ರಸ್ತೆ ಗುಂಡಿ ಮುಚ್ಚಲು ಬಂತು ರೋಡ್‌ ಡಾಕ್ಟರ್ಸ್

Team Udayavani, Oct 31, 2017, 12:57 PM IST

m3-gundi.jpg

ಮೈಸೂರು: ಮೃತ್ಯುಕೂಪಗಳಾಗಿ ಪರಿಣಮಿಸಿದ್ದ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ನಗರ ಪಾಲಿಕೆ ಮುಂದಾಗಿದೆ.

ಬಂತು ರೋಡ್‌ ಡಾಕ್ಟರ್: ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿರುವ ಪಾಲಿಕೆ ಇದಕ್ಕಾಗಿ ಪಾಟ್‌ಹೋಲ್‌ ಬಸ್ಟರ್ಸ್‌ ಹೆಸರಿನ ರೋಡ್‌ ಡಾಕ್ಟರ್ ಯಂತ್ರ ಬಳಸಲು ನಿರ್ಧರಿಸಿದೆ.

ಅದರಂತೆ ಸೋಮವಾರ ನಗರದ ಮೃಗಾಲಯ ರಸ್ತೆ-ಲೋಕರಂಜನ್‌ ಮಹಲ್‌ ರಸ್ತೆ ಜಂಕ್ಷನ್‌ನಲ್ಲಿ ರೋಡ್‌ ಡಾಕ್ಟರ್ ಯಂತ್ರದ ಮೂಲಕ ಪ್ರಾಯೋಗಿಕವಾಗಿ ಗುಂಡಿ ಮುಚ್ಚುವ ಕೆಲಸ ನಡೆಸಲಾಯಿತು. ಅತ್ಯಾಧುನಿಕ ತಂತ್ರಜಾnನ ಒಳಗೊಂಡಿರುವ ರೋಡ್‌ ಡಾಕ್ಟರ್ ಯಂತ್ರದ ಬಳಕೆ ಈಗಾಗಲೇ ದೆಹಲಿ, ಪುಣೆ ಮತ್ತು ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ.

ಈ ನಿಟ್ಟಿನಲ್ಲಿ  ದೆಹಲಿ ಮೂಲದ ಕ್ಯಾಮ್‌ ಅವಿಡಾ ಸಂಸ್ಥೆ ಪರಿಚಯಿಸಿರುವ ಪರಿಸರ ಸ್ನೇಹಿ ಯಂತ್ರ ಬಳಸಿ ಗುಂಡಿ ಮುಚ್ಚುವ ಕೆಲಸಕ್ಕೆ ನಗರ ಪಾಲಿಕೆ ಸಜಾಗಿದೆ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಪಾಲಿಕೆ ಒಪ್ಪಿಗೆ ನೀಡಿ, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ದಿನಗಳಲ್ಲಿ ರೋಡ್‌ ಡಾಕ್ಟರ್ ಯಂತ್ರಗಳು ನಗರದಲ್ಲಿನ ಗುಂಡಿಗಳಿಗೆ ಮುಕ್ತಿ ನೀಡಲಿವೆ.

ಯಂತ್ರದ ಬಳಕೆ ಹೇಗೆ?: ರೋಡ್‌ ಡಾಕ್ಟರ್ ಯಂತ್ರದ ನೂತನ ತಂತ್ರಜಾnನದಲ್ಲಿ ಗುಂಡಿಬಿದ್ದಿರುವ ಜಾಗ ವಿಸ್ತರಿಸದೆ, ಯಥಾಸ್ಥಿತಿಯಲ್ಲಿ ಯಂತ್ರದಿಂದ ಸ್ಥಳ ಸ್ವತ್ಛಗೊಳಿಸಿ, ನಂತರ ಶಾಖದಿಂದ ಸುತ್ತಲಿನ ಪ್ರದೇಶವನ್ನು ಹದ ಮಾಡಲಿದೆ. ಸಿದ್ಧ ಡಾಂಬರ್‌ ಮಿಶ್ರಣವನ್ನು ಗುಂಡಿಗೆ ಹಾಕಿ ಡಾಂಬರು ಹಾಕಿ ಯಂತ್ರದ ಒತ್ತಡದಲ್ಲಿ ಸಮತಟ್ಟು ಮಾಡಲಾಗುವುದು.

ಇದರಿಂದ ಮುಚ್ಚಲ್ಪಡುವ ಗುಂಡಿ ಹಿಂದಿನ ರಸ್ತೆಗೆ ಸಮವಾಗಿರಲಿದೆ. ಇದಕ್ಕೆ ಕೇವಲ 3-4 ಮಂದಿ ಕಾರ್ಯನಿರ್ವಹಿಸಿದರೆ ಸಾಕು. ಈ ತಂತ್ರಜಾnನದ ಬಳಕೆಗೆ ಡಾಂಬರನ್ನು ಕಾಯಿಸುವ ಪ್ರಕ್ರಿಯೆ ಇರುವುದಿಲ್ಲ ಮತ್ತು ಇದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ.
 
ಇತ್ತೀಚೆಗೆ ಪುಣೆಗೆ ತೆರಳಿದ್ದ ವೇಳೆ ಅಲ್ಲಿ ಬಳಸುತ್ತಿದ್ದ ತಂತ್ರಜಾnನದ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ ಜತೆ ಚರ್ಚಿಸಿ, ಮಾಹಿತಿ ಪಡೆದಿದ್ದೆ. ಅಲ್ಲದೆ ಈ ಬಗ್ಗೆ ಮೈಸೂರಿಗೆ ಬಂದು ಪ್ರಾತ್ಯಕ್ಷಿಕೆ ನೀಡುವಂತೆ ಆಹ್ವಾನಿಸಲಾಗಿತ್ತು. ಈ ಹೊಸ ತಂತ್ರಜಾnನ ಪರಿಸರ ಸ್ನೇಹಿಯಾಗಿದ್ದು, ಸಮಯ ಮತ್ತು ರಸ್ತೆ ಸಂಚಾರದ ಅಡಚಣೆ ಕಡಿತಗೊಳಿಸಿ ದೀರ್ಘ‌ಕಾಲ ಬಾಳಿಕೆ ಬರಲಿದೆ.
-ಸುರೇಶ್‌ಬಾಬು, ಮಹಾನಗರಪಾಲಿಕೆ ಅಧೀಕ್ಷಕ ಎಂಜಿನಿಯರ್‌ 

ಟಾಪ್ ನ್ಯೂಸ್

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.