ವಿವಾಹವಾಗುವಂತೆ ನಟಿ ಪೀಡಿಸುತ್ತಿದ್ದವನ ಬಂಧನ
Team Udayavani, Oct 31, 2017, 12:08 PM IST
ಬೆಂಗಳೂರು: ಚರ್ಚ್ನಲ್ಲಿ ಪರಿಚಯವಾದ ಮಲೆಯಾಳಂ ನಟಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ ಭಗ್ನಪ್ರೇಮಿ ಮಡಿವಾಳ ಪೊಲೀಸರ ಅತಿಥಿಯಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಫ್ರಾಂಕ್ಲಿನ್ (28) ಬಂಧಿತ. ಕೇರಳ ಮೂಲದ ಫ್ರಾಂಕ್ಲಿನ್ 12 ವರ್ಷಗಳಿಂದ ನಗರದ ನಿವಾಸಿ, ಬಸವನಗುಡಿ ಖಾಸಗಿ ಕಂಪನಿ ಉದ್ಯೋಗಿ.
ಈ ಮಧ್ಯೆ ಕೋರಮಂಗಲದಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಿರುವ ಮಲೆಯಾಳಂ ನಟಿ ರೆಬೋ ಮೋನಿಕಾ ಅವರನ್ನು ಆರೋಪಿ ಚರ್ಚ್ನಲ್ಲಿ ಪ್ರಾರ್ಥನೆಗೆ ಬಂದಾಗ ಪರಿಚಯಸಿಕೊಂಡಿದ್ದಾನೆ. ಆತ್ಮೀಯತೆ ಬೆಳೆಸಿಕೊಂಡು ಆಕೆಯ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದ.
ನಂತರ ಒಮ್ಮೆ ಅದೇ ಚರ್ಚ್ ಬಳಿ ತನ್ನ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಇದಕ್ಕೆ ಮೇನಿಕಾ ನಿರಾಕರಿಸಿದ್ದಾರೆ. ಆರಂಭದಲ್ಲಿ ಸಂದೇಶಗಳ ಮೂಲಕ ಮನವಿ ಮಾಡುತ್ತಿದ್ದ ಫ್ರಾಂಕ್ಲಿನ್, ಬಳಿಕ ಸಾರ್ವಜನಿಕವಾಗಿ ಮದುವೆಯಾಗುವಂತೆ ಪೀಡಿಸಿದ್ದ.
ಇದರಿಂದ ಬೇಸತ್ತ ನಟಿ ಆತನನ್ನು ಕರೆಸಿ ಬುದ್ದಿ ಹೇಳಿದ್ದಾರೆ. ಎಚ್ಚರಿಕೆ ನೀಡಿದ್ದಾರೆ. ಆದರೂ ಬಿಡದ ಭಗ್ನಪ್ರೇಮಿ ನಿತ್ಯ ನಟಿಯನ್ನು ಹಿಂಬಾಲಿಸುತ್ತಿದ್ದ. ಕೊನೆಗೆ ಕೋಪಗೊಂಡ ನಟಿ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.