ದಂಡ ವಿಧಿಸಿದರೂ ತ್ಯಾಜ್ಯ ಎಸೆಯುವುದು ನಿಂತಿಲ್ಲ
Team Udayavani, Oct 30, 2017, 4:39 PM IST
ಬೆಳ್ಳಾರೆ: ಸುಳ್ಯದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯ – ಬೆಳ್ಳಾರೆ -ಐವರ್ನಾಡು – ಚೊಕ್ಕಾಡಿ
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರುವ ಕಾರಣ ಪರಿಸರ ಮಲಿನಗೊಳ್ಳುತ್ತಿದೆ.
ಪೈಚಾರ್‌ನಿಂದ ಸೋಣಂಗೇರಿ – ಬೆಳ್ಳಾರೆ ರಸ್ತೆಯಲ್ಲಿ ಸಾಗಿದರೆ ಬೇಂಗಮಲೆ ಸಮೀಪ ಈ ರಸ್ತೆ ಬೆಳ್ಳಾರೆ ಮತ್ತು
ಚೊಕ್ಕಾಡಿಗೆ ಕವಲೊಡೆಯುತ್ತದೆ. ಈ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ಕೋಳಿ ತ್ಯಾಜ್ಯ, ಊಟಕ್ಕೆ ಬಳಸಿದ
ತಟ್ಟೆಗಳು, ಹಳಸಲು ಆಹಾರ, ಕೊಳೆತ ತರಕಾರಿ ರಾಶಿ ಹಾಕಿದ್ದರಿಂದ ಗಬ್ಬು ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ದಿನನಿತ್ಯ
ಸಾವಿರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣಿಸಬೇಕಾಗಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ.
ಅನೇಕ ವರ್ಷಗಳಿಂದ ಕಿಡಿಗೇಡಿಗಳು ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ.
ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯ ಆಡಳಿತ ಪ್ರಯತ್ನಿಸಿದೆ. ಕಳೆದ ತಿಂಗಳು ಈ ಭಾಗದ ಸ್ಥಳೀಯರ ಸಹಕಾರ ಪಡೆದು ವಠಾರವನ್ನು ಸಂಪೂರ್ಣ ಸ್ವಚ್ಛಗೊಳಿಸಿ ತ್ಯಾಜ್ಯ ಎಸೆಯದಂತೆ ನಾಮ ಫಲಕವನ್ನೂ ಅಳವಡಿಸಲಾಗಿತ್ತು. ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಜಿಲ್ಲಾ
ಪಂಚಾಯತ್ ಸದಸ್ಯರೇ ಒಬ್ಬ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತನಿಂದ ಗ್ರಾಮ ಪಂಚಾಯತ್‌ಗೆ ದಂಡ ಕಟ್ಟಿಸಿಕೊಂಡರೂ ಯಾವುದೇ ಪರಿಣಾಮ ಬೀರಿಲ್ಲ. ಕಸ ಎಸೆಯುವ ಕಿಡಿಗೇಡಿ ಕೃತ್ಯ ಮುಂದುವರಿದಿದೆ.
ಯಾರ ಕೃತ್ಯ?
ಈ ತ್ಯಾಜ್ಯ ಎಸೆಯುವ ಪ್ರದೇಶ ಜಾಲ್ಸೂರು ಮತ್ತು ಐವರ್ನಾಡು ಗ್ರಾಮ ಪಂಚಾಯತ್‌ನ ಗಡಿಭಾಗವಾಗಿದೆ. ಐವ
ರ್ನಾಡು ಗ್ರಾ.ಪಂ.ಗೆ ಸೇರಿದ ಭಾಗದಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚು. ಇಲ್ಲಿ ಕೋಳಿ ತ್ಯಾಜ್ಯವೇ ಜಾಸ್ತಿ ಪ್ರಮಾಣದಲ್ಲಿರುವ
ಕಾರಣ ಕೋಳಿ ಸಾಗಾಟ ನಡೆಸುವವರ ಮೇಲೆಯೇ ಸ್ಥಳೀಯರಿಗೆ ಹೆಚ್ಚು ಅನುಮಾನವಿದೆ.
ಒಳ್ಳೆಯ ಬುದ್ಧಿ ಕೊಡಲಿ
ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕೆಂದು ನಾವು ತುಂಬಾ ಪ್ರಯತ್ನ ಮಾಡುತ್ತಿದ್ದೇವೆ. ಒಂದು ತಿಂಗಳ ಹಿಂದೆ ಸಾಮೂಹಿಕ ಸ್ವತ್ಛತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ತ್ಯಾಜ್ಯ ಎಸೆಯುವವರಿಗೆ ದೇವರೇ ಒಳ್ಳೆಯ ಬುದ್ಧಿ ಕೊಟ್ಟು ತ್ಯಾಜ್ಯ ಎಸೆಯದಂತೆ ಮಾಡಲಿ.
– ರಾಜೀವಿ ಪರ್ಲಿಕಜೆ,
ಐವರ್ನಾಡು ಗ್ರಾಪಂ ಅಧ್ಯಕ್ಷರು
ನಾಗರಾಜ್ ಎನ್.ಕೆ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.