ಇಬ್ಬರು ಚೀನೀಯರ ಹಂತಕರನ್ನು ಶಿಕ್ಷಿಸಲು ಪಾಕಿಗೆ ಚೀನ ಆಗ್ರಹ
Team Udayavani, Oct 31, 2017, 3:50 PM IST
ಬೀಜಿಂಗ್ : ಬಲೂಚಿಸ್ಥಾನದ ಕ್ವೆಟ್ಟಾದಲ್ಲಿನ ಜಿನ್ನಾ ಪಟ್ಟಣದಿಂದ ಕಳೆದ ಮೇ 24ರಂದು ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾಗಿದ್ದ ಚೀನದ ಜೋಡಿ ಲೀ ಝಿಂಗ್ ಯಾಂಗ್ (24) ಮತ್ತು ಮೆಂಗ್ ಲೀ ಸೀ (26) ಇವರ ಕೊಲೆಗಾರರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷಿಸುವಂತೆ ಚೀನ, ತನ್ನ ಸರ್ವ ಋತು ಮಿತ್ರನಾಗಿರುವ ಪಾಕಿಸ್ಥಾನವನ್ನು ಒತ್ತಾಯಿಸಿದೆ.
ವ್ಯಾಪಾರ ಚಟುವಟಿಕಗಳಿಗೆಂದು ಬಂದ ಈ ಚೀನೀ ಜೋಡಿ ಉರ್ದು ಕಲಿಯುವ ನೆಪದಲ್ಲಿ “ಬೋಧನೆ’ಗೆ ತೊಡಗಿತ್ತು ಎಂದು ಪಾಕ್ ಸರಕಾರ ಈ ಮೊದಲು ಚೀನಕ್ಕೆ ತನ್ನ ಆಕ್ಷೇಪವನ್ನು ತಿಳಿಸಿತ್ತು. ಚೀನದ ಈ ಜೋಡಿಯನ್ನು ಅಪಹರಿಸಿ ಕೊಂದವರು ನಾವೇ ಎಂದು ಐಸಿಸ್ ಉಗ್ರರು ಹೇಳಿಕೊಂಡಿದ್ದರು.
“ಚೀನ ಎಲ್ಲ ರೀತಿಯ ಭಯೋತ್ಪಾದನೆಯನ್ನು ಮತ್ತು ಅಮಾಯಕರ ಮೇಲಿನ ಹಿಂಸಾ ಕೃತ್ಯಗಳನ್ನು ಖಂಡಿಸುತ್ತದೆ. ವಿದೇಶಗಳಲ್ಲಿನ ಚೀನೀಯರ ಭದ್ರತೆಗೆ ಬೀಜಿಂಗ್ ಅತ್ಯಧಿಕ ಮಹತ್ವವನ್ನು ನೀಡುತ್ತದೆ. ಅಂತೆಯೇ ಉಗ್ರರಿಂದ ಅಪಹರಿಸಲ್ಪಟ್ಟ ಹತರಾಗಿರುವ ಚೀನೀ ಜೋಡಿಯ ಕೊಲೆಗಾರರನ್ನು ಪತ್ತೆ ಹಚ್ಚಿ ಅವರನ್ನು ಕಾನೂನಿನ ಕೈಗೆ ಒಪ್ಪಿಸಿ ಶಿಕ್ಷಿಸುವುದಕ್ಕೆ ಪಾಕಿಸ್ಥಾನಕ್ಕೆ ಚೀನ ಸರ್ವ ರೀತಿಯಲ್ಲಿ ನೆರವಾಗಬಯಸುತ್ತದೆ’ ಎಂದು ಚೀನದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.