![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 30, 2017, 6:35 AM IST
ಬೆಳ್ತಂಗಡಿ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.
“ಸನ್ಮಾನ್ಯ ಪ್ರಧಾನಮಂತ್ರಿಲೆ ಎಂಕ್ಲೆನ ತುಳುನಾಡುದ ಬುಕ್ಕ ಮಾತಾ ತುಳು ಬಂಧುಲೆನ ಪರವಾದ್ ಸೊಲ್ಮೆಲು. ಈರೆಗ್ ಸ್ವಾಗತ’ (ಸನ್ಮಾನ್ಯ ಪ್ರಧಾನಮಂತ್ರಿಯವರೇ, ನಿಮಗೆ ತುಳುನಾಡಿನ ಮತ್ತು ತುಳು ಬಂಧುಗಳ ಪರವಾಗಿ ಸ್ವಾಗತ) ಎಂದು ಹೆಗ್ಗಡೆ ಭಾಷಣದಲ್ಲಿ ಹೇಳಿದರು. ತುಳು ಭಾಷೆ ಯನ್ನು ಸೇರ್ಪಡೆ ಮಾಡುವ ಕುರಿತು ನಾನು ಈ ಹಿಂದೆಯೂ ತಮ್ಮನ್ನು ಭೇಟಿಯಾಗಿದ್ದು ಈಗಲೂ ಅದೇ ಆಗ್ರಹ ಮಾಡುತ್ತಿದ್ದೇನೆ. ಇದು ಸಮಸ್ತ ತುಳುವರ ಬೇಡಿಕೆ ಎಂದರು.
ಒಂದೆಡೆ ಹೆಗ್ಗಡೆಯವರು ತುಳುವಿನ ಕುರಿತು ಬೇಡಿಕೆ ಮಂಡಿಸುತ್ತಿದ್ದರೆ ಇನ್ನೊಂದೆಡೆ ಸಂಸದ ನಳಿನ್ ಅವರು ಉಳುಮೆ ಸಂದರ್ಭ ಎತ್ತುಗಳ ಹೆಗಲ ಮೇಲೆ ಇಡುವ ನೊಗದ ಮಾದರಿಯನ್ನು ಪ್ರಧಾನಿ ಗೆ ನೀಡಿದರು ಹಾಗೂ ಕಂಬಳದ ಚಿತ್ರವನ್ನು ಕೊಡುಗೆಯಾಗಿ ಕೊಟ್ಟರು.
You seem to have an Ad Blocker on.
To continue reading, please turn it off or whitelist Udayavani.