ಸಂಘ ಪರಿವಾರದ ಜತೆಗೆ ಸಿಎಂ ಒಳಒಪ್ಪಂದ

Team Udayavani, Oct 29, 2017, 12:39 PM IST

m2-sangha.jpg

ಮೈಸೂರು: ಅಲ್ಪಸಂಖ್ಯಾತರಲ್ಲಿ ಅಭದ್ರತೆ ಭಾವನೆ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘ ಪರಿವಾರದ ಜತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್‌ಭಟ್‌, ಜಗದೀಶ್‌ ಕಾರಂತ್‌, ಪ್ರಮೋದ್‌ ಮುತಾಲಿಕ್‌ ಅವರುಗಳು ಕೋಮುಭಾವನೆ ಪ್ರಚೋಧಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಈ ಮೂಲಕ ಅಭದ್ರತೆಯ ಭಾವನೆ ಉಂಟುಮಾಡಿ, ಅಲ್ಪ ಸಂಖ್ಯಾತರು ತಮ್ಮ ಮುಂದೆ ಅಸಹಾಯಕರಾಗಿ ಬಂದು ಕೈಕಟ್ಟಿ ನಿಲ್ಲಲಿ ಎನ್ನುವ ತಂತ್ರ ಹೆಣೆದಿದ್ದಾರೆ .ಅಲ್ಪ$ಸಂಖ್ಯಾತರ ವಿಚಾರದಲ್ಲಿ ಬಿಜೆಪಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಹಿಡನ್‌ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಅಹಿಂದಾ?: ನಾನು ಅಹಿಂದ ಪರ ಎನ್ನುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಅಲ್ಪ$ಸಂಖ್ಯಾತರು, ಹಿಂದುಳಿದವರಿಗೆ ಎಷ್ಟು ಕ್ಷೇತ್ರದಲ್ಲಿ ಟಿಕೆಟ್‌ ಕೊಡುತ್ತಾರೆ ಎಂದು ಪ್ರಶ್ನಿಸಿದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಮುಸ್ಲಿಮರ ಪರಿಸ್ಥಿತಿ ಏನಾಗಿದೆ, ಕಾಂಗ್ರೆಸ್‌ ಬೆಂಬಲಿಸಿದ ಅವರಿಗೆ ನೀವು ಮಾಡಿದ್ದೇನು? ಇ

ಕ್ಬಾಲ್‌ ಅಹಮದ್‌ ಸರಡಗಿ ಸೋಲಿಸಿ ನಿಮ್ಮ ಆಪ್ತ ಸುರೇಶ್‌ಗೆ ವಿಧಾನಪರಿಷತ್‌ ಸದಸ್ಯ ಮಾಡಿದ್ದು, ಬಿ.ಎ.ಫಾರೂಕ್‌ ಸೋಲಿಸಿ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಂಡಿದ್ದೇ ಅಹಿಂದವೇ ಎಂದು ಪ್ರಶ್ನೆ ಮಾಡಿದರು. ಹೈದ್ರಾಬಾದ್‌ ಕರ್ನಾಟಕ ಭಾಗದ ಮುಖಂಡರಾಗಿದ್ದ ಖಮರುಲ್ಲಾ ಇಸ್ಲಾಂ ಅವರನ್ನು ಯಾವ ರೀತಿ ನಡೆಸಿಕೊಂಡಿರೀ, ನಿಮ್ಮ ನಡವಳಿಕೆಯಿಂದ ಅವರು ಸಾವನ್ನಪ್ಪಿದರು ಎಂದು ಹೇಳಿದರು.

ವೈಯಕ್ತಿಕ ಟೀಕೆ ಮಾಡಿಲ್ಲ: ನಾನು ವಿಷಯಾಧಾರಿತ, ಸೈದ್ಧಾಂತಿಕವಾಗಿ ಮಾತನಾಡುತ್ತೇನೆಯೇ ಹೊರತು ವೈಯಕ್ತಿಕವಾಗಿ ಮಾತನಾಡಲ್ಲ. ನೀವು ಧಮಕಿ ಹಾಕಿಸಿ ನನ್ನ ಮಾತನ್ನು ನಿಲ್ಲಿಸುತ್ತೇನೆ ಅನ್ನುವುದೆಲ್ಲ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು. ನಾನು ಮತ್ತು ಸಿದ್ದರಾಮಯ್ಯ ಅವರು ಒಂದೇ ಸಮಾಜದವರು.

ಕೆಲವು ನಿವೃತ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿರುದ್ಧ ಏಕೆ ಮಾತಾಡುತ್ತೀರಾ ಎಂದು ಕೇಳುತ್ತಾರೆ, ನಾನು ವಿಷಯಾಧಾರಿತವಾಗಿ ಮಾತನಾಡುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಾನು ಏನು ಹೇಳಬೇಕು ಅಂದು ಕೊಂಡಿದ್ದೇನೋ,ಅದನ್ನು ಹೇಳಿಯೇ ಹೇಳುತ್ತೇನೆ ಎಂದರು.

ಬೆಲೆಯಿಲ್ಲ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಪೊಲೀಸ್‌ ಅಧಿಕಾರಿಗಳಿಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದಾರೆ. ಅವರ ದರ್ಬಾರಿಗೆ ಎಲ್ಲವು ಸತ್ತು ಹೋಗಿದೆ ಎಂದರು.

ಬಿಎಸ್‌ವೈ ಗುಣಗಾನ: ರಾಜಕೀಯದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಬಿ.ಎಸ್‌.ಯಡಿಯೂರಪ್ಪ ಮುಕ್ತ ಮನಸ್ಸಿನವರು, 2008ರ ಚುನಾವಣೆಯಲ್ಲಿ ಸೋತರೂ ಎಂ.ಮಹದೇವ್‌ ಅವರನ್ನು ಆಹಾರ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದರು. ವಿ.ಸೋಮಣ್ಣ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿಸಿದರು. ಸಿ.ಎಚ್‌.ವಿಜಯಶಂಕರ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ, ಅರಣ್ಯ ಸಚಿವರನ್ನಾಗಿ ಮಾಡಿದ್ದರು, ಅದಕ್ಕಿಂತ ಇನ್ನೇನು ಮಾಡಬೇಕಿತ್ತು ಎಂದು ಮಾರ್ಮಿಕವಾಗಿ ನುಡಿದರು.

ಟಾಪ್ ನ್ಯೂಸ್

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.