ಸೌದಿ ಮಹಿಳೆಯರು ಖುಷ್
Team Udayavani, Oct 31, 2017, 6:25 AM IST
ರಿಯಾದ್: ಸೌದಿ ಅರೇಬಿಯಾದ ಮಹಿಳೆಯರು ಮುಂದಿನ ವರ್ಷದಿಂದ ಅಲ್ಲಿನ ಪ್ರಮುಖ ಕ್ರೀಡಾಂಗಣಗಳಿಗೆ ಮುಕ್ತವಾಗಿ ತೆರಳುವ ಅವಕಾಶವನ್ನು ಸೌದಿ ಸರಕಾರ ಕಲ್ಪಿಸಿದೆ.
ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಸೋಮವಾರ ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ, ಅಲ್ಲಿನ ಮಹಿಳೆಯರಿಗೆ ರಿಯಾದ್, ಜೆಡ್ಡಾ ಹಾಗೂ ದಮ್ಮಾ¾ಮ್ ಕ್ರೀಡಾಂಗಣಗಳಲ್ಲಿ ನಡೆಯುವ ಯಾವುದೇ ಕ್ರೀಡೆ, ಕಾರ್ಯಕ್ರಮಗಳನ್ನು ಪುರುಷರಂತೆ ಗ್ಯಾಲರಿಯಲ್ಲಿ ಕೂತು ಸವಿಯುವ ಅವಕಾಶ ಸಿಗಲಿದೆ.
ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪುರುಷರು, ಸ್ತ್ರೀಯರು ಒಟ್ಟಿಗೆ ಸೇರುವುದಕ್ಕೆ ಅಲ್ಲಿ ನಿರ್ಬಂಧವಿರು ವುದರಿಂದ ಮೊಹಮ್ಮದ್ ಅವರ ಈ ಆದೇಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಾಗಾಗಿ, ಅವರ ಕ್ರಮ ಅಲ್ಲಿನ ಕೆಲ ನಾಗರಿಕರ ಟೀಕೆಗೂ ಕಾರಣವಾಗಿದ್ದು, ಕೆಲವರು, “”ಸ್ತ್ರೀಯರಿಗೆ ಕಾರು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಇಂದು ಕ್ರೀಡಾಂಗಣಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮುಂದೆ ನೈಟ್ ಕ್ಲಬ್‌ಗ ಹೋಗಲು ಅನುಮತಿ ನೀಡಬಹುದು” ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಆದರೆ, ಇದಕ್ಕೆ ಮೊಹಮ್ಮದ್ ಸೊಪ್ಪು ಹಾಕಿಲ್ಲ. ಕೆಲವು ತಿಂಗಳ ಹಿಂದೆ ಸೌದಿ ಮಹಿಳೆಯರಿಗೆ ಕಾರು ಚಾಲನೆ ಮಾಡುವ ಸ್ವಾತಂತ್ರ್ಯ ನೀಡಿದ್ದ ಮೊಹಮ್ಮದ್, ಇತ್ತೀಚೆಗೆ, ಸೌದಿ ಅರೇಬಿಯಾ ದಿನಾಚರಣೆ ಅಂಗವಾಗಿ ರಿಯಾದ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ಯಾಲರಿಗಳಲ್ಲಿ ಕೂತು ನೇರವಾಗಿ ನೋಡುವ ಅವಕಾಶವನ್ನು ಅಲ್ಲಿನ ಮಹಿಳೆಯರಿಗೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.