ವಚನ ತವನಿಗೆ ಮಾಳವಾಡ ಗ್ರಂಥ ಪುರಸ್ಕಾರ ಪ್ರದಾನ


Team Udayavani, Oct 31, 2017, 12:56 PM IST

h6-vachana.jpg

ಧಾರವಾಡ: ಕರ್ನಾಟಕ ವಿವಿಯ ಡಾ| ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಕೊಡ ಮಾಡುವ ಪ್ರೊ| ಸ.ಸ. ಮಾಳವಾಡ ಗ್ರಂಥ ಪುರಸ್ಕಾರವನ್ನು “ವಚನ ತವನಿ ’ ಕೃತಿಗಾಗಿ ಕೃತಿಕಾರರಾದ ಭೂವಿಜ್ಞಾನಿ ಡಾ| ಎಚ್‌. ಚಂದ್ರಶೇಖರ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು. 

ಪುರಸ್ಕಾರ ಪ್ರದಾನ ಮಾಡಿದ ಕವಿವಿ ಕುಲಸಚಿವ ಡಾ| ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಸಾಹಿತಿಗಳು ವರ್ತಮಾನದ ಜತೆ ಮುಖಾಮುಖೀಯಾಗಬೇಕಲ್ಲದೆ, ವಿಜ್ಞಾನಕ್ಕೆ ಗಮನ ಕೊಡಬೇಕು. ಸಾಹಿತ್ಯದಿಂದ ಸಮಾಜಕ್ಕೆ ಉಪಯೋಗವಾಗುವ ಕೆಲಸವನ್ನು ನಮ್ಮ ಪ್ರಾಧ್ಯಾಪಕರು ಮತ್ತು ಯುವ ಜನಾಂಗ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು. 

ನಾನು ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಪ್ರೊ| ಸ.ಸ. ಮಾಳವಾಡ ಅವರದ್ದು ದೊಡ್ಡ ಹೆಸರು. ಮಾಳವಾಡರು ಸಾಹಿತಿ, ವಿದ್ವಾಂಸರಷ್ಟೇ ಆಗಿರಲಿಲ್ಲ, ನಮ್ಮ ಸ್ಮೃತಿಪಟಲದಲ್ಲಿರುವ ಜೀವಂತ ವ್ಯಕ್ತಿಯಾಗಿದ್ದರು. ಅವರ ಪತ್ನಿ ಶಾಂತದೇವಿ ಮಾಳವಾಡರು ಪತಿಯ ದಾರಿಯಲ್ಲಿ ಬಹುದೂರ ನಡೆದು ಬಂದವರು ಎಂದು ಸ್ಮರಿಸಿದರು. 

ಪ್ರಶಸ್ತಿ ಪಡೆದ ಕೃತಿ “ವಚನ ತವನಿ ’ಯ  ಕುರಿತು ಮಾತನಾಡಿದ ಸಾಹಿತಿ ಡಾ| ಬಾಳಣ್ಣ ಶೀಗೀಹಳ್ಳಿ, ಮಾಳವಾಡರ ನೇರ-ನಿಷ್ಠುರ ವ್ಯಕ್ತಿತ್ವಕ್ಕೂ ಡಾ| ಎಚ್‌. ಚಂದ್ರಶೇಖರ ಅವರ ವಚನ ತವನಿ  ಗ್ರಂಥಕ್ಕೂ ಸಂಬಂಧವಿದೆ. ದೊಡ್ಡ ಸಂಶೋಧಕ ಮಾಡಬಹುದಾದ ಪ್ರಾಮಾಣಿಕ, ನಿಷ್ಠುರದ ಕಾರ್ಯವಿದು. ಇಲ್ಲಿ ಲೇಖಕರು ಯಶಸ್ವಿಯಾಗಿದ್ದರೆ ಪ್ರತಿಯೊಂದು ಲೇಖನವೂ ಹೊಸ ವಾಗ್ವಾದಗಳನ್ನು ಇಟ್ಟುಕೊಂಡೇ ಮುಂದೆ ಸಾಗಿದೆ.

ಆಕರಗಳನ್ನು, ಶಾಸನ, ಶಿಲ್ಪ, ಕ್ಷೇತ್ರಕಾರ್ಯದ ಸಂಗತಿಗಳನ್ನು ಇಟ್ಟುಕೊಂಡೇ ತಾತ್ವಿಕ ವಾಗ್ವಾದಗಳನ್ನು ಸೃಷ್ಟಿಮಾಡುವ ಡಾ| ಎಚ್‌. ಚಂದ್ರಶೇಖರ ಅವರು ನಮಗೆ ಮೆಚ್ಚುಗೆಯಾಗುತ್ತಾರೆ ಎಂದರು. ಕೃತಿಕಾರ ಡಾ| ಎಚ್‌. ಚಂದ್ರಶೇಖರ ಮಾತನಾಡಿದರು.

ಡಾ| ಜೆ.ಎಂ. ನಾಗಯ್ಯ ಅಧ್ಯಕ್ಷತೆ ವಹಿಸಿದರು. ಪ್ರೊ| ಸ.ಸ. ಮಾಳವಾಡ ಪ್ರಶಸ್ತಿಯ ಸಂಯೋಜಕ ಡಾ| ನಿಂಗಪ್ಪ ಮುದೇನುರ ಸ್ವಾಗತಿಸಿದರು. ಮಹಾಂತೇಶ ಚವ್ಹಾಣ ಪ್ರಾರ್ಥಿಸಿದರು. ಸರಸ್ವತಿ ಹತ್ತಿಕಟಿಗಿ ಪರಿಚಯಿಸಿದರು. ಮಹಾಂತ ದೇಸಾಯಿ ನಿರೂಪಿಸಿದರು. ಕಿರಣ ಕಮ್ಮಾರ ವಂದಿಸಿದರು. 

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.