udayavani, Oct 28, 2017, 3:41 PM IST
ಯಾದಗಿರಿ: ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ವತಿಯಿಂದ ನಗರದಲ್ಲಿ ಜೀಪ್ ಜಾಥಾ ನಡೆಯಿತು. ಜಾಥಾ ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ (ಸಿ) ರಾಜ್ಯ ಸಮಿತಿ ಸದಸ್ಯ ಎಚ್.ವಿ. ದಿವಾಕರ್, 1917ರ ನವೆಂಬರ್ ತಿಂಗಳು ಇಡೀ ಜಗತ್ತಿನಲ್ಲಿ ತಲ್ಲಣ ಮೂಡಿಸಿದ ಐತಿಹಾಸಿಕ ಕಾಲವಾಗಿದೆ. ಇತಿಹಾಸ ಕಂಡರಿಯದಿದ್ದ ಸಮಾಜವಾದಿ ಮಹಾಕ್ರಾಂತಿ ರಷ್ಯಾದ ನೆಲದಲ್ಲಿ ನಡೆದು, ಹೊಸ ನಾಗರಿಕತೆ
ಉದಯಿಸಿದ ಸಂದರ್ಭವಾಗಿದೆ. ರಷ್ಯಾದ ಬಡ ರೈತರು ಮತ್ತು ಕಾರ್ಮಿಕರು ಒಂದಾಗಿ ಮೊದಲಿಗೆ 1917ರ ಫೆಬ್ರವರಿಯಲ್ಲಿ ಜಾರ್ ದೊರೆ ದಬ್ಟಾಳಿಕೆ ಆಳ್ವಿಕೆ ಕೊನೆಗೊಳಿಸಿದರು.
ಮುಂದೆ ಎಂಟು ತಿಂಗಳುಗಳ ಅವಧಿಯಲ್ಲಿ ಅಧಿಕಾರಕ್ಕೇರಿದ್ದ ಬಂಡವಾಳಶಾಹಿ ಸರ್ಕಾರವನ್ನು ಕೊನೆಗಾಣಿಸಿ ಈ ತಿಂಗಳಲ್ಲಿ
ಎರಡು ಕ್ರಾಂತಿ ಮಾಡಲಾಯಿತು ಎಂದು ಹೇಳಿದರು.
ಕಾರ್ಮಿಕ ಕ್ರಾಂತಿ ಮೂಲಕ ಸಮಾಜವಾದಿ ವ್ಯವಸ್ಥೆ ಜಾರಿಗೆ ತಂದು ಶೋಷಣೆಯಿಂದ ಮುಕ್ತವಾದ ಸಮಾಜ ಕಟ್ಟಲು ಸಾಧ್ಯ
ಎಂದು ಮಹಾನ್ ದಾರ್ಶನಿಕ, ಕಾರ್ಮಿಕ ವರ್ಗದ ಮೊದಲ ಗುರು ಕಾರ್ಲ್ಮಾರ್ಕ್ಸ್ ಪ್ರಪ್ರಥಮ ಬಾರಿಗೆ ವಾದಿಸಿದಾಗ ಅಂದಿನ ಆಳುವ ವರ್ಗಗಳು ಅದನ್ನು ಅಸಾಧ್ಯ ಆದರ್ಶ ಎಂದು ತಳ್ಳಿ ಹಾಕಿದ್ದವು. ಆದರೆ ರಷ್ಯಾದಲ್ಲಿ ಇದು ಸಾಧ್ಯವಾಗಿರುವುದು ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ ನೇತೃತ್ವದಲ್ಲಿ. ಅಲ್ಲಿ ಸಮಾಜವಾದ ಗಟ್ಟಿಯಾಗಿ ನೆಲೆಯೂರಿದ್ದು ಲೆನಿನ್ ನಂತರ ಹೊರಹೊಮ್ಮಿದ ಅವರ ಯೋಗ್ಯ ಅನುಯಾಯಿ ಸ್ಟಾಲಿನ್ ನಾಯಕತ್ವದಲ್ಲಿ.
ಲೆನಿನ್-ಸ್ಟಾಲಿನ್ ಅವರಂತಹ ನಾಯಕರನ್ನು ಹೊಂದಿದ್ದ ರಷ್ಯಾದ ಕಮ್ಯುನಿಸ್ಟ್ ಪಕ್ಷ ದೇಶದಾದ್ಯಂತ ಸಂಘಟಿಸಿದ್ದ ಸೋವಿಯತ್ (ಜನಸಮಿತಿ)ಗಳು ಪ್ರಬಲವಾಗಿ ಬೆಳೆದು ರಾಜ್ಯಾಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಪರ್ವ ಕಾಲವೇ ಸಮಾಜವಾದಿ ಕ್ರಾಂತಿಯ ಕಾಲವಾಗಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳೇ ಕಳೆದರು ನಮ್ಮನ್ನಾಳುತ್ತಿರುವ ಎಲ್ಲ ಸರ್ಕಾರಗಳು ಕಾರ್ಪೋರೇಟ್
ಪರ. ಬಂಡವಾಳಿಗರ ಸೇವೆ ಮಾಡುತ್ತ ಜನವಿರೋಧಿಯಾಗಿವೆ. ಆದ್ದರಿಂದ ಸಮಾಜವಾದಿ ಮಹಾಕ್ರಾಂತಿಯಿಂದ ಸ್ಫೂರ್ತಿಹೊಂದಿ, ಶೋಷಿತ ವರ್ಗವಾದ ರೈತ-ಕಾರ್ಮಿಕರು ಎಲ್ಲ ರೀತಿಯ ಶೋಷಣೆ, ಅಸಮಾನತೆ ತೊಡೆದುಹಾಕಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆ ತರುವ ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ ಬಂಡವಾಳಶಾಹಿ ವಿರೋಧಿ-ಸಮಾಜವಾದಿ ಕ್ರಾಂತಿಗೆ ಅಣಿಯಾಗಬೇಕಿದೆ ಎಂದು ಹೇಳಿದರು. ಎಸ್‌ಯುಸಿಐ(ಸಿ) ಕಾರ್ಯದರ್ಶಿ ಕೆ. ಸೋಮಶೇಖರ ಮಾತನಾಡಿದರು.
ಡಿ. ಉಮಾದೇವಿ, ಶರಣಗೌಡ ಗೂಗಲ, ರಾಮಲಿಂಗಪ್ಪ ಬಿ.ಎನ್., ಸೈದಪ್ಪ ಎಚ್.ಪಿ., ಜಮಾಲ್‌ಸಾಬ್, ಸಿದ್ದಪ್ಪ, ಗೌರಮ್ಮ ಸಿ.ಕೆ.ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.