ಪಾರಂಪರಿಕ ಜ್ಞಾನದ ಬಗ್ಗೆ ಅಸಡ್ಡೆ ಸಲ್ಲ: ಇಸ್ರೋ ಅಧ್ಯಕ್ಷ
Team Udayavani, Oct 29, 2017, 7:45 AM IST
ಬೆಂಗಳೂರು: “ಪಾಶ್ಚಿಮಾತ್ಯದ ಜ್ಞಾನವೇ ಶ್ರೇಷ್ಠ ಎಂಬ ಸಮೂಹಸನ್ನಿಗೆ ಒಳಗಾಗಿ ದೇಶದ ಪಾರಂಪರಿಕ ಜ್ಞಾನದ ಬಗೆಗಿನ ಅಸಡ್ಡೆ ಸರಿಯಲ್ಲ’ ಎಂದು ಪ್ರತಿಪಾದಿಸಿದ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ಕುಮಾರ್, “ಈ ಧೋರಣೆಯಿಂದ ಹೊರ ಬರುವಂತೆ’ ಯುವ ಸಮುದಾಯಕ್ಕೆ ಕರೆ ನೀಡಿದರು.
ವೇದಾಂತ ಭಾರತಿ ಸಂಸ್ಥೆಯಿಂದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ದಶಮಃ ಸೌದರ್ಯಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಿಮಾತ್ಯದಿಂದ ಬಂದಿದ್ದೆಲ್ಲವೂ ಸರಿ; ನಮ್ಮ ಪರಂಪರೆಯಲ್ಲಿನ ವಿಷಯಗಳು ತಪ್ಪು ಎಂಬ ಭಾವನೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದ ಪಾರಂಪರಿಕ ಜ್ಞಾನದ ಬಗ್ಗೆ ಅಸಡ್ಡೆ ಮೂಡಿ, ಪಾಶ್ಚಿಮಾತ್ಯದ ಜ್ಞಾನ, ವಿಜ್ಞಾನವೇ ಶ್ರೇಷ್ಠ ಎಂಬ ಧೋರಣೆ ಬೆಳೆಯುತ್ತಿದೆ. ಇದೊಂದು ತಪ್ಪು ಕಲ್ಪನೆಯಾಗಿದ್ದು ಇದರಿಂದ ಯುವ ಸಮೂಹ ಹೊರ ಬರಬೇಕು. ಪರಂಪರಾಗತವಾಗಿ ಋಷಿಮುನಿಗಳು ಮತ್ತು ಆದಿಶಂಕರರಿಂದ ಅಪಾರ ಜ್ಞಾನ ಪ್ರಾಪ್ತಿಯಾಗಿದೆ. ಇದನ್ನು ಮನನ ಮಾಡಿಕೊಂಡು ಈ ಜ್ಞಾನವನ್ನು ಪಸರಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಜೀವನದುದ್ದಕ್ಕೂ ಕುತೂಹಲ ಕಾಯ್ದುಕೊಂಡವರು ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕುತೂಹಲದಿಂದ ವಿಜ್ಞಾನದಲ್ಲಿ
ತೊಡಗಿಸಿಕೊಂಡವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಮನುಷ್ಯ ತನ್ನ ಕಣ್ಣಿನಿಂದ ಸೂರ್ಯ, ಚಂದ್ರ, ನಕ್ಷತ್ರಗಳನ್ನು
ನೋಡಬಹುದು. ಆದರೆ, ಆಧುನಿಕ ಸಾಧನಗಳನ್ನು ಬಳಸಿದಾಗ ಆಕಾಶದ ಬೆರಗು ಲೋಕ ಕಂಡಿತು. ಉಪಗ್ರಹಗಳು ಸೇರಿದಂತೆ ಇತರ ಮಾನವ ಶೋಧಿತ ವಸ್ತುಗಳು ವಿಜ್ಞಾನದಲ್ಲಿನ ಬೆರಗುಲೋಕವನ್ನು ಪರಿಚಯಿಸಿದವು.
ಮೆದುಳಿನ ಕುರಿತಾಗಿಯೂ ಅನೇಕ ಸಂಶೋಧನೆಗಳು ನಡೆಯುತ್ತಿದ್ದು, ಯಾವುದೇ ಸ್ಥಳಕ್ಕೆ ಹೋಗದಿದ್ದರೂ ಅಲ್ಲಿನ ಅನುಭವ ಪಡೆಯುವಂತ ತಂತ್ರಜ್ಞಾನಗಳ ಸಂಶೋಧನೆ ನಡೆಯುತ್ತಿದೆ.
ಕಳೆದ ಕೆಲ ದಶಕಗಳ ಹಿಂದೆ ಮೊಬೈಲ್ ಬಗೆಗೆ ಮಾತನಾಡಿದಾಗಲೂ ಯಾರೂ ನಂಬುತ್ತಿರಲಿಲ್ಲ. ಆದರೆ ತಂತ್ರಜ್ಞಾನ ಅದನ್ನು ಸಾಧ್ಯವಾಗಿಸಿದೆ. ವಿಜ್ಞಾನದ ಬಗೆಗಿನ ಕುತೂಹಲಕ್ಕೆ ಇದೇ ಸಾಕ್ಷಿ ಎಂದು ವಿವರಿಸಿದರು.
ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀಮಠದ ಶ್ರೀಶಂಕರಭಾರತೀ ಸ್ವಾಮೀಜಿ ಮಾತನಾಡಿ, ವಿದ್ಯೆಯಿದ್ದರೆ ಮೂರು ಲೋಕದ ಒಡೆಯರಿದ್ದಂತೆ ಎಂಬ ಮಾತನ್ನು ಹೇಳಿದ್ದ. ಶಂಕರಾಚಾರ್ಯರು ವಿದ್ಯೆಯ ಮಹತ್ವವನ್ನು ಸಾರಿದ್ದಾರೆ. ಅವರು ರಚಿಸಿದ ಸೌಂದರ್ಯಲಹರಿ ಪಠಣೆಯಿಂದ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗಲಿದೆ. ಸರಿ, ತಪ್ಪುಗಳನ್ನು ಗುರುತಿಸುವ ಕನಿಷ್ಠ ಜ್ಞಾನವನ್ನೂ ತೋರದ ಮನುಷ್ಯರಿಗೂ ಹಾಗೂ ಪ್ರಾಣಿಗಳ ನಡುವಿನ ವ್ಯತ್ಯಾಸ ಏನೆಂಬುದು ತಿಳಿಯದಾಗಿದೆ.
ವಿದ್ಯೆಯ ಮೂಲಕ ಜ್ಞಾನ ದೊರೆಯಲಿದ್ದು, ಮಾನವರಾಗಿ ಹುಟ್ಟಿದ ಮೇಲೆ ಜ್ಞಾನಾರ್ಜನೆಗೆ ಮುಂದಾಗದಿದ್ದರೆ, ಮನುಷ್ಯ ಕೂಡ ಪ್ರಾಣಿಯಾಗುತ್ತಾನೆ. ಶಂಕರಾಚಾರ್ಯರು ಸಂಪತ್ತಿನಿಂದ ಶ್ರೀಮಂತರಾಗಿರಲಿಲ್ಲ. ಅವರು ಜ್ಞಾನದಲ್ಲಿ ಶ್ರೀಮಂತರಾಗಿದ್ದರು. ಅದಕ್ಕಾಗಿ ಸಾವಿರಾರು ವರ್ಷಗಳ ನಂತರವೂ ಅವರನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದರು ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಪಾರಾಯಣೋತ್ಸವ ಸಂಚಾಲನ ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಅಧ್ಯಕ್ಷ ಎಸ್. ಎಸ್.ನಾಗಾನಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.