ಸೌಹಾರ್ದಕ್ಕಾಗಿ ‘ಹಾರ್ಮನಿ’ ಸೈಕಲ್ ರ‍್ಯಾಲಿ
Team Udayavani, Oct 30, 2017, 12:14 PM IST
ಮಹಾನಗರ: ಕೊಡಿಯಾಲ್ ಬೈಲ್‌ನ ಸಂತ ಅಲೋಶಿಯಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೌಹಾರ್ದ ಸಂದೇಶ ಹೊತ್ತ ಸೈಕಲ್ ರ‍್ಯಾಲಿ ‘ಹಾರ್ಮನಿ’ ರವಿವಾರ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿತು.
ಶಾಲಾ ಆವರಣದಲ್ಲಿ ರ‍್ಯಾಲಿಯನ್ನು ಉದ್ಘಾಟಿಸಿದ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ| ಫಾ| ಡ್ಯಾನೀಶಿಯಸ್ ವಾಜ್ ಮಾತನಾಡಿ, ಜಾತ್ಯತೀತ ರಾಷ್ಟ್ರದಲ್ಲಿ ನಾವು ಇಂತಹ ರ‍್ಯಾಲಿಯ ಮೂಲಕ ವಿವಿಧ ಜಾತಿ ಧರ್ಮ, ಸಂಸ್ಕೃತಿ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಸಂದೇಶವನ್ನು ಸಾರಬೇಕಿದೆ. ನಾವು ಎಲ್ಲರಿಗಾಗಿ ಎಂಬ ಉದ್ದೇಶವನ್ನೂ ಸಾಕಾರಗೊಳಿಸಲು ಈ ರ‍್ಯಾಲಿ ಸಹಕಾರಿಯಾಗಲಿದೆ ಎಂದರು. ನಟ ವಿನೀತ್, ಮುಖ್ಯೋಪಾಧ್ಯಾಯ ರೆ| ಫಾ| ಜೆರಾಲ್ಡ್ ಫುರ್ಟಾಡೊ ಮೊದಲಾದವರು ರ‍್ಯಾಲಿಗೆ ಹಸಿರು ನಿಶಾನೆ ತೋರಿದರು.
ಶಾಲಾ ಮುಂಭಾಗದಿಂದ ಆರಂಭಗೊಂಡ ರ‍್ಯಾಲಿಯು ಜ್ಯೋತಿ ಸರ್ಕಲ್ ವೃತ್ತ, ಬಂಟ್ಸ್‌ಹಾಸ್ಟೆಲ್ ವೃತ್ತ, ಪಿ.ವಿ.ಎಸ್. ವೃತ್ತ, ಬಲ್ಲಾಳ್‌ಭಾಗ್ ವೃತ್ತ, ಮಣ್ಣಗುಡ್ಡೆಯ ಮೂಲಕ ಸಾಗಿ ಲೇಡಿಹಿಲ್ ವೃತ್ತ, ಲಾಲ್‌ಭಾಗ್ ಮಾರ್ಗವಾಗಿ ಪಿವಿಎಸ್ ಮೂಲಕ ಬಿಷಪ್ಸ್ ಹೌಸ್ ಮುಂಭಾಗದಿಂದ ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಪ.ಪೂ.ಕಾಲೇಜಿನ ಬಳಿಯ ಗೊನ್ಜಾಗ ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು.
ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿ’ ಸೋಜಾ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾಗಿ ದೇಶಕ್ಕೆ ಕೀರ್ತಿ ತರಬೇಕು. ಉತ್ತಮ ಆರೋಗ್ಯಕ್ಕೆ ಇಂತಹ ರ‍್ಯಾಲಿ ಪೂರಕ ಎಂದರು.
ಜೀತನ್ ಡಿ’ ಸೋಜಾ, ಜೀತನ್ ಸಲ್ಡಾನಾ, ಮ್ಯಾಕ್ಲಿನ್ ಕೊನ್ಸೆಸೊ ಹಾಗೂ ವರ್ನನ್ ತಾವ್ರೊ ಅವರು ಸೈಕಲ್
ಸಾಹಸಗಳನ್ನು ಪ್ರದರ್ಶಿಸಿದರು. ಮಂಗಳೂರು ಬೈಸಿಕಲ್ ಕ್ಲಬ್ ಸದಸ್ಯರು ರ‍್ಯಾಲಿಗೆ ಸಹಕರಿಸಿದರು.
ರಾಜ್ ಕುಂದರ್ ಅವರಿಂದ ಛಾಯಾಗ್ರಹಣದ ಡ್ರೋನ್ ವ್ಯವಸ್ಥೆ, ಪ್ರಥಮ ಚಿಕಿತ್ಸೆಗಾಗಿ ಯೇನೆಪೊಯ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಸ್ಥೆಯ ಪ್ರಮುಖ ಧರ್ಮಗುರುಗಳು ಉಪಸ್ಥಿತರಿದ್ದರು. ಉಪ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಎಸ್. ವಂದಿಸಿದರು. ಲ್ಯಾನ್ಸಿ ಡಿ’ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಜಾನ್‌ಚಂದ್ರನ್ ನೇತೃತ್ವ ವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.