ಹತ್ತೇ ದಿನದಲ್ಲಿ ಕೊಹ್ಲಿ ಮರಳಿ ನಂ.1
Team Udayavani, Oct 31, 2017, 6:30 AM IST
ದುಬಾೖ: ನ್ಯೂಜಿಲ್ಯಾಂಡ್ ವಿರುದ್ದ 2 ಶತಕ ಸಹಿತ ಅಮೋಘ ಆಟವಾಡಿದ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಹತ್ತೇ ದಿನಗಳಲ್ಲಿ ಏಕದಿನ ಕ್ರಿಕೆಟಿನ ನಂಬರ್ ವನ್ ಬ್ಯಾಟ್ಸ್‌ಮನ್ ಆಗಿ ಪುನರ್ ಸ್ಥಾಪಿತರಾಗಿದ್ದಾರೆ. ಎಬಿ ಡಿ ವಿಲಿಯರ್ 2ನೇ ಸ್ಥಾನಕ್ಕೆ ಇಳಿದಿದ್ದಾರೆ.
ಕಿವೀಸ್ ಸರಣಿಯಲ್ಲಿ ಒಟ್ಟು 263 ರನ್ ಗಳಿಸಿದ ಕೊಹ್ಲಿ 889 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ನೆಗೆದರು. ಇದು ಭಾರತೀಯ ಬ್ಯಾಟ್ಸ್‌ಮನ್ ಒಬ್ಬನ ಸರ್ವಾಧಿಕ ರೇಟಿಂಗ್ ಅಂಕ. 1998ರಲ್ಲಿ ಸಚಿನ್ ತೆಂಡುಲ್ಕರ್ 887 ಅಂಕ ಗಳಿಸಿದ್ದು ಈವರೆಗಿನ ಭಾರತೀಯ ದಾಖಲೆಯಾಗಿತ್ತು.
ಸರಣಿಯಲ್ಲಿ 174 ರನ್ ಬಾರಿಸಿದ ರೋಹಿತ್ ಶರ್ಮ ಜೀವನಶ್ರೇಷ್ಠ 799 ಅಂಕ ಗಳಿಸಿದರು. ಆದರೆ 7ನೇ ಸ್ಥಾನದಲ್ಲೇ ಉಳಿದರು. ಪಾಕಿಸ್ಥಾನದ ಬಾಬರ್ ಆಜಂ, ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಕೂಡ ಜೀವನಶ್ರೇಷ್ಠ ಅಂಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ಯಾಟಿಂಗ್ ಸರದಿಯಲ್ಲಿ ಪ್ರಗತಿ ಕಂಡ ಇತರರೆಂದರೆ ಮಹೇಂದ್ರ ಸಿಂಗ್ ಧೋನಿ (ಒಂದು ಸ್ಥಾನದೊಂದಿಗೆ 11), ಟಾಮ್ ಲ್ಯಾಥಂ (15 ಸ್ಥಾನದೊಂದಿಗೆ 23), ಸಫìರಾಜ್ ಅಹ್ಮದ್ (3 ಸ್ಥಾನದೊಂದಿಗೆ 37) ಮತ್ತು ಲಹಿರು ತಿರಿಮನ್ನೆ (6 ಸ್ಥಾನದೊಂದಿಗೆ 47).
ಬೌಲಿಂಗ್: ಬಮ್ರಾ ನಂ.3
ಏಕದಿನ ಬೌಲಿಂಗ್ ಸರದಿಯಲ್ಲಿ ಭಾರತದ ಸ್ವಿಂಗ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಅವರ ಅತ್ಯುತ್ತಮ ರ್‍ಯಾಂಕಿಂಗ್. ನ್ಯೂಜಿಲ್ಯಾಂಡ್ ಸರಣಿಯಲ್ಲಿ ಬುಮ್ರಾ 6 ವಿಕೆಟ್ ಹಾರಿಸಿದ್ದರು. ಈ ವರ್ಷ ಆಡಿದ 20 ಏಕದಿನ ಪಂದ್ಯಗಳಲ್ಲಿ ಬುಮ್ರಾ ಭಾರತದ ಪರ ಸರ್ವಾಧಿಕ 35 ವಿಕೆಟ್ ಉರುಳಿಸಿದ್ದಾರೆ. ಪಾಕಿಸ್ಥಾನದ ಹಸನ್ ಅಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಅಗ್ರಸ್ಥಾನಕ್ಕೆ ಹತ್ತಿರ
ನ್ಯೂಜಿಲ್ಯಾಂಡನ್ನು 2-1 ಅಂತರದಿಂದ ಸೋಲಿಸಿದ ಭಾರತ ಹಾಗೂ ಬಾಂಗ್ಲಾದೇಶವನ್ನು 3-0 ಅಂತರದಿಂದ ಮಣಿಸಿದ ದಕ್ಷಿಣ ಆಫ್ರಿಕಾ ನಡುವೆ ಈಗ ಆಗ್ರಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಎರಡೂ ತಂಡಗಳು ತಲಾ 120 ಅಂಕಗಳನ್ನು ಹೊಂದಿವೆ. ಆದರೆ ದಶಮಾಂಶ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. ಅದು ಒಟ್ಟು 6,386 ರೇಟಿಂಗ್ ಅಂಕ ಹೊಂದಿದ್ದರೆ, ಭಾರತ 6,379 ಅಂಕ ಹೊಂದಿದೆ. ಎರಡೂ ತಂಡಗಳು ನಿಗದಿತ ಅವಧಿಯಲ್ಲಿ 53 ಪಂದ್ಯಗಳನ್ನಾಡಿವೆ. ನ್ಯೂಜಿಲ್ಯಾಂಡನ್ನು 3-0 ಅಂತರದಿಂದ ಕೆಡವಿದ್ದರೆ ಭಾರತ ನಂ.1 ಏಕದಿನ ತಂಡವಾಗಿ ಮೂಡಿಬರುತ್ತಿತ್ತು.
ಟಾಪ್-10 ಏಕದಿನ ತಂಡಗಳು: 1. ದಕ್ಷಿಣ ಆಫ್ರಿಕಾ (120), 2. ಭಾರತ (120), 3. ಆಸ್ಟ್ರೇಲಿಯ (114), 4. ಇಂಗ್ಲೆಂಡ್ (114), 5. ನ್ಯೂಜಿಲ್ಯಾಂಡ್ (111), 6. ಪಾಕಿಸ್ಥಾನ (99), 7. ಬಾಂಗ್ಲಾದೇಶ (92), 8. ಶ್ರೀಲಂಕಾ (83), 9. ವೆಸ್ಟ್ ಇಂಡೀಸ್ (77), 10. ಅಫ್ಘಾನಿಸ್ಥಾನ (54).
ಟಾಪ್-10 ಏಕದಿನ ಬ್ಯಾಟ್ಸ್‌ಮನ್: 1. ವಿರಾಟ್ ಕೊಹ್ಲಿ (889), 2. ಎಬಿ ಡಿ ವಿಲಿಯರ್ (872), 3. ಡೇವಿಡ್ ವಾರ್ನರ್ (865), 4. ಬಾಬರ್ ಆಜಂ (846), 5. ಕ್ವಿಂಟನ್ ಡಿ ಕಾಕ್ (808), 6. ಜೋ ರೂಟ್ (802), 7. ರೋಹಿತ್ ಶರ್ಮ (799), 8. ಫಾ ಡು ಪ್ಲೆಸಿಸ್ (773), 9. ಹಾಶಿಮ್ ಆಮ್ಲ (766), 10. ಕೇನ್ ವಿಲಿಯಮ್ಸನ್ (760).
ಟಾಪ್-10 ಏಕದಿನ ಬೌಲರ್: 1. ಹಸನ್ ಅಲಿ (759), 2. ಇಮ್ರಾನ್ ತಾಹಿರ್ (743), 3. ಜಸ್‌ಪ್ರೀತ್ ಬುಮ್ರಾ (719), 4. ಜೋಶ್ ಹ್ಯಾಝಲ್‌ವುಡ್ (714), 5. ಕಾಗಿಸೊ ರಬಾಡ (708), 6. ಮಿಚೆಲ್ ಸ್ಟಾರ್ಕ್ (684), 7. ಟ್ರೆಂಟ್ ಬೌಲ್ಟ್ (671), 8. ಅಕ್ಷರ್ ಪಟೇಲ್ (653), 9. ರಶೀದ್ ಖಾನ್ (647). 10. ಲಿಯಮ್ ಪ್ಲಂಕೆಟ್ (646).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.