ಕ್ರಿಕೆಟಿಗರಿಗೆ ಕೊಡಬೇಕಾದ ಹಣ ಕೊಡ್ತಾ ಇಲ್ಲ ಬಿಸಿಸಿಐ!
Team Udayavani, Oct 31, 2017, 7:00 AM IST
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಮತ್ತೂಂದು ಆರೋಪ ಕೇಳಿಬಂದಿದೆ. ಕ್ರಿಕೆಟ್ ಪಂದ್ಯಗಳ ನೇರಪ್ರಸಾರದಿಂದ ಪಡೆದ ಹಣದಲ್ಲಿ ಬಿಸಿಸಿಐ ಶೇ.26ರಷ್ಟನ್ನು ಆಟಗಾರರಿಗೆ ನೀಡಬೇಕೆಂಬ ನಿಯಮವಿದ್ದರೂ ನೀಡುತ್ತಿರುವುದು ಕೇವಲ ಶೇ.8 ಮಾತ್ರ ಎಂದು ಆಡಳಿತಾಧಿಕಾರಿಗಳಿಗೆ ತಿಳಿದುಬಂದಿದೆ. 2001ರಲ್ಲೇ ಈ ರೀತಿಯ ಒಪ್ಪಂದಕ್ಕೆ ಬಿಸಿಸಿಐ ಸಹಿ ಹಾಕಿತ್ತು. 2004ರಲ್ಲಿ ಇದನ್ನು ಜಾರಿ ಮಾಡುವುದಕ್ಕೆ ಜಗಮೋಹನ್ ದಾಲಿ¾ಯಾ ಕ್ರಮ ತೆಗೆದುಕೊಂಡಿದ್ದರು. ಆದರೂ ಅದು ಜಾರಿಯಾಗಿಲ್ಲ ಎಂದು ಆರೋಪಿಸಲಾಗಿದೆ.
ಒಟ್ಟಾರೆ ಬಿಸಿಸಿಐ ತನಗೆ ಬಂದ ಅಷ್ಟೂ ಆದಾಯದಲ್ಲಿ ಶೇ.70ರಷ್ಟನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡುತ್ತಿದೆ. ಉಳಿದ ಶೇ.30ರಷ್ಟು ಹಣದಲ್ಲಿ ಶೇ.26ರಷ್ಟನ್ನು ಆಟಗಾರರಿಗೆ ನೀಡುತ್ತಿದೆ. ಬಾಕಿ ಶೇ.3ನ್ನು ಮೈದಾನ ನಿರ್ಮಾಣ, ಮೂಲಭೂತ ಸೌಕರ್ಯ, ಮಂಡಳಿ ಆಡಳಿತ ನಿರ್ವಹಣೆಗೆ ವ್ಯಯಿಸುತ್ತಿದೆ. ಇನ್ನು ಐಸಿಸಿ ಕೂಟಗಳ ವೇಳೆ ಪ್ರಾಯೋಜಕತ್ವದಿಂದ ಬಂದ ಹಣದಲ್ಲೂ ಆಟಗಾರರಿಗೆ ಅತಿ ಕಡಿಮೆ ಪ್ರಮಾಣವನ್ನು ಬಿಸಿಸಿಐ ನೀಡುತ್ತಿದೆ. ಇದನ್ನೂ ಸರಿಪಡಿಸಲು ಸರ್ವೋಚ್ಚ ನ್ಯಾಯಪೀಠ ನಿಯೋಜಿತ ಆಡಳಿತಾಧಿಕಾರಿಗಳು ಚಿಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Drone: ಪುರಿ ದೇಗುಲದ ಮೇಲೆ ಡ್ರೋನ್ ಹಾರಾಟ: ಪೊಲೀಸರಿಂದ ತನಿಖೆ
Washington: ಹಿಲರಿ, ಸೊರೋಸ್ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ
Govt.,: ಖಾಸಗಿ ಚಾಟ್ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.