ಕೊಡಲಿ ಪೆಟ್ಟಿಗಿಂತ ಮರ ಸ್ಥಳಾಂತರವೇ ಸೂಕ್ತ
Team Udayavani, Oct 31, 2017, 12:09 PM IST
ಬೆಂಗಳೂರು: ಮರಗಳ ಸ್ಥಳಾಂತರಕ್ಕೆ ಸಂಬಂಧಿಸಿದ ನೀತಿ-ನಿರೂಪಣೆಗಳ ಬಗ್ಗೆ ಚರ್ಚಿಸಲು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ವೋಲ್ವೊ ಟ್ರಕ್ಸ್ ಇಂಡಿಯಾ ಸಹಯೋಗದಲ್ಲಿ ಅ.31ರಂದು ನಗರದ ಮಲ್ಲೇಶ್ವರದಲ್ಲಿರುವ ಜೆ.ಎನ್.ಟಾಟಾ ಸಭಾಂಗಣದಲ್ಲಿ “ಹಸಿರು ಹೊದಿಕೆ ರಕ್ಷಣೆ ರಾಷ್ಟ್ರೀಯ ವಿಚಾರ ಸಂಕಿರಣ’ ಹಮ್ಮಿಕೊಳ್ಳಲಾಗಿದೆ.
ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಮರಗಳ ಹನನ ಮಾಡಿ, ಅದಕ್ಕೆ ಪ್ರತಿಯಾಗಿ ಮತ್ತೂಂದು ಕಡೆ ಗಿಡಗಳನ್ನು ನೆಡುವುದೊಂದೇ ಪ್ರಸ್ತುತ ನಮ್ಮ ಮುಂದಿರುವ ಆಯ್ಕೆ. ಆದರೆ, ಮರಗಳನ್ನು ಕಡಿಯುವ ಬದಲು, ಸ್ಥಳಾಂತರಿಸಲು ತಂತ್ರಜ್ಞಾನವಿದೆ. ಈ ಸಂಬಂಧ ನೀತಿ ರೂಪಿಸುವ ಅಗತ್ಯವಿದೆ. ಆ ನೀತಿ-ನಿರೂಪಣೆ ಹೇಗಿರಬೇಕು ಎಂಬುದರ ಬಗ್ಗೆ ವಿಚಾರ ಸಂಕಿರಣದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಸುರೇಂದ್ರ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸಾಂಖೀಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಮರ ವಿಜ್ಞಾನಿಗಳು, ತಂತ್ರಜ್ಞರು, ಗಣಿ ಕಂಪನಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈಗಾಗಲೇ ದೇಶದ ವಿವಿಧೆಡೆ ಮರಗಳ ಸ್ಥಳಾಂತರ ನಡೆಯುತ್ತಿದೆ. ಆದರೆ, ಅದು ವೈಜ್ಞಾನಿಕವಾಗಿಲ್ಲ. ಅಂದರೆ, ಎಲ್ಲ ಮರಗಳ ಸ್ಥಳಾಂತರ ಸಾಧ್ಯವಿಲ್ಲ. ಅದು ಮರಗಳ ಪ್ರಭೇದ, ಮಣ್ಣು, ಮರಗಳ ಆಯಸ್ಸನ್ನು ಅವಲಂಬಿಸಿರುತ್ತದೆ. ಅಷ್ಟೇ ಅಲ್ಲ, ನಗರದಲ್ಲಿ ಸುರಂಗದಲ್ಲಿ ಕೇಬಲ್ಗಳು, ವಿದ್ಯುತ್ ಲೈನ್ಗಳು ಹಾದುಹೋಗಿರುತ್ತವೆ. ಸಂಚಾರದಟ್ಟಣೆ ಇರುತ್ತದೆ. ಇದರ ಮಧ್ಯೆ ಎಲ್ಲ ಮರಗಳನ್ನು ಸ್ಥಳಾಂತರಿಸಲು ಸಾಧ್ಯವಾಗದಿರಬಹುದು. ಅದೇನೇ ಇರಲಿ, ಮರಗಳನ್ನು ಕಡಿಯುವ ಬದಲಿಗೆ ಸ್ಥಳಾಂತರಿಸುವುದು ಹೆಚ್ಚು ಸೂಕ್ತ. ವೋಲ್ವೊ ಗ್ರೂಪ್ ಈ ನಿಟ್ಟಿನಲ್ಲಿ ಕೈಜೋಡಿಸಿದೆ ಎಂದು ಹೇಳಿದರು.
ವಿಶಿಷ್ಟ ವಾಹನ ಸಿದ್ಧ: ವೋಲ್ವೊ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಮಾತನಾಡಿ, “ನಗರ ವಿಸ್ತಾರಗೊಳ್ಳುತ್ತಲೇ ಇದ್ದು, ಅಭಿವೃದ್ಧಿ ಅನಿವಾರ್ಯ. ಆದರೆ, ಅದಕ್ಕೆ ಮರಗಳ ಮಾರಣಹೋಮವೇ ಪರಿಹಾರವಲ್ಲ. ಬದಲಿಗೆ ಮರಗಳ ಸ್ಥಳಾಂತರ ಸುಸ್ಥಿರ ಪರಿಹಾರವಾಗಬಲ್ಲದು. ಈ ಹಿನ್ನೆಲೆಯಲ್ಲಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯೊಂದಿಗೆ ಸಹಯೋಗದಲ್ಲಿ ವೈಜ್ಞಾನಿಕವಾಗಿ ಮಗಳ ಸ್ಥಳಾಂತರಕ್ಕೆ ಕಂಪನಿ ಮುಂದಾಗಿದ್ದು, ಇದಕ್ಕಾಗಿ ವಿಶಿಷ್ಟ ವಾಹನ ಸಿದ್ಧಪಡಿಸಿದೆ. ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ದೃಷ್ಟಿಯಿಂದ ಮರಗಳ ಸ್ಥಳಾಂತರ ಸೂಕ್ತ,’ ಎಂದು ಅಭಿಪ್ರಾಯಪಟ್ಟರು.
ಸ್ಥಳಾಂತರಕ್ಕೆ ಹೆಚ್ಚೇನೂ ವೆಚ್ಚವಾಗದು: “ಮರಗಳ ಸ್ಥಳಾಂತರಕ್ಕೆ ಲಕ್ಷಾಂತರ ರೂ. ವ್ಯಯವಾಗುತ್ತದೆ ಎಂದಬುದು ತಪ್ಪು ಭಾವನೆ. ಮರ ಕಡಿಯಲು ತಗಲುವ ವೆಚ್ಚವೇ ಸ್ಥಳಾಂತರಕ್ಕೂ ತಗಲುತ್ತದೆ. ಮರಗಳ ಸ್ಥಳಾಂತರ ಆಯಾ ಮರದ ಗಾತ್ರ, ಸ್ಥಳಾಂತರಗೊಳ್ಳಲಿರುವ ಪ್ರದೇಶದ ದೂರ ಮತ್ತಿತರ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಒಂದು ಮರ ಸ್ಥಳಾಂತರಕ್ಕೆ 10ರಿಂದ 12 ಸಾವಿರ ರೂ. ಖರ್ಚಾಗುತ್ತದೆ.
ಮರ ಕಡಿದು, ಅದನ್ನು ಸಾಗಿಸಲು ಕೂಡ ಇಷ್ಟೇ ಕರ್ಚಾಗುತ್ತದೆ. ಅಲ್ಲದೆ, ಮರಗಳ ಹನನಕ್ಕೆ ಬದಲಾಗಿ ಗಿಡಗಳನ್ನು ನೆಡಲಾಗುತ್ತದೆ. ಆದರೆ ಅದು ಬೆಳೆದು, ಮರವಾಗಲು 10-15 ವರ್ಷ ಬೇಕಾಗುತ್ತದೆ. ಅಲ್ಲಿಯವರೆ ಅದರ ನಿರ್ವಹಣೆ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಇದು ಸಮರ್ಪಕವಾಗಿ ಆಗುತ್ತಿಲ್ಲ. ಈ ಎಲ್ಲ ಹಿನ್ನೆಲೆಗಳಲ್ಲಿ ಸ್ಥಳಾಂತರ ಸೂಕ್ತ,’ ಎಂದು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.