ಶ್ವಾನಗಳ ಅಂದ ಚಂದಕ್ಕೆ ಸಾರ್ವಜನಿಕರು ಫಿದಾ

Team Udayavani, Oct 30, 2017, 12:39 PM IST

m2-dog.jpg

ಮೈಸೂರು: ದೈತ್ಯ ದೇಹದ ಜತೆಗೆ ಆಕರ್ಷಕ ಸೌಂದರ್ಯ, ತುಂಟತನಗಳಿಂದ ನೋಡುಗರ ಕಣ್ಣುಕುಕ್ಕುವಂತೆ ಮಾಡಿದ ನೂರಾರು ಮುದ್ದಾದ ಶ್ವಾನಗಳು ಎಲ್ಲರನ್ನು ಆಕರ್ಷಿಸಿದವು. ಇದಕ್ಕೆಲ್ಲಾ ವೇದಿಕೆಯಾಗಿದ್ದು ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದ ಆವರಣ.

ನಗರದ ಕೆನೈನ್‌ ಕ್ಲಬ್‌ ಆಫ್ ಮೈಸೂರು ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಶ್ವಾನ ಪ್ರದರ್ಶನ ಸ್ಪರ್ಧೆದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ವಿವಿಧ ತಳಿಗಳ ನೂರಾರು ಶ್ವಾನಗಳು ಪ್ರದರ್ಶನದ ಮೆರಗನ್ನು ಹೆಚ್ಚಿಸಿದವು. ನಿರೀಕ್ಷೆಗೂ ಮೀರಿ ಆಗಮಿಸಿದ್ದ ಶ್ವಾನಪ್ರಿಯರು ಆಕರ್ಷಕ ದೇಹ, ತುಂಟಾಗಳಿಂದ ಎಲ್ಲರನ್ನು ಸೆಳೆಯುತ್ತಿದ್ದ ಶ್ವಾನಗಳ ಆಕರ್ಷಣೆಗೆ ಮನಸೋತು ಅವುಗಳ ಅಂದ-ಚಂದವನ್ನು ಕಂಡು ಖುಷಿಪಟ್ಟರು.

ಯಾವ ಶ್ವಾನಗಳಿದ್ದವು: ಈ ಬಾರಿಯ ಪ್ರದರ್ಶನದಲ್ಲಿ 3 ಕೆಜಿ ತೂಕದ ಮಿನಿಯೇಚರ್‌ ಪಿಂಚರ್‌ನಿಂದ 120 ಕೆಜಿ ತೂಕದ ಸೇಂಟ್‌ ಬರ್ನಾಡ್‌ವರೆಗಿನ ಹಲವು ಶ್ವಾನಗಳು ಕಾಣಿಸಿತು. ಪ್ರಮುಖವಾಗಿ ಗೋಲ್ಡನ್‌ ರಿಟ್ರೀವರ್‌, ಕಾರವಾನ್‌ ಹೌಂಡ್‌, ಮುದೋಳ್‌, ರಾಜಪಾಳ್ಯ, ವಿಪೆಟ್‌, ಪಗ್‌, ಶಿಚ್‌ ತಜ್‌Õ, ಲ್ಯಾಬ್ರಾಡಾರ್‌ ಬೀಗಲ್‌, ಅಕಿಟಾ, ಚೌಚೌ, ಗ್ರೇಡ್‌ಡೇನ್‌, ಸೇಂಟ್‌ ಬರ್ನಾಡ್‌, ಜರ್ಮನ್‌ ಷೆಪರ್ಡ್‌, ಬುಲ್‌ಡಾಗ್‌, ಬಾಕ್ಸರ್‌, ಡಾಬರ್‌ವೆುನ್‌, ಪೊಮೆರಿಯನ್‌, ಸೈಬೀರಿಯನ್‌ ಅಸ್ಕಿ ಶ್ವಾನಗಳು ಗಮನ ಸೆಳೆದವು.

ಒಟ್ಟಾರೆ ಸ್ಪರ್ಧೆಯಲ್ಲಿ 24 ಜಾತಿಯ 286 ಶ್ವಾನಗಳು ಪಾಲ್ಗೊಂಡಿದ್ದವು. ಪ್ರದರ್ಶನ ನೋಡಲು ಬಂದಿದ್ದ ಯುವಕ, ಯುವತಿಯರು ಆಕರ್ಷಣೀಯ ಪಗ್‌, ಮಿನಿಯೇಚರ್‌ ಪಿಂಚರ್‌ ಮುಂತಾದ ಶ್ವಾನಗಳೊಂದಿಗೆ ಸೆಲ್ಫಿà ತೆಗೆದುಕೊಂಡು ಸಂಭ್ರಮಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆ: ಶ್ವಾನ ಪ್ರದರ್ಶನವನ್ನು ವೀಕ್ಷಿಸಲು ಕ್ಲಬ್‌ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ದುಬಾರಿ ಶ್ವಾನಗಳಾದ ಅಫ್ಘಾನ್‌ ಹೌಲ್‌, ಸೈಬೀರಿಯನ್‌ ಅಸ್ಕಿ, ಚೌ ಚೌ, ಸೇಂಟ್‌ ಬರ್ನಾಡ್‌ ಇನ್ನಿತರ ಶ್ವಾನಗಳು ಬಿಸಿಲಿನ ಬೇಗೆ ತಾಳಲಾರದೆ ಹವಾ ನಿಯಂತ್ರಿತ ವಾಹನದಲ್ಲೇ ಕಾಲ ಕಳೆದವು. ಈ ಶ್ವಾನಗಳಿಗಾಗಿ ಅದರ ಮಾಲೀಕರು ಹವಾನಿಯಂತ್ರಣ ಹೊಂದಿರುವ ವಾಹನಗಳನ್ನು ತಂದಿದ್ದರು.

ಕ್ಲಬ್‌ನಿಂದಲೂ ಶ್ವಾನಗಳ ದಣಿವಾರಿಸಲು ಐಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ದೆಹಲಿ, ಪುಣೆ, ಕೊಚ್ಚಿ ಭಾಗಗಳಿಂದ ಶ್ವಾನಗಳು ಆಗಮಿಸಿದ್ದವು. ಸ್ಪರ್ಧೆಯ ತೀಪುìಗಾರರಾಗಿ ದೆಹಲಿಯ ಶ್ಯಾಮ್‌ ಮೆಹ್ತಾ, ಬೆಂಗಳೂರಿನ ಟಿ.ಜೆ.ಪ್ರೀತಮ್‌ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕೆನೈನ್‌ ಕ್ಲಬ್‌ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್‌, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಪ್ರಸಾದ್‌ಮೂರ್ತಿ ಹಾಜರಿದ್ದರು.

ಟಾಪ್ ನ್ಯೂಸ್

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

WPL 2025: RCB Player Retention List Released; Major player out

WPL 2025: ಆರ್‌ ಸಿಬಿ ಆಟಗಾರರ ರಿಟೆನ್ಶನ್‌ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್

10

Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್

INDvsNZ; ಕಿವೀಸ್‌ ಆಟಗಾರನಿಗೆ ಹೇಗೆ ಸಹಾಯ ಮಾಡಿದ್ರಿ…: ಸಿಎಸ್‌ ಕೆ ವಿರುದ್ದ ಉತ್ತಪ್ಪ ಗರಂ

INDvsNZ; ಕಿವೀಸ್‌ ಆಟಗಾರನಿಗೆ ಹೇಗೆ ಸಹಾಯ ಮಾಡಿದ್ರಿ…: ಸಿಎಸ್‌ ಕೆ ವಿರುದ್ದ ಉತ್ತಪ್ಪ ಗರಂ

Ivan-Dsoza

MUDA: ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಅದಕ್ಕೆ ಆತ್ಮಸ್ಥೈರ್ಯ ಹೆಚ್ಚಿದೆ: ಐವನ್‌

BIKE

Test Ride: ಟೆಸ್ಟ್ ರೈಡ್‌ಗಾಗಿ ಬೈಕ್ ಹಿಡಿದುಕೊಂಡು ಹೋದವ ಬರಲೇ ಇಲ್ಲ… ಸಿಬಂದಿ ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

Udupi: ಮುನಿಯಾಲ್‌ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್‌

Udupi: ಮುನಿಯಾಲ್‌ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್‌

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

WPL 2025: RCB Player Retention List Released; Major player out

WPL 2025: ಆರ್‌ ಸಿಬಿ ಆಟಗಾರರ ರಿಟೆನ್ಶನ್‌ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್

10

Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.