ಲಿಂಗಾಯತ ರ್ಯಾಲಿಗೆ ಸಕಲ ಸಿದ್ಧತೆ


Team Udayavani, Oct 29, 2017, 12:37 PM IST

h3-horr-vinay.jpg

ಹುಬ್ಬಳ್ಳಿ: ಲಿಂಗಾಯತರ ನಡಿಗೆ ಹುಬ್ಬಳ್ಳಿ ಕಡೆಗೆ ಬೃಹತ್‌ ರ್ಯಾಲಿಗೆ ಸಕಲ ಸಿದ್ಧತೆಗಳು ನಡೆದಿದ್ದು, ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. 

ನ. 5ರಂದು ಹುಬ್ಬಳ್ಳಿ ನೆಹರು ಮೈದಾನದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಶನಿವಾರ ಮೂರುಸಾವಿರ ಮಠದ ಆವರಣದ ಸಭಾಂಗಣದಲ್ಲಿ ಕಾರ್ಯಾಲಯ ಉದ್ಘಾಟಿಸಿ ನಂತರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಜಿಲ್ಲೆಯ ಎಲ್ಲ ತಾಲೂಕು, ರಾಜ್ಯದ ವಿವಿಧ ಜಿಲ್ಲೆ ಅಷ್ಟೇ ಅಲ್ಲದೆ ನೆರೆ ರಾಜ್ಯಗಳಿಂದಲೂ ರ್ಯಾಲಿಗೆ ಜನರು ಆಗಮಿಸಲಿದ್ದಾರೆ. ಸುಮಾರು 5 ಲಕ್ಷ ಜನರು ಪಾಲ್ಗೊಳ್ಳಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ ಎಂದರು. 

ಈಗಾಗಲೇ ವಿವಿಧೆಡೆ ನಡೆದ ರ್ಯಾಲಿಗಳು ಯಶಸ್ವಿಯಾಗಿದ್ದು, ಹುಬ್ಬಳ್ಳಿಯಲ್ಲಿ ನಡೆಯುವ ರ್ಯಾಲಿ ಹೊಸ ಇತಿಹಾಸ ನಿರ್ಮಿಸಬೇಕು. ಆ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಬಹಿರಂಗ ಸಭೆ ನಡೆಸಿ ಹೆಚ್ಚು ಹೆಚ್ಚು ಜನರನ್ನು ಕರೆತರಬೇಕು.

ಹು-ಧಾ ಅಂಜುಮನ್‌ ಸಂಸ್ಥೆಯವರು. ಜೈನ್‌ ಧರ್ಮದವರು, ಮಹಾಜನ್‌ ಸಮಾಜದವರು ರ್ಯಾಲಿಗೆ ಬೆಂಬಲ ನೀಡಲಿದ್ದಾರೆ ಎಂದರು. ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಎಲ್ಲರು ತನು-ಮನ-ಧನದಿಂದ ಸಹಕಾರ ನೀಡಬೇಕು.

ಇದು ಬಸವಣ್ಣನವರ ಕಾರ್ಯ, ಇದಕ್ಕೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ನ. 2 ರಂದು ಬೈಕ್‌ ರ್ಯಾಲಿ, 3ರಂದು ಕಾರು ರ್ಯಾಲಿ ನಡೆಸಿ ಪ್ರಚಾರ ನಡೆಸಬೇಕು ಎಂದರು. ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ನೀಲಕಂಠ ಅಸೂಟಿ, ಸದಾನಂದ ಡಂಗನವರ, ರಾಜಣ್ಣಾ ಕೊರವಿ,

-ಅಜ್ಜಪ್ಪ ಬೆಂಡಿಗೇರಿ, ಅನಸೂಯಾ ಅರಕೇರಿ, ರಾಜಶೇಖರ ಮೆಣಸಿನಕಾಯಿ ಮುಂತಾದವರು ಸಲಹೆ-ಸೂಚನೆ ನೀಡಿದರು. ಅರವಿಂದ ಕಟಗಿ, ವೀರಣ್ಣ ಕಲ್ಲೂರ, ಮೋಹನ ಅಸುಂಡಿ, ಈರಪ್ಪ ಎಮ್ಮಿ, ಪ್ರೊ| ಎಸ್‌.ವಿ. ಪಟ್ಟಣಶೆಟ್ಟಿ, ಬಸವರಾಜ ಬೆಂಡಿಗೇರಿ ಇತರರಿದ್ದರು. 

ಟಾಪ್ ನ್ಯೂಸ್

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.