ಜಯಸೂರ್ಯನ ಹಿಂದೆ ಪತ್ರಕರ್ತರು


Team Udayavani, Oct 29, 2017, 10:34 AM IST

reporter.jpg

ಉತ್ತರ ಕರ್ನಾಟಕದ ಮಂದಿ ಸೇರಿ ಸಿನಿಮಾ ಮಾಡುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಆದರೆ, ಬಹುತೇಕ ಉತ್ತರ ಕರ್ನಾಟಕದ ಮಾಧ್ಯಮ ಮಿತ್ರರು ಸೇರಿ ಒಂದು ಸಿನಿಮಾ ಮಾಡಿ, ಈಗ ತೆರೆಗೆ ತರುತ್ತಿರುವುದು ಹೊಸ ವಿಷಯ. ಹೌದು, “ಜಯಸೂರ್ಯ’ ಸಿನಿಮಾ ಮೂಲಕ ಸಂತೋಷ್‌ ಶ್ರೀರಾಮುಡು ನಾಯಕ, ನಿರ್ದೇಶಕರಾಗುತ್ತಿದ್ದಾರೆ. ಬೆಳಗಾವಿಯಲ್ಲಿ ವಾಹಿನಿಯೊಂದರ ಪತ್ರಕರ್ತರಾಗಿರುವ ಸಂತೋಷ್‌ಗೆ ಇದು ಮೊದಲ ಚಿತ್ರ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಇವರೇ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರೇ ಈ ಚಿತ್ರದ ನಿರ್ಮಾಪಕರು. ಚಿಕ್ಕಂದಿನಿಂದಲೂ ಅವರಿಗೆ ಸಿನಿಮಾ ಮೇಲೆ ಆಸಕ್ತಿ ಇದ್ದುದರಿಂದ, ಈಗ ಚಿತ್ರ ಮಾಡೋಕೆ ಸಾಧ್ಯವಾಗಿದೆ. ಅವರ ತಾಯಿ, ಸಹೋದರ ಅವರ ಸಹಕಾರ ಈ ಚಿತ್ರ ರೂಪುಗೊಳ್ಳಲು ಸಾಧ್ಯವಾಗಿದೆ. ಈಗ ಸಿನಿಮಾ ಮುಗಿದಿದ್ದು, ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಇದೊಂದು ಯೋಧನೊಬ್ಬನ ಕುರಿತಾದ ಚಿತ್ರ. ನಾಯಕನ ಹೆಸರು ಇಲ್ಲಿ ಸೂರ್ಯ. ಎಲ್ಲವನ್ನೂ ಜಯಿಸುವುದರಿಂದಲೇ ಅವನನ್ನು “ಜಯಸೂರ್ಯ’ ಅಂತ ಕರೆಯುತ್ತಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಜಾತಿಗಿಂತ ಪ್ರೀತಿ ದೊಡ್ಡದು, ಪ್ರೀತಿಗಿಂತ ದೇಶ ದೊಡ್ಡದು ಎಂಬ ಸಂದೇಶವಿದೆ. ಇಲ್ಲಿ ಮನಮಿಡಿಯುವ ಸನ್ನಿವೇಶಗಳಿವೆ. ಬಹುತೇಕ ಇಲ್ಲಿ ಉತ್ತರ ಕರ್ನಾಟಕ ಭಾಷೆಯೇ ಇದೆ.

ಸುಮಾರು 40 ದಿನಗಳ ಕಾಲ ಬೆಳಗಾವಿ, ಗೋಕಾಕ್‌, ಎಂ.ಮಲ್ಲಾಪುರ, ದಾಸನಹಟ್ಟಿ, ಗೋಕಾಕ್‌ ಫಾಲ್ಸ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಕಮ್‌ ಹೀರೋ ಸಂತೋಷ್‌ ಶ್ರೀರಾಮುಡು. ಈ ಚಿತ್ರದಲ್ಲಿ ಪತ್ರಕರ್ತರಾದ ಬಯಿಬುವಾ ಕಾಂಬ್ಳೆ, ಚಂದ್ರು, ಶವಾನಂದ್‌, ಜಿತೇಂದ್ರ, ಶಂಕರ್‌ ಸೇರಿದಂತೆ ಸ್ಥಳೀಯ ಕಲಾವಿದರು ನಟಿಸಿದ್ದಾರೆ.

ಇನ್ನು, ಬೆಳಗಾವಿಯ ಅಂಜಲಿ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿದ್ದು ಹಾಗು ಡಾ.ವೆಂಕಟೇಶ್‌ ಅವರು ಕ್ಯಾಮೆರಾ ಹಿಡಿದರೆ, ಮುನ್ನ ಚಿತ್ರದುರ್ಗ ಅವರು ಸಂಗೀತ ನೀಡಿದ್ದಾರೆ. ಇಲಿ ಆರು ಹಾಡುಗಳಿದ್ದು, ಜಿತೇಂದ್ರ ಹಾಗು ರಾಮ್‌ದಾಸ್‌ ಎಂಬುವರು ಎರಡು ಹಾಡು ಬರೆದರೆ, ನಿರ್ದೇಶಕ ಸಂತೋಷ್‌ ಶ್ರೀರಾಮುಡು ಅವರು ಉಳಿದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.