ಗುಂಡಿಗಳ ನಡುವೆ ರಸ್ತೆಗಳು
Team Udayavani, Oct 29, 2017, 6:35 AM IST
ರಸ್ತೆ ಗುಂಡಿಗಳು ಗಂಭೀರ ಸಮಸ್ಯೆಗಳೆಂಬುದು ಮರೆತುಹೋಗಿ, ಓಲಾಡುತ್ತ ಓಡಾಡುವುದೇ ಅಭ್ಯಾಸವಾಗಿ, ತಮಾಷೆಯ ಸಂಗತಿಗಳೆನಿಸುವ ಅನಿವಾರ್ಯತೆ ಬಂದೊಂದಗಿದೆ !
ಕಾಲೇಜು ದಿನಗಳಲ್ಲಿ ನಾನು ಗುಂಡಿ ನೋಡಿದ್ದು ಶರ್ಟಿನಲ್ಲಿ ಮಾತ್ರ, ನಲವತ್ತು ವರ್ಷಗಳ ಹಿಂದೆ ಪ್ಯಾಂಟಿಗೂ ಗುಂಡಿ ಇರುತ್ತಿತ್ತು. ನೀರು ತುಂಬುವ ಬಿಂದಿಗೆ ಆಕಾರದ ಗುಂಡಿಯೂ ನನಗೆ ಗೊತ್ತಿತ್ತು. ಆದರೆ ರಸ್ತೆ ಗುಂಡಿ ನಾನು ಕಂಡಿರಲಿಲ್ಲ. ನಗರದ ಬಬ್ಬೂರುಕಮ್ಮೆ ಹಾಸ್ಟೆಲ್ ಮುಂದೆ ನಿಂತರೆ ಶೇಷಾದ್ರಿ ರಸ್ತೆ. ಆ ಕಾಲಕ್ಕೆ ಸೊಗಸಾದ ರಸ್ತೆ, ರಸ್ತೆಯಲ್ಲಿ ಗುಂಡಿಗಳು ಇರಲಿಲ್ಲ. ಭಾನುವಾರ ಟ್ರಾಫಿಕ್ ಅತಿ ಕಡಿಮೆ ಇರುತ್ತಿದ್ದ ಅನೇಕ ರಸ್ತೆಗಳಲ್ಲಿ ಶೇಷಾದ್ರಿ ರಸ್ತೆಯೂ ಒಂದು. ಅದನ್ನು “ಮಹಾರಾಣಿ ಕಾಲೇಜ್ ರಸ್ತೆ’ ಎಂದು ಸಹ ಕರೆಯುತ್ತಿದ್ದರು. ಕಾಲೇಜಿನ ಯುವ ರಾಣಿಯರ ರವಿಕೆಗೂ ಗುಂಡಿಗಳು ಇರುತ್ತಿತ್ತು. ಬೆನ್ನ ಹಿಂದೆ ಗುಂಡಿ ಹಾಕುವ “ಗಂಡಾ-ಗುಂಡಿ ಬ್ಲೌಸ್’ ಸಹ ಜನಪ್ರಿಯವಾಗಿದ್ದ ಕಾಲವದು.
ಅಂಥ ದಿನಗಳಲ್ಲಿ ನಾವು ರಸ್ತೆಯಲ್ಲಿ ಕ್ರಿಕೆಟ್ ಆಡಿದ್ದೇವೆ. ಪ್ಯಾಂಟು, ರವಿಕೆಗಳಲ್ಲಿ ಮಾಯವಾದ ಗುಂಡಿಗಳು ಈಗ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿವೆ. ಎಲ್ಲೆಲ್ಲೂ ಗುಂಡಿ! ಓಡಾಡುವಾಗ ಗುಂಡಿಗಳನ್ನು ದಾಟುವುದೇ ಒಂದು ಸರ್ಕಸ್ಸು! ಗುಂಡಿ ಮೊದಲೋ, ರಸ್ತೆ ಮೊದಲೋ ಎಂಬುದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬಂತೆ ಬೀಜವೃಕ್ಷ ನ್ಯಾಯದಂತೆ ಚರ್ಚಾಸ್ಪದ ವಿಷಯ.
ಮೊನ್ನೆ ಒಬ್ಬ ಟೂವ್ಹೀಲರ್‌ನವರು ವಿಚಿತ್ರವಾಗಿ ಗಾಡಿ ಓಡಿಸುತ್ತಿದ್ದ. ಅವನು ಕುಡಿದಿರಬಹುದು ಎಂಬ ಅನುಮಾನ ನನಗೆ. ಅವನನ್ನು ನಿಲ್ಲಿಸಿ ಕೇಳಿದೆ.
“”ಎಣ್ಣೆ ಹಾಕಿದ್ದೀಯಾ?”
“”ಗಾಡಿಗಾ ಸಾರ್?”
“”ಅಲ್ಲ, ನೀನು!”
“”ಛೇ ಛೇ ! ನಾನು ಕುಡಿದಿಲ್ಲ. ಗುಂಡಿಗಳನ್ನು ಅವಾಯ್ಡ ಮಾಡಿಕೊಂಡು ಗಾಡಿ ಓಡಿಸ್ತಾ ಇದ್ದೀನಿ” ಎಂದ.
ಇದೇ ರೀತಿ ಗುಂಡಿಗಳನ್ನು ಆವಾಯ್ಡ ಮಾಡಲು ಹೋಗಿ ಸಿಟಿ ಮಾರ್ಕೆಟ್ ಬಳಿಯ ಸೇತುವೆ ರಸ್ತೆಯಲ್ಲಿ ಹಿರಿಯ ದಂಪತಿಗಳು ಬಸ್ಸಿಗೆ ಸಿಕ್ಕಿ ಪರಮಾತ್ಮನ ಪಾದ ಸೇರಿದರು. ಗುಂಡಿ ಶರ್ಟ್‌ನಲ್ಲಿದ್ದರೆ ಚೆನ್ನ. ರಸ್ತೆಯಲ್ಲಿದ್ದರೆ ಜೀವಕ್ಕೆ ಗುನ್ನ.
ನಾನು ಮೊದಲ ಸಲ ಲಂಡನ್‌ಗೆ ಹೋಗಿ¨ªಾಗ ಅಲ್ಲಿನ ಸುಂದರ ರಸ್ತೆಗಳನ್ನು ಕಂಡು ಬೆಕ್ಕಸಬೆರಗಾಗಿದ್ದೆ. ರಸ್ತೆಗಳು ಅದೆಷ್ಟು ಸ್ವತ್ಛ, ಅದೆಷ್ಟು ನೈಸು, ಅದೆಷ್ಟು ಮಿರಿಮಿರಿ ಬಣ್ಣ. ನನ್ನ ಕರೆಸಿದ್ದ ಗೆಳೆಯನನ್ನು ಕೇಳಿ¨ªೆ, “”ಲಂಡನ್ ರಸ್ತೆಗಳನ್ನು ನೋಡ್ತಾ ಇದ್ರೆ ನನಗೆ ಎಷ್ಟು ಖುಷಿಯಾಗ್ತಿದೆ ಗೊತ್ತಾ?”
“”ಉರುಳುಸೇವೆ ಮಾಡಬೇಕು ಅನ್ನಿಸ್ತಿದೆಯಾ?”
“”ಇಲ್ಲ, ನನ್ನ ನೆಟ್ ಬನಿಯನ್‌ನ ಒಗೆದು ಒಣಗಿ ಹಾಕಬೇಕು ಈ ರಸ್ತೆ ಮೇಲೆ ಅಂತ ಆಸೆ ಆಗ್ತಿದೆ” ಎಂದಿದ್ದೆ.
ಕೂಡಲೇ ನನ್ನ ಗೆಳೆಯ, “”ಇಲ್ಲ, ಇದಕ್ಕೆ ಅವಕಾಶ ಇಲ್ಲ, ಲಂಡನ್ ಸರ್ಕಾರ ಖಂಡಿತ ಅನುಮತಿ ಕೊಡೋಲ್ಲ” ಎಂದ.
“”ಯಾಕೆ ಕೊಡೋಲ್ಲ?”
“”ರಸ್ತೆ ಕೊಳೆಯಾಗಬಾರದಲ್ಲ?” ಎಂದು ಅವನು ಕಾಲು ಎಳೆದಿದ್ದ.
ನಮ್ಮಲ್ಲೂ ಅನೇಕ ಉತ್ತಮ ರಸ್ತೆಗಳಿವೆ. ಉದಾಹರಣೆಗೆ ಮುಂಬೈಯಿಂದ ಪೂನಾಗೆ ಹೋಗುವ ಎಕ್ಸ್‌ಪ್ರೆಸ್ ಹೈವೇ ಅದ್ಭುತವಾಗಿದೆ. ಬೆಂಗಳೂರಿನಿಂದ ಮುಳುಬಾಗಿಲಿಗೆ ಹೋಗುವ ರಸ್ತೆ ಇಂದಿಗೂ ಚೆನ್ನಾಗಿದೆ. ಅಷ್ಟೇ ಏಕೆ, ಬೆಂಗಳೂರಿನಿಂದ ಹಾಸನಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿಯನ್ನು ನಾನು ಕಂಡಿಲ್ಲ. ನಮ್ಮ ನಗರದ ಬಿಬಿಎಂಪಿ ರಸ್ತೆಯಲ್ಲಿ ಮಾತ್ರ ಗುಂಡಿ ಮೇಲೆ ಗುಂಡಿ. ಮಳೆ ಬಂದರೆ ರಸ್ತೇನೇ ಚರಂಡಿ!
“ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ? ಸಾಯೋದರೊಳಗೆ ನೋಡು ಒಮ್ಮೆ ಬೆಂಗ್ಳೂರ್ ಗುಂಡಿ’ ಎಂಬ ಹಾಡು ಇತ್ತೀಚೆಗೆ ಜಡಿದ ಮಳೆಯ ನಂತರ ಹುಟ್ಟಿಕೊಂಡಿದೆ.
ಗುಂಡಿ ಇರುವ ಕಡೆ ಯಮ ಇರುತ್ತಾನೆ.
ಯಮರಾಜ ಶಿರಾಡಿ ಘಾಟಿ, ಚಾರ್ಮುಡಿ ಘಾಟಿಗಳಲ್ಲಿ ಆಗಾಗ ಓಡಾಡುತ್ತಾನಂತೆ. ಅದೇ ರೀತಿ ಬೆಂಗಳೂರಿಗೂ ಬಂದಿರಬಹುದಾ ಎಂದು ಯೋಚಿಸುತ್ತಿದ್ದಂತೆಯೇ ನಾಯಂಡಹಳ್ಳಿಯ ರಸ್ತೆ ಜಂಕ್ಷನ್ ಬಳಿ ಯಮ ಪ್ರತ್ಯಕ್ಷನಾಗಿದ್ದ. ಅದೇ ರಸ್ತೆ ಕೆರೆಯಾಗಿ ಕಾರನ್ನು ತೇಲಿಸಿದ್ದು. ಅಲ್ಲಿಗೆ ಜವರಾಯ ಬಂದಿದ್ದ.
ಆತನ ವೇಷ-ಭೂಷಣ ಕಂಡು ನನಗೆ ಆಶ್ಚರ್ಯವಾಗಿತ್ತು. ಆಜಾನುಬಾಹು ವ್ಯಕ್ತಿ ಭಾರಿ ಕಿರೀಟ, ಭಾರಿ ಮೀಸೆ, ಒಂದು ಕೈಯಲ್ಲಿ ಗದೆ, ಮತ್ತೂಂದು ಕೈಯಲ್ಲಿ ಪಾಶ! ಆಗಾಗ ವಿಕಟವಾಗಿ ನಗುತ್ತಿದ್ದ.
ಆತನ ಬಳಿಗೆ ಹೋದೆ, ನಮಸ್ಕಾರ ಮಾಡಿದೆ. ಖಚಿತ ಪಡಿಸಿಕೊಳ್ಳಲು ಕೇಳಿದೆ.
“”ತಮ್ಮನ್ನ ನೋಡಿದ್ರೆ ಯಮನ್ನ ನೋಡಿದಂತೆ ಆಗುತ್ತೆ”.
“”ನಾನೇರೀ ಯಮ… ಒರಿಜಿನಲ್ ಯಮ. ಇದು ಒರಿಜಿನಲ್ ಮೀಸೆ!”
“”ಹಾಂ, ನೀವು ಯಮಾನ…? ಹಾಗಾದ್ರೆ ಕೋಣ ಎಲ್ಲಿ ಸ್ವಾಮಿ” ಎಂದೆ.
“”ಟ್ರಾಫಿಕ್ ಜಾಸ್ತಿ ಇದೆ ಅಂತ ಪೊಲೀಸರು ನನ್ನ ಕೋಣಾನ ಸಿಟಿ ಲಿಮಿಟ್ಸ್ ಒಳಗೆ ಬಿಡಲಿಲ್ಲ, ಫೋರ್ ವ್ಹೀಲರ್ ಪಾರ್ಕಿಂಗ್ ಸಹ ಈ ರಸ್ತೇಲಿ ಇಲ್ಲ” ಎಂದ.
“”ಈಗ ಬಂದ ಉದ್ದೇಶ…?”
“”ಅರ್ಜೆಂಟ್ ಇರೋ ಎಕ್ಸ್‌ಟ್ರಾ ಜನಾನ ಕರೊRಂಡು ಹೋಗ್ಬೇಕು ಅಂತ ಬಂದೆ” ಎಂದ.
“”ಇದು ಮೋಸ. ಆಯಸ್ಸೇ ಮುಗಿಯದೇ ಇರೋರನ್ನ ಹೇಗೆ ಕರೊRಂಡು ಹೋಗ್ತಿàಯಾ ದೇವ? ಪರಿಹಾರ ರೂಪದಲ್ಲಿ ಸಿಗೋ ಐದು ಲಕ್ಷದ ಚೆಕ್‌ಗಿಂತ ಜೀವ ದೊಡ್ಡದು” ಎಂದು ಯಮನನ್ನು ಸಾವಿತ್ರಿ ನಾಟಕದ ದೃಶ್ಯದಲ್ಲಿ ಸಾವಿತ್ರಿ ಕೇಳುವಂತೆ ದಬಾಯಿಸಿದೆ.
“”ನೋಡ್ರಿ, ಈಚೆಗೆ ಸ್ಪೀಡ್ ಜಾಸ್ತಿ ಆಗ್ತಿದೆ, ಆಯಸ್ಸು ಮುಗಿಯದಿದ್ರೂ, ಜನ ಗುಂಡಿಗೆ ಬಿದ್ದು ಸಾಯ್ತಾ ಇ¨ªಾರೆ. ಅವರ್ನ ನಾನು ಸ್ಪೀಡ್ ಆಗಿ ಕರೊRಂಡು ಹೋಗೋಕೆ ಬಂದಿದ್ದೀನಿ” ಎಂದ.
“”ಇದಕ್ಕೆ ಪರಿಹಾರ ಇಲ್ಲವಾ? ಈ ಸಾವುಗಳನ್ನ ನಿವಾರಿಸೋಕೆ ಆಗೋಲ್ವಾ?” ಎಂದು ಯೋಚನೆ ಮಾಡಿದೆ.
“”ಈಗಾಗಲೇ ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ನಗರದ ರಸ್ತೆಗಳ ರಿಪೇರಿಗಾಗಿ ಬಿಡುಗಡೆ ಆಗಿದೆ. ವಾರದಲ್ಲಿ ಗುಂಡಿಗಳು ಮಾಯವಾಗುತ್ತವೆ. ಸ್ವಲ್ಪ ಸಹಕರಿಸು ದೇವ” ಎಂದೆ.
ಯಮ ಗಹಿಗಹಿಸಿ ನಕ್ಕ.
“”ಮಣ್ಣು ತಿನ್ನೋ ಕಂಟ್ರಾಕ್ಟರುಗಳು ಜಾಸ್ತಿ ಆಗಿ¨ªಾರೆ. ಮಣ್ಣಿನ ಜೊತೆ ಸಿಮೆಂಟು, ಮರಳು, ಜೆಲ್ಲಿಕಲ್ಲು, ಡಾಂಬರು ಸಹ ತಿಂದು ತೇಗ್ತಾ ಇ¨ªಾರೆ. ಈ ಕೈಂಕರ್ಯದಲ್ಲಿ ಕೆಲವು ಇಂಜಿನಿಯರುಗಳು ಶಾಮೀಲಾಗಿ¨ªಾರೆ ವತ್ಸಾ ” ಎಂದು ಯಮ ಸ್ಟಡಿ ರಿಪೋರ್ಟ್ ನೀಡಿದ.
“”ಆದರೆ ಗುಂಡಿ ಮುಚ್ಚೋಕೆ ಸರಕಾರ ಪಣತೊಟ್ಟಿದೆ”
“”ಸರ್ಕಾರಗಳು ಬರುತ್ತೆ, ಹೋಗುತ್ತೆ. ರಸ್ತೆ ಕಬಳಿಸೋ ಜನ ಕಡಿಮೆ ಆಗ್ತಿಲ್ಲವಲ್ಲ ವತ್ಸ?” ಎಂದ.
“”ಈ ಸಲ ಗ್ಯಾರಂಟಿ ಗುಂಡಿ ಮುಚಾ¤ರೆ. ನಾಲ್ಕು ಸಾವಿರ ಕೋಟಿ ಮಂಜೂರಾಗಿದೆ”
“”ಗುಂಡಿಗಳೇ ಮಾಯ ಆಗಿಬಿಟ್ರೆ ನಮ್ಮ ಯಮಲೋಕದಲ್ಲಿ ಆ್ಯಕ್ಸಿಡೆಂಟ್ ಕೇಸೇ ಇರೋದಿಲ್ಲ. ಎಷ್ಟು ಡಾಂಬರು ಹಾಕಿದರೂ ಮತ್ತೆ ಗುಂಡಿ ಬೀಳುತ್ತೆ, ಗುಂಡೀಲಿ ಮತ್ತೆ ಜನ ಬೀಳ್ತಾರೆ. ಮತ್ತೆ ಗುಂಡಿ ಬಾಯಿ ಬಿಡುತ್ತೆ. ಮತ್ತೆ ಹಣ ಬಿಡುಗಡೆ ಆಗುತ್ತೆ, ಮತ್ತೆ ಮುಚಾ¤ರೆ. ಇದು ನಿರಂತರ ಬ್ರೆçಬ್ ಸೈಕಲ್ಲು”
“”ನಮ್ಮ ರಸ್ತೆಗಳನ್ನ ರಿಪೇರಿ ಮಾಡೋಕೆ ಒಂದು ದಾರಿಯಾದರೂ ತೋರಿಸಪ್ಪಾ?” ಎಂದಾಗ, “”ಕಂಟ್ರಾಕ್ಟರ್ ಮರಳಪ್ಪನ ಹೆಸರು ನೀನು ಕೇಳಿದ್ದೀಯಾ?” ಎಂದ.
“”ಈಗ ಅವನಿಲ್ಲ. ಸತ್ತಿ¨ªಾನೆ” ಎಂದೆ.
“”ಇಗೋ, ನಿನ್ನ ಮುಂದೆ ಪ್ರತ್ಯಕ್ಷ ಆಗ್ತಾನೆ” ಎಂದಾಗ ಕೆಲವು ವರ್ಷಗಳ ಹಿಂದೆ ಸತ್ತಿದ್ದ ಕಂಟ್ರಾಕ್ಟರ್ ಮರಳಪ್ಪ ಮ್ಯೂಸಿಕ್ ಜೊತೆ ಪ್ರತ್ಯಕ್ಷ ಆಗಿ ನಮಸ್ಕಾರ ಮಾಡಿದ.
“”ಅರೇ! ಮರಳಪ್ಪ! ಹೇಗಿದ್ದೀಯಾ?” ಎಂದೆ.
“”ಸ್ವಾಮಿ, ನನ್ನ ಕಾಲದಲ್ಲಿ ರೋಡ್ ಕಂಟ್ರಾಕ್ಟ್ ಅಂದರೆ ದೇವರ ಕೆಲಸ ಆಗಿತ್ತು. 30-40 ವರ್ಷಗಳ ಹಿಂದೆ ನಾನು ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿ¨ªೆ” ಎಂದು ತನ್ನ ಕಾಲದ ಕತೆಯನ್ನು ಶುರು ಮಾಡಿದ.
“”ಆಗ ಬಿಬಿಎಂಪಿಗೆ ಕಿಕ್‌ಬ್ಯಾಕ್ ಬರೀ 10% ಇತ್ತು. ಬರ್ತಾ ಬರ್ತಾ ಅದು ಜಾಸ್ತಿ ಆಯ್ತು”
“”ಅಂದರೆ ನೂರು ಕೋಟಿ ರಸ್ತೆಗೆ ಹತ್ತು ಕೋಟಿ ಕಿಕ್‌ಬ್ಯಾಕ್ ಕೊಡಬೇಕಾ?” ಎಂದು ಗಾಬರೀಲಿ ಕೇಳಿದೆ.
“”ಹೌದು ಸ್ವಾಮಿ, ಅದು ಸತ್ಯಕಾಲ. ಕಿಕ್‌ಬ್ಯಾಕ್ 10% ಇದ್ರೆ ಕೆಲಸ ಚೆನ್ನಾಗಿ ಆಗುತ್ತೆ, ಆದರೆ ಅದು ಬೆಳೆದು 20% ಆಯ್ತು, 30% ಆಯ್ತು, 40% ವರೆಗೂ ಬಂದಿದೆ” ಎಂದ.
“”40% ಕಿಕ್‌ಬ್ಯಾಕಾ? ಏನು ಹೀಗೆ ಹೇಳ್ತಾ ಇದ್ದೀಯಾ?” ಎಂದೆ.
“”ಸತ್ತವರು ಯಾವೊತ್ತು ಸುಳ್ಳು ಹೇಳ್ಳೋದಿಲ್ಲ. ಜೊತೆಗೆ ನಮ್ಮ ಸ್ವಂತಕ್ಕೆ 15% ಪರ್ಸೆಂಟ್ ಲಾಭ ಬೇಕಲ್ಲ, ಎÇÉಾ ಸೇರಿ 55% ಆಯ್ತು. ಉಳಿದ 45% ಪರ್ಸೆಂಟ್‌ನಲ್ಲಿ ರಸ್ತೆ ಮಾಡಿದ್ರೆ 45 ದಿನ ಮಾತ್ರ ಗಟ್ಟಿ” ಎಂದು ಅವನು ಅಂಕಿಅಂಶಗಳನ್ನು ಮುಂದಿಟ್ಟ.
“”ಹಾಂ…! ನೂರು ಕೋಟಿಯಲ್ಲಿ 55% ಕೋಟಿ ಸೋರಿ ಹೋದರೆ ರಸ್ತೆ ಗಟ್ಟಿಯಾಗಿರೋಕೆ ಹೇಗೆ ಸಾಧ್ಯ..?” ಎಂದೆ.
“”ನೀವು ಯಮಲೋಕಕ್ಕೆ ಬಂದು ನೋಡಿ, ಎÇÉಾ ರಸ್ತೆಗಳು ಚೆನ್ನಾಗಿವೆ. ನಂದೇ ಕಂಟ್ರಾಕ್ಟ್” ಎಂದ ಯಮನಿಗೆ ಖುಷಿಯಾಯ್ತು. ಮೀಸೆ ಹುರಿ ಮಾಡಿದ. “”ಲಂಚಕೋರರನ್ನ ಬಾಣಲೇಲಿ ಹಾಕಿ ಡಬ್ಬಲ್ ರೋಸ್ಟ್ ಮಾಡಿಬಿಡ್ತೀನಿ” ಎಂದ.
“”ಹೌದಾ ದೇವಾ…?” ಆಶ್ಚರ್ಯದಿಂದ ಕೇಳಿದೆ.
“”ನನ್ನ ಲೋಕದಲ್ಲಿ ಒಂದು ಕೋಟಿ ರೂಪಾಯಿ ಲಂಚ ಪಡೆದರೆ ಒಂದು ಕಾಲು ಕತ್ತರಿಸ್ತೀವಿ, ಎರಡು ಕೋಟಿಗೆ ಒಂದು ಕೈ, ಒಂದು ಕಾಲು ತೆಗೀತೀವಿ. 5 ಕೋಟಿ ಲಂಚಕ್ಕೆ ತಲೇನೇ ತೆಗೀತೀವಿ” ಎಂದ ಯಮ.
“”ಹಾಂ, ಭಾರೀ ಶಿಕ್ಷೆ ಆಯ್ತು…?”
“”ಶಿಕ್ಷೆಯನ್ನು ಸ್ಥಳದÇÉೇ ಕೊಡ್ತೀವಿ, ನಿಮ್ಮÇÉಾದ್ರೆ ಅದು ವಿಚಾರಣೆಗೆ ಹೋಗುತ್ತೆ. ಸಾಕ್ಷಿಗಳು ಇರೋಲ್ಲ. ವಿಚಾರಣೆ ಮುಗಿಯೋಕೆ 20 ವರ್ಷ ಆಗುತ್ತೆ. ಅಷ್ಟರಲ್ಲಿ ಕಂಟ್ರಾಕ್ಟರೇ ಸತ್ತಿರ್ತಾನೆ, ಈ ಮರಳಪ್ಪ ಸತ್ತಿದ್ದೂ ಹಾಗೇ” ಎಂದ ಯಮ.
“”ನೀವು ಹೇಳ್ತಾ ಇರೋದು ನಿಜಾನ ಯಮ…?” ಎಂದು ಮತ್ತೆ ಪ್ರಶ್ನೆ ಮಾಡಿದೆ.
“”ಕಂಟ್ರಾಕ್ಟರ್ ಕಿಕ್‌ಬ್ಯಾಕ್ ಕೊಡ್ತಿಲ್ಲ ಅಂತ ಆತ ತನ್ನ ಹೆಂಡತಿ, ಮಕ್ಕಳ ಮೇಲೆ ಪ್ರಮಾಣ ಮಾಡ್ಲಿ. ನಾನು ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ತೀನಿ” ಎಂದು ಮರಳಪ್ಪ ಚಾಲೆಂಜ್ ಮಾಡಿದ.
“”ನೀನು ಈಗಾಗಲೇ ಸತ್ತಿದ್ದೀಯಾ, ಸತ್ತಿರೋ ನೀನು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳೋಕೆ ಹೇಗೆ ಸಾಧ್ಯ” ಎಂದಾಗ ಆತ ನಕ್ಕು ಹೇಳಿದ.
“”ಹಾಗಾದ್ರೆ ನನ್ನ ಪರವಾಗಿ ನೀವೇ ಆತ್ಮಹತ್ಯೆ ಮಾಡಿಕೊಳ್ಳಿ”.
“”ನಾನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲಿ” ನಾನು ರೇಗಿದೆ.
“”ಯಾಕೆಂದರೆ ತಪ್ಪಾಗ್ತಿರೋದು ನಿಮ್ಮಿಂದ, ಸರ್ಕಾರದಿಂದಲ್ಲ…”
“”ಅದು ಹೇಗೆ?”
“”ಜನಗಳು ಪ್ರಶ್ನೆ ಮಾಡ್ತಾ ಇಲ್ಲ. ನಿಮ್ಮ ರಸ್ತೆನಲ್ಲಿ ಯಾವುದಾದ್ರೂ ಕಂಟ್ರಾಕ್ಟರ್ ಕೆಲಸ ಶುರುವಾದ್ರೆ ಆ ಕಂಟ್ರಾಕ್ಟರ್ ಹೆಸರು, ಅವನ ಫೋನ್ ನಂಬರ್ ಎಷ್ಟು ಕೋಟಿಯ ಯೋಜನೆ, ಯಾವಾಗ ಶುರುವಾಗುತ್ತೆ, ಯಾವಾಗ ಮುಗಿಯುತ್ತೆ ಅಂತ ಒಂದು ಬೋರ್ಡ್ ಬರೆಸಿ ಆ ಜಾಗದಲ್ಲಿ ಹಾಕೆºàಕು, ಬೋರ್ಡ್ ಹಾಕೋವರೆಗೂ ಆ ಕಂಟ್ರಾಕ್ಟರ್‌ಗೆ ಕೆಲಸ ಮಾಡೋಕೆ ಜನ ಬಿಡಬಾರದು” ಎಂದು ಮರಳಪ್ಪ ಎಚ್ಚರಿಸಿದ.
“”ಅರೇ, ಈ ಸ್ಕೀಮು ತುಂಬಾ ಚೆನ್ನಾಗಿದೆಯಲ್ಲ ಜನ ಉಸ್ತುವಾರಿಗೆ ಇಳಿದರೆ ಲಂಚ ತಡೆಗಟ್ಟಬಹುದು” ಎಂದು ನಾನು ಆಶ್ಚರ್ಯ ಪಟ್ಟೆ.
“”ಅವರು ತಿನ್ನೋ ಹಣ ನಿಮುª ಸ್ವಾಮಿ, ಟ್ಯಾಕ್ಸ್ ರೂಪದಲ್ಲಿ ನೀವು ಕೊಟ್ಟಿದ್ದು. ನಿಮ್ಮ ಹಣದಲ್ಲಿ ಆ ಕಂಟ್ರಾಕ್ಟರ್ ನಿಮ್ಮ ಮನೆಮುಂದೆ ಕೆಲಸ ಮಾಡೋವಾಗ ನೀವು ವಿವರ ಕೇಳದೇ ಬಾಯಿ ಮುಚೊRಂಡಿದ್ರೆ ಆಗೋದೇ ಹೀಗೆ. ಹಣ ಸೋರುತ್ತೆ, ರಸ್ತೆಗಳಲ್ಲಿ ತೂತು ಬೀಳುತ್ತೆ. ಇದರಲ್ಲಿ ಸರ್ಕಾರದ್ದೂ ತಪ್ಪಿಲ್ಲ. ಬಿ.ಬಿ.ಎಂ.ಪಿದೂ ತಪ್ಪಿಲ್ಲ. ಎಲ್ಲಿವರೆಗೂ ಜನ ಬಾಯಿ ಮುಚೊRಂಡಿರ್ತಾರೋ, ಅಲ್ಲಿವರೆಗೆ ಜನ ಗುಂಡೀಲಿ ಬಿದ್ದು ಸಾಯ್ತಾನೇ ಇರ್ತಾರೆ” ಎಂದು ಮರಳಪ್ಪ ತೀರ್ಮಾನ ಕೊಟ್ಟು ಅದೃಶ್ಯನಾದ. ಅಷ್ಟರಲ್ಲಿ ಯಮನಿಗೆ ಸಿಗ್ನಲ್ ಬಂತು.
“”ನಾನು ಹೊರಡಬೇಕು, ಹೈವೇನಲ್ಲಿ ಯಾರೋ ಕುಡಿದು ಗಾಡಿ ಓಡಿಸಿ ಒಟ್ಟಿಗೆ ಆರು ಜನ ಸತ್ತಿ¨ªಾರಂತೆ, ಅವರನ್ನ ಕರೊRಂಡು ಹೋಗೋದಿದೆ” ಎಂದು ಯಮನು ಅದೃಶ್ಯನಾದ.
ಸತ್ತ ಕಂಟ್ರಾಕ್ಟರ್ ಮರಳಪ್ಪ ನನ್ನ ಕಣ್ಣು ತೆರೆಸಿದ್ದ. ಆದರೆ ಜನರ ಕಣ್ಣು ತೆರೆಸಲು ಯಾವ ಸರ್ಕಾರ ಬರಬೇಕು ಎಂದು ಯೋಚಿಸುತ್ತಾ ನಡೆಯುತ್ತಿದ್ದ ನಾನು ಗುಂಡಿಯಲ್ಲಿ ಬಿ¨ªೆ.
“”ಅಯ್ಯೋ” ಎಂದು ಚೀರಿದಾಗ ನನ್ನ ಕನಸು ಮುಗಿದಿತ್ತು.
– ಎಂ. ಎಸ್. ನರಸಿಂಹಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.