ಮಂಗಳೂರು-ಮೂಡಬಿದಿರೆ-ಕಾರ್ಕಳ ಕೆಎಸ್‌ಆರ್‌ಟಿಸಿ ಬೇಡಿಕೆ ಈಡೇರಿತೇ?


Team Udayavani, Oct 31, 2017, 10:04 AM IST

31-12.jpg

ಮಂಗಳೂರು: ಬಹುಕಾಲದ ಬೇಡಿಕೆಯಾಗಿರುವ ಮಂಗಳೂರು- ಮೂಡಬಿದಿರೆ- ಕಾರ್ಕಳ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಮರೀಚಿಕೆಯಾಗಿಯೇ ಉಳಿದಿದ್ದು, ಅ. 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಾದರೂ ಮಂಜೂರಾದೀತೇ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.

ಕೆಎಸ್‌ಆರ್‌ಟಿಸಿಯ ಆಡಳಿತ ನಿರ್ದೇಶಕರು ಮಂಗಳೂರು ಕೆಎಸ್‌ಆರ್‌ಟಿ ಬಸ್‌ ನಿಲ್ದಾಣ ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ಗಳ ಓಡಾಟಕ್ಕೆ ಪರವಾನಿಗೆ ನೀಡುವಂತೆ ಕಳೆದ ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಹಲವು ಕಾರಣಗಳಿಂದ ಈ ಬೇಡಿಕೆ ಇನ್ನೂ ಈಡೇರಿಲ್ಲ. ಈ ಕುರಿತು ಸಾರ್ವಜನಿಕರು ಕೂಡ ಸಂಬಂಧಪಟ್ಟವರನ್ನು ಆಗ್ರಹಿಸು ತ್ತಲೇ ಬಂದಿದ್ದಾರೆ. ಆರಂಭದಲ್ಲಿ ಕೆಎಸ್‌ಆರ್‌ಟಿಸಿಯು ಮಂಗಳೂರು ನಿಲ್ದಾಣದಿಂದ ಕಾರ್ಕಳಕ್ಕೆ ಬಸ್‌ ಓಡಿಸಲು ಪರವಾನಿಗೆ ನೀಡುವಂತೆ 2014ರ ಎ. 4ರಂದು ಅರ್ಜಿ ಸಲ್ಲಿಸಿತ್ತು. ಮೇ 9ರಂದು ನಡೆದ ಸಭೆಯಲ್ಲಿ ವಿಷಯ ವನ್ನು ಮುಂದೂಡಲಾಗಿತ್ತು. ಪ್ರಸ್ತುತ ಅ. 31ರಂದು ನಡೆಯುವ ಸಭೆಯಲ್ಲಿ ಪುನರ್‌ ಪರಿಶೀಲನೆಗೊಳ್ಳುವ ನಿರೀಕ್ಷೆ ಇದೆ. ಕೆಎಸ್‌ಆರ್‌ಟಿಸಿಯು ಮಂಗಳೂರು ನಿಲ್ದಾಣದಿಂದ 8 ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ 12 ಬಸ್‌ಗಳನ್ನು ಕಾರ್ಕಳಕ್ಕೆ ಓಡಿಸಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದೆ. ಸಭೆಯಲ್ಲಿ 20 ಬಸ್‌ಗಳ ಪರವಾನಿಗೆ ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

ಇತರ ರಸ್ತೆಗಳ ಪರವಾನಿಗೆ ಕೆಎಸ್‌ಆರ್‌ಟಿಸಿ ಮಂಗಳೂರು ನಿಲ್ದಾಣ ದಿಂದ ಪಂಪ್‌ವೆಲ್‌- ದೇರಳಕಟ್ಟೆ-  ನಾಟೆಕಲ್‌ ಮಾರ್ಗವಾಗಿ ರೆಹಮತ್‌ ನಗರಕ್ಕೆ, ಬಸ್‌ ನಿಲ್ದಾಣದಿಂದ ಪಂಪ್‌ವೆಲ್‌- ದೇರಳಕಟ್ಟೆ- ಮುಡಿಪು-ಬೋಳಿಯಾರ್‌ ಮಾರ್ಗವಾಗಿ ಅಮ್ಮೆಂಬಳ ದರ್ಗಾಕ್ಕೆ, ಬಸ್‌ ನಿಲ್ದಾಣದಿಂದ ಪಂಪುವೆಲ್‌-ದೇರಳಕಟ್ಟೆ ಮಾರ್ಗವಾಗಿ ಮುಡಿಪುಗೆ ಬಸ್‌ ಓಡಿಸಲು ಪರವಾನಿಗೆಗೆ ಸಲ್ಲಿಸಿರುವ ಅರ್ಜಿಯು ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ.

ಚರ್ಚೆಯ ಬಳಿಕ ನಿರ್ಣಯ
ಕೆಎಸ್‌ಆರ್‌ಟಿಸಿಯು ವಿವಿಧ ರೂಟ್‌ಗಳಲ್ಲಿ ಬಸ್‌ ಓಡಿಸುವ ಕುರಿತು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾದ ಬಳಿಕವೇ ಪರವಾನಿಗೆಯ ಕುರಿತು ಚಿಂತಿಸಲಾಗುತ್ತದೆ. ಮೂಡಬಿದಿರೆ, ಕಾರ್ಕಳ ಸೇರಿದಂತೆ ರೆಹಮತ್‌ನಗರ, ಅಮ್ಮೆಂಬಳ ದರ್ಗಾ, ಮುಡಿಪು ರಸ್ತೆಗಳಲ್ಲೂ ಬಸ್‌ ಓಡಾಟಕ್ಕೆ ಪರವಾನಿಗೆಗೆ ಕೆಎಸ್‌ಆರ್‌ಟಿಸಿ ಅರ್ಜಿ ಸಲ್ಲಿಸಿದೆ.
– ಜಿ.ಎಸ್‌. ಹೆಗಡೆ, ಕಾರ್ಯದರ್ಶಿ,  ಆರ್‌ಟಿಒ.

ಬಸ್ಸು ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧ
ಮಂಗಳೂರಿನಿಂದ ಮೂಡಬಿದಿರೆ-ಕಾರ್ಕಳಕ್ಕೆ ಬಸ್‌ ಓಡಾಟದ ಪರವಾನಿಗೆ ಕುರಿತು ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಿದೆ. ಪ್ರಸ್ತುತ 20 ಬಸ್‌ಗಳ ಓಡಾಟಕ್ಕೆ ಅನುಮತಿ ಸಿಕ್ಕಿದರೆ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧವಿದೆ.
ದೀಪಕ್‌ಕುಮಾರ್‌, ವಿಭಾಗೀಯ ನಿಯಂತ್ರಕರು,  ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

Flight

Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್‌ ಕರೆ ಬಂದಿದೆ: ಸರಕಾರ

Dansuh-aiswarya

Chennai: ಐಶ್ವರ್ಯ ರಜನಿಕಾಂತ್‌, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್‌

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿMulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರಿಗೆ “ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ’ ಪ್ರದಾನ

ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರಿಗೆ “ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ’ ಪ್ರದಾನ

Congress: ದ.ಕ.ದಲ್ಲಿ ಜನರ ಒಲವು ಕಾಂಗ್ರೆಸ್‌ ಪರ: ಹರೀಶ್‌ ಕುಮಾರ್‌

Congress: ದ.ಕ.ದಲ್ಲಿ ಜನರ ಒಲವು ಕಾಂಗ್ರೆಸ್‌ ಪರ: ಹರೀಶ್‌ ಕುಮಾರ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

Flight

Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್‌ ಕರೆ ಬಂದಿದೆ: ಸರಕಾರ

Dansuh-aiswarya

Chennai: ಐಶ್ವರ್ಯ ರಜನಿಕಾಂತ್‌, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್‌

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.