ಯಹೂದಿ ಕತೆಗಳು


Team Udayavani, Oct 29, 2017, 6:25 AM IST

yahoodi.jpg

ಮಾರುವ ಕಲೆ
ಸೇನೆ ಸೇರಿದ ಯುವಕರಿಗೆ ವಿಮೆ ಮಾಡಿಸುವ ಜವಾಬ್ದಾರಿಯನ್ನು ಕೊಹೆನ್‌ಗೆ ಕೊಡಲಾಗಿತ್ತು. ಕೊಹೆನ್‌ನ ದಕ್ಷತೆ ಹೇಗಿತ್ತೆಂದರೆ ಆತ ಯಾರ ಜೊತೆ ಮಾತಿಗಿಳಿದರೂ ಅವರು ವಿಮೆ ಮಾಡಿಸುವ ವಿಚಾರದಲ್ಲಿ ಹಿಂದೇಟು ಹಾಕುವ ಸಾಧ್ಯತೆಯೇ ಇರಲಿಲ್ಲ. ತಾನು ಯಾರ ಜೊತೆ ಮಾತಿಗೆ ಕೂತರೂ ಅವರಿಂದ ವಿಮೆ ಮಾಡಿಸುವ ಚಾಕಚಕ್ಯತೆ ಕೊಹೆನ್‌ಗಿತ್ತು. ಆತ ಜನರನ್ನು ಹೇಗೆ ಮರುಳು ಮಾಡುತ್ತಾನೆ ಎಂಬುದನ್ನು ನೋಡಲು ಕ್ಯಾಪ್ಟನ್‌ ಸ್ಮಿತ್‌ ಒಮ್ಮೆ ಅವನ ಮಾತು ಕೇಳಲು ಸೇರಿದ್ದ ಯೋಧರ ಗುಂಪು ಸೇರಿಕೊಂಡರು.

ಕೊಹೆನ್‌ ಮಾತಿಗೆ ತೊಡಗಿದ, “”ಯುವಕರೇ, ನೀವೆಲ್ಲ ಹೊಸದಾಗಿ ಸೇನೆ ಸೇರಿದ್ದೀರಿ. ಸೇನೆ ಎಂದರೆ ಅನಿಶ್ಚಿತ ಬದುಕು. ಯಾವ ಕ್ಷಣದಲ್ಲಿ ಏನಾಗುತ್ತದೋ ಹೇಳುವಂತಿಲ್ಲ. ಆದ್ದರಿಂದ ನಿಮಗೆಲ್ಲ ವಿಮೆ ಇರಬೇಕಾದ್ದು ಅತ್ಯಗತ್ಯ. ಒಂದು ವೇಳೆ ನಿಮಗೆ ಜೀವಮೆ ಇದೆ ಅನ್ನಿ. ಆಗ ನೀವು ಯುದ್ಧಭೂಮಿಯಲ್ಲಿ ಹೋರಾಡುತ್ತ ಮಡಿದರೆ, ಸರಕಾರ ನಿಮ್ಮ ಕುಟುಂಬಕ್ಕೆ 200,000 ಡಾಲರ್‌ ಪರಿಹಾರ ಕೊಡುತ್ತದೆ. ಒಂದು ವೇಳೆ ನಿಮಗೆ ಜೀವವಿಮೆ ಇಲ್ಲ ಅನ್ನಿ. ಆಗ ನೀವು ಯುದ್ಧಭೂಮಿಯಲ್ಲಿ ಹೋರಾಡುತ್ತ ಮಡಿದರೆ, ಸರಕಾರ ನಿಮ್ಮ ಕುಟುಂಬಕ್ಕೆ ಕೊಡಬೇಕಾದ ಪರಿಹಾರ 6,000 ಡಾಲರ್‌ ಮಾತ್ರ. ಆದ್ದರಿಂದ ಯುವಕರೇ, ಯೋಚಿಸಿ, ಒಂದು ವೇಳೆ ಯುದ್ಧ ಘೋಷಣೆ ಆದರೆ ಸರಕಾರದವರು ಯಾರನ್ನು ಮೊದಲು ಯುದ್ಧಭೂಮಿಗೆ ಕಳಿಸುತ್ತಾರೆ?”

ವಿನಿಮಯ
ಇಸ್ರೇಲ್‌ ಮತ್ತು ಈಜಿಪ್ತ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತುಹೋಗಿದ್ದ. ಅವನು ತನ್ನ ಕಮಾಂಡರ್‌ ಬಳಿ ಬಂದು, “”ಸಾರ್‌, ನನಗೆ ಎರಡು ವಾರ ರಜೆ ಬೇಕು” ಎಂಬ ಬೇಡಿಕೆ ಇಟ್ಟ.

“”ಏನು ಎರಡು ವಾರವೇ? ಸರಿ, ಆ ಬೆಟ್ಟಗಳು ಕಾಣಿಸ್ತಿವೆಯಲ್ಲ ಅಲ್ಲಿ, ಅದರಾಚೆಗೆ ಈಜಿಪ್ತ್ನ ಸೇನೆ ಇದೆ. ಆ ಕಡೆಯಿಂದ ಒಂದು ತಾಸಿನ ಒಳಗಾಗಿ ವೈರಿಗಳ ಒಂದು ಯುದ್ಧ ಟ್ಯಾಂಕ್‌ ಅನ್ನು ತಂದುಕೊಡು. ನಿನಗೆ ಆ ಕ್ಷಣದÇÉೇ ಎರಡು ವಾರಗಳ ರಜೆ ಮಂಜೂರು ಮಾಡ್ತೇನೆ” ಎಂದ ಕಮಾಂಡರ್‌. ಯುವಕ ಮರಳಿಹೋದ.

ಆದರೆ, ಸರಿಯಾಗಿ ಒಂದು ತಾಸಾಗುವಷ್ಟರಲ್ಲಿ ಅದೇ ಯುವಕ ಒಂದು ಈಜಿಪ್ತ್ ಯುದ್ಧ ಟ್ಯಾಂಕ್‌ ಜೊತೆಗೆ ಕಮಾಂಡರ್‌ ಎದುರಲ್ಲಿ ಹಾಜರಾದ. ಕಮಾಂಡರ್‌ಗೆ ತನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. “”ಏನು! ನೀನು ನಿಜಕ್ಕೂ ಒಂದು ಈಜಿಪ್ತ್ ಟ್ಯಾಂಕ್‌ ಅನ್ನು ವಶಪಡಿಸಿಕೊಂಡು ಬಂದಿದ್ದೀಯಾ? ಹೇಗೆ ಸಾಧ್ಯವಾಯಿತು ಇದು!” ಎಂದು ಕೇಳಿದನಾತ.

“”ಸಾರ್‌, ಅಷ್ಟೇನೂ ದೊಡ್ಡ ಸಂಗತಿ ಅಲ್ಲ. ನಾನು ನನ್ನ ಟ್ಯಾಂಕ್‌ನಲ್ಲಿ ಕೂತು ಬೆಟ್ಟದ ಆಚೆ ಬದಿಗೆ ಹೋದೆ. ಅಲ್ಲಿ ಈಜಿಪ್ತ್ನ ಸೈನಿಕರಲ್ಲಿ ಯಾರಿಗೆ ಎರಡು ವಾರ ರಜೆ ಬೇಕಾಗಿದೆ” ಎಂದು ಕೇಳಿದೆ. ಒಬ್ಬ ಸೈನಿಕನಿಗೆ ಬೇಕಾಗಿತ್ತು. ನಾವಿಬ್ಬರೂ ನಮ್ಮ ಟ್ಯಾಂಕ್‌ಗಳನ್ನು ವಿನಿಮಯ ಮಾಡಿಕೊಂಡೆವು ಎಂದ ಯುವಕ.

ನಿಜಸ್ಥಿತಿ
ರಬೈ ಮೊರಿಸ್‌ ಒಂದು ಸಿನೆಗಾಗ್‌ನಿಂದ ನಿವೃತ್ತರಾಗುವ ಸಂದರ್ಭ ಬಂತು. ಅವರ ನಿವೃತ್ತಿಯ ದಿನ ಒಂದು ವಿಶೇಷ ಸಮಾರಂಭ ಏರ್ಪಾಟಾಯಿತು. ಆ ಊರಿಗೆಲ್ಲ ಹಿರಿಯನಾದ ಯೆಂಕೆಲ್‌ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದ. ಮೊರಿಸ್‌ ಅವರು ಬಹಳ ಒಳ್ಳೆಯ ರಬೈ ಆಗಿದ್ದರು. ಅವರು ನಮ್ಮನ್ನು ಬಿಟ್ಟುಹೋಗುವುದು ಭರಿಸಲಾರದ ನಷ್ಟ ಎಂದೇ ಎಲ್ಲರೂ ಅತ್ತೂ ಕರೆದು ಮಾತಾಡುತ್ತಿದ್ದರು. ಎಲ್ಲರ ಭಾಷಣಗಳಾದ ಮೇಲೆ ಮಾತಾಡಲು ನಿಂತ ರಬೈ ಮೊರಿಸ್‌, “”ನೀವೇನೂ ಅಷ್ಟು ಚಿಂತೆ ಮಾಡಬೇಕಿಲ್ಲ. ನಾನು ನಿವೃತ್ತನಾದರೆ ಜಗತ್ತು ಕೊನೆಯಾಯಿತು ಅಂತ ಏನೂ ಅರ್ಥವಲ್ಲ. ನನ್ನ ನಿವೃತ್ತಿಯ ನಂತರ ಬರುವವರು ಎಲ್ಲ ರೀತಿಯಲ್ಲೂ ನನಗಿಂತ ಒಳ್ಳೆಯವರೂ ಸಮರ್ಥರೂ ಆಗಿರುತ್ತಾರೆ” ಎಂದರು ಭಾವುಕರಾಗಿ. 

ಅಷ್ಟರಲ್ಲಿ ಯೆಂಕೆಲ್‌ ಎದ್ದುನಿಂತ. ಊರಿಗೆ ಹಿರಿಯನೂ ಹಲವು ರಬೈಗಳನ್ನು ನೋಡಿರುವವನೂ ಆದ ಆತನ ಮಾತುಗಳನ್ನು ಕೇಳಲು ಎಲ್ಲರಂತೆ ಮೊರಿಸ್‌ ಕೂಡ ಮುಂಬಾಗಿದರು. ಯೆಂಕೆಲ್‌ ಹೇಳಿದ, “”ನಿಮ್ಮ ನಂತರ ಬರೋರು ನಿಮಗಿಂತ ಸಮರ್ಥರಿರುತ್ತಾರೆ ಅಂತ ನೀವೇನೋ ಹೇಳ್ತೀರಿ. ಆದ್ರೆ ನಂಬೋದು ಹೇಗೆ ಗುರುಗಳೇ? ನಿಮಗಿಂತ ಹಿಂದೆ ಇಲ್ಲಿ ರಬೈ ಆಗಿದ್ದವರು ಕೂಡ ನಿವೃತ್ತಿ ಸಮಯದಲ್ಲಿ ಹಾಗೇ ಹೇಳಿದ್ರು”

ಅನಾಮಿಕ ಯೋಧ
ಇಸ್ರೇಲಿನ ಒಂದು ಊರಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್‌ ಬಂದು ಸ್ಮಾರಕದ ಮೇಲೆ ಹಾಕಿದ್ದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ, “ಮೋಷೆ ಸಿಲ್ಬರ್‌ಸ್ಟೀನ್‌. ಅನಾಮಿಕ ಯೋಧ’ ಎಂದು ಬರೆಯಲಾಗಿತ್ತು. 

ಸಭೆಯಲ್ಲಿ ಕೂತಿದ್ದ ಮೆಂಡೆಲ್‌ ತನ್ನ ಪಕ್ಕದ ರಾಫೆಲ್‌ನಲ್ಲಿ, “”ಅದು ಹೇಗ್ರೀ ಆಗುತ್ತೆ? ಮೋಷೆ ಅಂತ ಹೆಸರು ಬರೆದಿ¨ªಾರೆ. ಅದಾಗಿ ಅನಾಮಿಕ ಯೋಧ ಅಂತ ಹಾಕಿ¨ªಾರೆ. ಅನಾಮಿಕರಿಗೆ ಮಾಡಿದ ಸ್ಮಾರಕ ಅಂದ ಮೇಲೆ ಯಾವ ಯೋಧರ ಹೆಸರು ಗೊತ್ತಿಲ್ಲವೋ ಅವರಿಗೆ ಅಂತ ಅರ್ಥ ಅಲ್ವ?” ಎಂದು ವಿಚಾರಿಸಿದ. 
“”ರಾಫೆಲ್‌, ಹೌದು ಮೆಂಡೆಲ್‌ ಅವರೇ, ನೀವು ಹೇಳುವುದು ಸರಿ. ಮೋಷೆ ಸಿಲ್ಬರ್‌ಸ್ಟೀನ್‌ ಅವರು ಈ ಊರಿನ ಬಹಳ ಪ್ರಸಿದ್ಧ ವಕೀಲರು. ಪ್ರತಿಯೊಬ್ಬರಿಗೂ ಗೊತ್ತಿ¨ªೋರು. ಆದರೆ, ಸೈನಿಕನಾಗಿ ಅವರು ಯಾವಾಗ ಹೋರಾಡಿದರು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೇ ಅನಾಮಿಕ ಯೋಧ ಅಂತ ಹಾಕಿರೋದು” ಎಂದು ವಿವರಿಸಿದ. 

ಪ್ರಾರ್ಥನೆ
ಬೆನ್ನಿಯ ನಾಯಿ ಸತ್ತಿತು. ಆತ ರಬೈ ಅವರ ಬಳಿ ಬಂದ. “”ಗುರುಗಳೇ, ನನ್ನ ನಾಯಿಯ ಸಮಾಧಿಯ ಬಳಿ ಬಂದು ನೀವು ಅದರ ಸದ್ಗತಿಗಾಗಿ ದೇವರನ್ನು ಪ್ರಾರ್ಥಿಸುತ್ತೀರಾ?” ಕೇಳಿದ.

“”ಬೆನ್ನಿ, ನಿನ್ನ ಬೇಡಿಕೆಯೇನೋ ಸರಿ, ಆದರೆ ಅದನ್ನು ನನ್ನ ಕೈಯಲ್ಲಿ ನೆರವೇರಿಸುವ ಹಾಗೆ ಇಲ್ಲಪ್ಪ! ಮನುಷ್ಯರಲ್ಲದೆ ಬೇರಾವ ಜೀವಿಯ ಸಮಾಧಿಯ ಹತ್ತಿರ ನಿಂತೂ ನಾವು ಸದ್ಗತಿಗೆ ಪ್ರಾರ್ಥಿಸುವ ಕ್ರಮ ಇಲ್ಲ. ಧರ್ಮಗ್ರಂಥದಲ್ಲಿ ಅಂಥ ಕೆಲಸ ನಿಷಿದ್ಧ ಅಂತ ಬರೆದಿದೆ ಎಂದರು ರಬೈ. ಬೆನ್ನಿ ಪರಿಪರಿಯಾಗಿ ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಕೊನೆಗೆ ಆತ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸು ಹೋಗಲೇಬೇಕಾಯಿತು. ಹಿಂತಿರುಗಿ ಹೋಗುತ್ತ ಆತ, “”ಏನು ಹೇಳಲಿ! ನನ್ನ ನಾಯಿಯ ಪರವಾಗಿ ದೇವರನ್ನು ಪ್ರಾರ್ಥಿಸಲು ನೀವು ಒಪ್ಪಿಕೊಂಡಿದ್ದರೆ ಸಾವಿರ ಡಾಲರ್‌ ದಕ್ಷಿಣೆ ಕೊಡೋಣ ಅಂತ ಅಂದೊRಂಡಿ¨ªೆ. ಆದರೆ ಈಗ…?” ಎಂದು ಜೋರಾಗಿ ಕೂಗಿ ಹೇಳಿದ.

ಕೂಡಲೇ ರಬೈ ಹೊರಟುಹೋಗುತ್ತಿದ್ದ ಆತನನ್ನು ಕೂಗಿ ಕರೆದರು. “”ಬೆನ್ನೀ, ಬೆನ್ನೀ, ಬಾ ಇಲ್ಲಿ…” ಎಂದು ಜೋರಾಗಿ ಕೈ ಬೀಸಿದರು. ಬೆನ್ನಿ ವಾಪಸ್‌ ಬಂದ. “”ಈ ಕೆಲಸ ಆಗೋದೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳ್ತಿದ್ರಿ ಇಷ್ಟು ಹೊತ್ತು!” ಎಂದ ಕೋಪದಿಂದ.

“”ಹೌದಪ್ಪ! ಹೇಳಿ¨ªೆ ಹೌದು! ಆದ್ರೆ ನಿನ್ನ ನಾಯಿ ಧರ್ಮನಿಷ್ಠವಾಗಿತ್ತು ಅನ್ನೋದನ್ನ ನೀನು ಮೊದಲೇ ಹೇಳ್ಬೇಕೋ ಬೇಡ್ವೋ! ಬಾ, ಬಾ, ನಿನ್ನ ನಾಯಿಗಾಗಿ ಪ್ರಾರ್ಥಿಸೋಣ” ಎಂದರು ರಬೈ ಸದ್ಗತಿಯ ಪ್ರಾರ್ಥನೆಗೆ ತಯಾರಾಗುತ್ತ. 

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.