ಪಾಟ್ನಾ ಅಬ್ಬರಕ್ಕೆ 3ನೇ ಕಿರೀಟ

Team Udayavani, Oct 29, 2017, 6:00 AM IST

pro-win-28.jpg

ಚೆನ್ನೈ: ಪ್ರೊ ಕಬಡ್ಡಿ 5ನೇ ಆವೃತ್ತಿಯ ಚಾಂಪಿಯನ್‌ ಕಿರೀಟವನ್ನು ಪಾಟ್ನಾ ಪೈರೇಟ್ಸ್‌ ಧರಿಸಿದೆ. ಇದು ಈ ತಂಡದ ಹ್ಯಾಟ್ರಿಕ್‌ ಪ್ರೊ ಪ್ರಶಸ್ತಿ ಎನ್ನುವುದು ಅದರ ಪ್ರಾಬಲ್ಯಕ್ಕೆ ಸಾಕ್ಷಿ. 

ಅಂತಿಮ ಪಂದ್ಯದಲ್ಲಿ ಕನ್ನಡಿಗ ಸುಕೇಶ್‌ ಹೆಗ್ಡೆ ನಾಯಕತ್ವದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಪ್ರಬಲ ಹೋರಾಟ ನೀಡಿದರೂ ಕೊನೆಯ ಕ್ಷಣಗಳಲ್ಲಿ ತಾನೇ ಮಾಡಿದ ತಪ್ಪುಗಳಿಗೆ ಬಲಿಯಾಯಿತು. ಇದರೊಂದಿಗೆ ಆಡಿದ ಮೊದಲ ಕೂಟದಲ್ಲೇ ಪ್ರಶಸ್ತಿ ಗೆಲ್ಲುವ ಅದರ ಕನಸು ನುಚ್ಚು ನೂರಾಯಿತು.

ಇಲ್ಲಿನ ಜವಾಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ವೀರಾವೇಶದ ಹೋರಾಟ ನಡೆಸಿದ ಪಾಟ್ನಾ ಪೈರೇಟ್ಸ್‌ ತಂಡ ಬಲಿಷ್ಠ ಗುಜರಾತ್‌ ಸೂಪರ್‌ ಜೈಂಟ್ಸ್‌ ತಂಡವನ್ನು 55-38 ಅಂಕಗಳಿಂದ ಸೋಲಿಸಿತು. ಈ ಪಂದ್ಯದಲ್ಲೂ ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌ ಕಾಲು¤ಳಿತಕ್ಕೆ ಸಿಕ್ಕಿ ಎದುರಾಳಿಗಳು ಪರದಾಡಿದರು!

ಆರಂಭಿಕ ಮುನ್ನಡೆ ಸಾಧಿಸಿದ್ದ ಗುಜರಾತ್‌: ಪಂದ್ಯದ ಎರಡನೇ ನಿಮಿಷದಲ್ಲಿ ಮೋನು ಗೋಯತ್‌ ಎರಡು ಅಂಕಗಳನ್ನು ಗಳಿಸುವ ಮೂಲಕ ಪಾಟ್ನಾ ಮುನ್ನಡೆ ಸಾಧಿಸುವಂತೆ ಮಾಡಿದರು. ಅದಾದ ಬಳಿಕ ಗುಜರಾತ್‌ನ ರಾಕೇಶ್‌ ನರ್ವಾಲ್‌ ಸೂಪರ್‌ ರೈಡ್‌ ಮಾಡಿದರು. ನಂತರ ಕನ್ನಡಿಗ ಸುಕೇಶ್‌ ಹೆಗ್ಡೆ ಎರಡು ಅಂಕಗಳನ್ನು ಪಡೆಯುವ ಮೂಲಕ ಪಾಟ್ನಾ ತಂಡವನ್ನು ಆಲೌಟ್‌ ಮಾಡಿದರು.

ಪಂದ್ಯದ 7ನೇ ನಿಮಿಷದ ವೇಳೆಗೆ ಗುಜರಾತ್‌ 10-5 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿತು. 10ನೇ ನಿಮಿಷದವರೆಗೆ ಪಾಟ್ನಾ ತಂಡಕ್ಕೆ ಒಂದೂ ಅಂಕಗಳನ್ನು ಬಿಟ್ಟುಕೊಡದೆ ರಕ್ಷಣಾತ್ಮಕ ಆಟವಾಡಿತು. ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌ಗೆ ಮೊದಲ 10 ನಿಮಿಷಗಳಲ್ಲಿ ಕೇವಲ ಒಂದು ರೈಡ್‌ ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು, 10ನೇ ನಿಮಿಷದಲ್ಲಿ ಅವರನ್ನು ಔಟ್‌ ಮಾಡಿದ ಗುಜರಾತ್‌ ಹೆಚ್ಚಿನ ಅಂಕಗಳನ್ನು ನೀಡದೆ 15ನೇ ನಿಮಿಷದವರೆಗೆ ನರ್ವಾಲ್‌ ಮೈದಾನದಿಂದ ಹೊರಗಿರುವಂತೆ ಮಾಡಿತು.

ಪುಟಿದೆದ್ದ ಪ್ರದೀಪ್‌: 15ನೇ ನಿಮಿಷದಲ್ಲಿ ಕಣಕ್ಕೆ ಮರಳಿದ ಪ್ರದೀಪ್‌ ಫೀನಿಕ್ಸ್‌ ರೀತಿ ಪುಟಿದ್ದೆದ್ದು 16ನೇ ನಿಮಿಷದಲ್ಲಿ ಸೂಪರ್‌ ರೈಡ್‌ ಮಾಡುವ ಮೂಲಕ ಗುಜರಾತ್‌ ತಂಡವನ್ನು ಆಲೌಟ್‌ ಮಾಡಿದರು. ಮೂಲಕ ತಂಡ 17-17ರಿಂದ ಸಮಬಲ ಸಾಧಿಸುವಂತೆ ಮಾಡಿದರು. ಇದರಿಂದ ಒತ್ತಡಕ್ಕೆ ಒಳಗಾದ ಗುಜರಾತ್‌ ಸುಲಭವಾಗಿ ಅಂಕಗಳನ್ನು ಬಿಟ್ಟಿದರಿಂದ ಪಾಟ್ನಾ ಮೊದಲರ್ಧದ ವೇಳೆ 21-18 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ಇತ್ತಂಡಗಳು ಗೆಲುವಿಗಾಗಿ ಕಾದಾಟ ನಡೆಸಿದ್ದರಿಂದ ಕ್ಷಣ ಕ್ಷಣವೂ ರೋಮಂಚನಕಾರಿಯಾಗಿತ್ತು.¤ಅಲ್ಲಿಂದ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುವ ಮೂಲಕ ಎದುರಾಳಿ ತಂಡಕ್ಕೆ ಅಂಕಗಳನ್ನು ಗಳಿಸಲು ಅವಕಾಶ ನೀಡಲಿಲ್ಲ. ಅಲ್ಲಿಂದ ಪಾಟ್ನಾ ಅಂಕಗಳನ್ನು ಗಳಿಸುತ್ತಿದ್ದರೆ, ಗುಜರಾತ್‌ ಅಂಕ ಗಳಿಸಲು ಪರದಾಡಿತು. 29ನೇ ನಿಮಿಷದಲ್ಲಿ ಗುಜರಾತ್‌ ಕೇವಲ ಮೂರು ಅಂಕ ಮುಂದಿತ್ತು. ಇದನ್ನು ಉಪಯೋಗಿಸಿಕೊಳ್ಳುವಲ್ಲಿ ಗುಜರಾತ್‌ ಆಟಗಾರರು ವಿಫ‌ಲವಾದರು. ಇದನ್ನೇ ಲಾಭವಾಗಿಸಿಕೊಂಡ ಪ್ರದೀಪ್‌ ಹೆಚ್ಚು ಆಕ್ರಮಣಕಾರಿಯಾಗಿ ಆಡುವ ಮೂಲಕ ಅಂತರ ಹೆಚ್ಚಿಸಿದರು. ಕೊನೆಯಲ್ಲಿ ಗುಜರಾತ್‌ನ ಸಚಿನ್‌, ಚಂದನ್‌ ರಂಜಿತ್‌ ಹಾಗೂ ಮಹೇಂದ್ರ ರಜಪೂತ್‌ ಅಂಕಗಳನ್ನು ಗಳಿಸಿದರೂ ಅಂತರ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ.

ಪ್ರದೀಪ್‌ ಮುಂದೆ ನಡೆಯಲಿಲ್ಲ ಗುಜರಾತ್‌ ಆಟ: ರಕ್ಷಣಾ ವಿಭಾಗದಲ್ಲಿ ಟೂರ್ನಿಯ ಅತ್ಯಂತ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡ ರಕ್ಷಣಾ ವಿಭಾಗ ಪಾಟ್ನಾದ ಪ್ರದೀಪ್‌ ನರ್ವಾಲ್‌ ಎದುರು ಮಕಾಡೆ ಮಲಗಿತು. ಈ ಹಿಂದಿನ ನಡೆದ ಎರಡೂ ಪಂದ್ಯಗಳಲ್ಲಿ ಪ್ರದೀಪ್‌, ಗುಜರಾತ್‌ ವಿರುದ್ಧ ಕೇವಲ 9 ಅಂಕಗಳನ್ನು ಮಾತ್ರ ಪಡೆದಿದ್ದರು. ಆದರೆ, ಫೈನಲ್‌ ಪಂದ್ಯದಲ್ಲಿ ಒಟ್ಟು 19 ಅಂಕಗಳನ್ನು ಗಳಿಸಿ ಗುಜರಾತನ್ನು ಧೂಳೀಪಟವೆಬ್ಬಿಸಿದರು.

ಪ್ರದೀಪ್‌ ಅಗ್ರ ರೈಡರ್‌ ಪ್ರಶಸ್ತಿ ಗಳಿಸಿದ ಅತಿಕಿರಿಯ
ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಅತಿಹೆಚ್ಚು ರೈಡ್‌ ಅಂಕಗಳನ್ನು ಪಡೆದ ಪಾಟ್ನಾ ಪೈರೇಟ್ಸ್‌ ತಂಡದ ನಾಯಕ ಪ್ರದೀಪ್‌ ನರ್ವಾಲ್‌ ಅಗ್ರ ರೈಡರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ ಈ ಪ್ರಶಸ್ತಿ ಪಡೆದ ಟೂರ್ನಿಯ ಅತಿ ಕಿರಿಯ (20 ವರ್ಷ) ಆಟಗಾರ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. 2016ರಲ್ಲಿ ಪ್ರೊ ಕಬಡ್ಡಿಯ 3ನೇ ಅವೃತ್ತಿಯಲ್ಲಿ ಯು ಮುಂಬಾ ತಂಡದ ಪರವಾಗಿ ಆಡಿದ್ದ ಕನ್ನಡಿಗ ರಿಶಾಂಕ್‌ ದೇವಾಡಿಗ ಒಟ್ಟು 106 ರೈಡ್‌ ಅಂಕಗಳನ್ನು ಪಡೆಯುವ ಮೂಲಕ ಟಾಪ್‌ ರೈಡರ್‌ ಪ್ರಶಸ್ತಿ ಗಳಿಸಿದ ಅತಿ ಕಿರಿಯ ಆಟಗಾರ (22 ವರ್ಷವಾಗಿತ್ತು) ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣ
ಪ್ರೊ ಕಬಡ್ಡಿ 5ನೇ ಅವೃತ್ತಿಯ ಫೈನಲ್‌ ಪಂದ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆಯಿತು. 8 ಸಾವಿರ ಆಸನ ಸಾಮರ್ಥಯದ ಜವಾಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಟಿಕೆಟ್‌ ಪಡೆಯಲು ಪಂದ್ಯದ ಕೊನೆಯ ಕ್ಷಣದವರೆಗೆ ಪ್ರೇಕ್ಷಕರು ಕ್ರೀಡಾಂಗಣದ ಹೊರಭಾಗದಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.

ಟಾಪ್‌ ರೈಡರ್‌: ಪ್ರದೀಪ್‌ ನರ್ವಲ್‌
ಪಂದ್ಯ: 26
ಒಟ್ಟು ರೈಡ್‌ಗಳು: 586
ರೈಡಿಂಗ್‌ ಅಂಕಗಳನ್ನು: 369
ಯಶಸ್ವಿ: 271
ಸೂಪರ್‌ ರೈಡ್‌: 15
ಸೂಪರ್‌ 10: 19
ವಿಫ‌ಲವಾದ ರೈಡ್‌ಗಳು:113
ಖಾಲಿ ರೈಡ್‌: 202

ಟಾಪ್‌ ಡಿಫೆಂಡರ್‌: ಸುರೇಂದರ್‌ ನಡ್ಡಾ (ಹರ್ಯಾಣ ಸ್ಟೀಲರ್)
ಪಂದ್ಯ 21
ಒಟ್ಟು ಅಂಕಗಳನ್ನು: 80
ಒಟ್ಟು ಟ್ಯಾಕಲ್‌ ಅಂಕಗಳನ್ನು : 144
ಯಶಸ್ವಿ ಟ್ಯಾಕಲ್‌ಗ‌ಳು: 74
5ಕ್ಕಿಂತ ಹೆಚ್ಚು ಟ್ಯಾಕಲ್‌ ಪಡೆದ ಪಂದ್ಯಗಳು: 9
ವಿಫ‌ಲವಾದ ಟ್ಯಾಕಲ್‌ಗ‌ಳು: 70
ಅತಿಹೆಚ್ಚು ಸೂಪರ್‌ ಟ್ಯಾಕಲ್‌ ಪಡೆದ ಆಟಗಾರ: ಜೀವ ಕುಮಾರ್‌ (7 ಸೂಪರ್‌ ಟ್ಯಾಕಲ್‌ಗ‌ಳು)

ಟಾಪ್‌ ಆಲೌಂಡರ್‌: ಮಿರಾಜ್‌ ಶೇಖ್‌
ಪಂದ್ಯ: 20
ಒಟ್ಟು ಅಂಕಗಳನ್ನು: 104
ರೈಡ್‌ ಅಂಕಗಳನ್ನು: 96
ಟ್ಯಾಕಲ್‌ ಅಂಕಗಳನ್ನು: 08

ಪ್ರಶಸ್ತಿಗಳು
ಪುನೇರಿ ಪಲ್ಟಾನ್‌- ನಾಲ್ಕನೇ ಸ್ಥಾನಕ್ಕೆ 80 ಲಕ್ಷ ರೂ.
ಆಟಗಾರರ ಪ್ರಶಸ್ತಿಗಳು
ಪ್ರದೀಪ ನರ್ವಾಲ್‌(ಪಾಟ್ನಾ ಪೈರೇಟ್ಸ್‌)- ಮೌಲ್ಯಯುತ ಆಟಗಾರ ( 15 ಲಕ್ಷ ರೂ.)
ಪ್ರದೀಪ್‌ ನರ್ವಾಲ್‌ (ಪಾಟ್ನಾ ಪೈರೇಟ್ಸ್‌) – ಅಗ್ರ ರೈಡರ್‌ (10 ಲಕ್ಷ ರೂ.)
ಸುರೇಂದರ್‌ ನಾಡಾ (ಹರ್ಯಾಣ ಸ್ಟೀಲರ್) – ಅಗ್ರ ರಕ್ಷಣಾ ಆಟಗಾರ (10 ಲಕ್ಷ ರೂ.)
ಸಚಿನ್‌ (ಗುಜರಾತ್‌ ಸೂಪರ್‌ ಜೈಂಟ್ಸ್‌) – ಶ್ರೇಷ್ಠ ಯುವ ಆಟಗಾರ (8 ಲಕ್ಷ ರೂ.)
ಜಮುನಾ ವೆಂಕಟೇಶ್‌- ಉತ್ತಮ ರೆಫ್ರಿ (3.5 ಲಕ್ಷ ರೂ.)
ಕೃಪಾಶಂಕರ್‌ ಶರ್ಮ- ಉತ್ತಮ ರೆಫ್ರಿ (3.5 ಲಕ್ಷ ರೂ.)

– ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.