ಪ್ರಗತಿಯಲ್ಲಿ ಕನ್ನಡ ಭವನ ನಿರ್ಮಾಣ ಕಾಮಗಾರಿ
Team Udayavani, Oct 31, 2017, 4:31 PM IST
ಬಂಟ್ವಾಳ: ಸುಮಾರು ಹದಿನೇಳು ವರ್ಷಗಳ ಹಿಂದೆ ಬಿ.ಸಿ.ರೋಡ್ ಕೈಕುಂಜೆ ಸಂಪರ್ಕ ರಸ್ತೆಯಲ್ಲಿ ಕನ್ನಡ ಭವನಕ್ಕೆ ಶಿಲಾನ್ಯಾಸ ನಡೆದಿರುವ ಜಾಗದಲ್ಲಿ ಈಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನ್ ರಾವ್ ನೇತೃತ್ವದಲ್ಲಿ ಭವನ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
ತಾಲೂಕು ಕೇಂದ್ರ ಬಿ.ಸಿ.ರೋಡ್‌ನಲ್ಲಿ ರಂಗ ಚಟುವಟಿಕೆ, ಸಾಹಿತ್ಯ ಚಟುವಟಿಕೆ ನಡೆಸಲು ಯೋಗ್ಯ ಸ್ಥಳಾವಕಾಶ ಇಲ್ಲ ಎಂಬ ಕೊರಗು ನೀಗಿಸಲು ನಡೆದ ಅನೇಕ ಪ್ರಯತ್ನಗಳ ಬಳಿಕ ಭವನ ನಿರ್ಮಾಣಕ್ಕೆ ಈಗ ಹಸಿರು ನಿಶಾನೆ ನೀಡಲಾಗಿದೆ. ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ನಡೆದ ಹಲವು ಸಾಹಿತ್ಯ ಸಮ್ಮೇಳನ, ಭಾಷಣ ಗೋಷ್ಠಿ, ಭೋಜನ, ಪುಸ್ತಕ ಪ್ರದರ್ಶನಗಳು ಬಾಡಿಗೆ ಕಟ್ಟಡದಲ್ಲಿ, ದೇವಸ್ಥಾನ, ಶಾಲೆಗಳಲ್ಲಿ, ಮುಲಾಜಿಗೆ ಒಳಗಾಗಿ ಕೆಲವೊಂದು ಸಂಘಟನೆಗಳ ಆಶ್ರಯದಲ್ಲಿ ನಡೆದಾಗ ಇಂತಹ ಒಂದು ಕನ್ನಡ ಭವನ ನಿರ್ಮಾಣದ ಆಶಯ ವ್ಯಕ್ತವಾಗಿತ್ತು. ಇದರಿಂದ ತಾಲೂಕು ಕೇಂದ್ರದಲ್ಲಿ ರಂಗ ಕಲೆ, ಸಾಹಿತ್ಯ, ಬೌದ್ಧಿಕ ಚಟುವಟಿಕೆಗಳು, ಕಾರ್ಯಾಗಾರ, ಕಮ್ಮಟಗಳಿಗೊಂದು ಸ್ಥಳಾ ವಕಾಶ, ಪ್ರತಿಭೆಯನ್ನು ಪ್ರಸ್ತುತ ಪಡಿಸಲು ವೇದಿಕೆಯಾಗಿ ಇದನ್ನು ಬಳಸಿಕೊಳ್ಳುವುದು ಇದರ ಹಿಂದೆ ಇದ್ದ ಉದ್ದೇಶವಾಗಿದೆ.
2001ರಲ್ಲೇ ಶಿಲಾನ್ಯಾಸ
2001ರಲ್ಲಿ ಕನ್ನಡದ ಕಲ್ಹಣ ನೀರ್ಪಾಜೆ ದಿ| ಭೀಮ ಭಟ್ಟರ ಅಧ್ಯಕ್ಷತೆಯಲ್ಲಿ ಮೊಡಂಕಾಪುವಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್, ಕೈಕುಂಜದಲ್ಲಿರುವ ಈ ಜಾಗದಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕನ್ನಡ ಭವನ ನಿರ್ಮಾಣದ ಕನಸನ್ನು ಹೊತ್ತುಕೊಂಡು ಅಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿತ್ತು. ಅದರ ಅನಂತರ ಮತ್ತೂಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಬಂಟ್ವಾಳದಲ್ಲಿ ಆಗಿದೆ. ಹಲವು ತಾಲೂಕು ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದವು.
ನೀರ್ಪಾಜೆ ಭೀಮ ಭಟ್ಟರು ಕೊನೆಗಾಲದವರೆಗೂ ಕನ್ನಡ ಭವನ ನಿರ್ಮಾಣದ ಕನಸನ್ನು ಕಂಡಿದ್ದರು. ಅವರ ಬಳಿಕ ಬಂದ ಎಲ್ಲ ಕಸಾಪ ತಾ| ಅಧ್ಯಕ್ಷರೂ ಕನ್ನಡ ಭವನ ನಿರ್ಮಾಣ ಕುರಿತು ಅಪೇಕ್ಷೆ ಹೊಂದಿದ್ದರು.
2016 ನವೆಂಬರ್‌ನಲ್ಲಿ ಒಡಿಯೂರು ಶ್ರೀಗಳು ಕನ್ನಡ ಭವನಕ್ಕೆ ಶಿಲಾನ್ಯಾಸ ನೆರೆವೇರಿಸಿದ್ದರು. ಅದಾಗಿ ಒಂದು ವರ್ಷದ ಅವಧಿಯಲ್ಲಿ ನಿಧಾನಗತಿಯಲ್ಲಿ ಮುನ್ನಡೆದು ಈಗ ಪಂಚಾಂಗದ ಕೆಲಸ ಮುನ್ನಡೆಯುತ್ತಿದೆ. ಕಾಮಗಾರಿ ತ್ವರಿತ
ಗೊಂಡರೆ ಮುಂದಿನ ವರ್ಷಕ್ಕೆ ಬಂಟ್ವಾಳದ ಸಾಹಿತ್ಯ ಕ್ಷೇತ್ರದ ಚಟುವಟಿಕೆಗೆ ಒಂದು ಶಾಶ್ವತ ವೇದಿಕೆ ಸಿದ್ಧವಾಗಲಿದೆ.
ಕನ್ನಡ, ತುಳು ಬೇರೆಯಲ್ಲ
ತುಳು ತಾಯಿ, ಕನ್ನಡ ಅಮ್ಮ, ನಮ್ಮಲ್ಲಿ ಐಕ್ಯಮತ್ಯವಿದೆ. ನಾವು ಒಟ್ಟಿಗಿ ದ್ದೇವೆ, ಒಟ್ಟಾಗಿ ಸಾಗುತ್ತೇವೆ. ತುಳು ತಿಳಿದವರೆಲ್ಲ ಕನ್ನಡ ಬಲ್ಲವರು. ಹಾಲು-ನೀರು ಬೆರೆತಂತೆ ನಮ್ಮಲ್ಲಿ ಕನ್ನಡ-ತುಳು ಬೇರ್ಪಡಲು ಅವಕಾಶವಿಲ್ಲ. ಕನ್ನಡ ಭವನ ನಮ್ಮದು.
–ಜಯಾನಂದ ಪೆರಾಜೆ
ಕಸಾಪ ನಿಕಟಪೂರ್ವ ಅಧ್ಯಕ್ಷರು
60 ಲಕ್ಷ ರೂ. ವೆಚ್ಚದ ಯೋಜನೆ
ಕನ್ನಡ ಭವನ ನಿರ್ಮಾಣಕ್ಕೆ ಸುಮಾರು 60 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸ ಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಜೂರಾದ 5 ಸೆಂಟ್ಸ್ ಜಮೀನು, ಕನ್ನಡ ಸಾಹಿತ್ಯ ಪರಿಷತ್ತಿನ 3 ಸೆಂಟ್ಸ್ ಜಮೀನು ಸಹಿತ ಒಟ್ಟು 8 ಸೆಂಟ್ಸ್ ಜಮೀನಿ ನಲ್ಲಿ ಭವನ ನಿರ್ಮಾಣ ಆಗಲಿದೆ. ಕನ್ನಡ ಭವನದಲ್ಲಿ ರಂಗ ಚಟುವಟಿಕೆಗಳು ಚಿತ್ರಪ್ರದರ್ಶನ, ಸಭೆ, ಸಮಾರಂಭಗಳು, ಯಕ್ಷಗಾನದ ತಾಳಮದ್ದಳೆ ಹೀಗೆ ಸುಮಾರು 200 ಮಂದಿ ಸಭಾಸದರು ಕಾರ್ಯಕ್ರಮ ವೀಕ್ಷಿಸುವಂತೆ ಕಾರ್ಯಕ್ರಮ ಆಯೋಜಿಸಲು ಅವಕಾಶ ಕಲ್ಪಿಸುವಂತೆ ನಿರ್ಮಿಸಲಾಗುವುದು. ಸದಸ್ಯರ ಸಲಹೆ,
ಸೂಚನೆಯಂತೆ ಮುಂದಿನ ರೂಪರೇಷೆಗಳ ಕುರಿತು ತೀರ್ಮಾನಿಸಲಾಗುವುದು.
–ಕೆ. ಮೋಹನ ರಾವ್, ಅಧ್ಯಕ್ಷರು,
ಬಂಟ್ವಾಳ ತಾ| ಕನ್ನಡ ಸಾಹಿತ್ಯ ಪರಿಷತ್
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.