‘ಹೊಸ ಸವಾಲುಗಳನ್ನು ನಿಭಾಯಿಸಲು ಸಿದ್ಧರಾಗಿ’
Team Udayavani, Nov 1, 2017, 2:52 PM IST
ಮೂಡಬಿದಿರೆ: ವೃತ್ತಿಪರ ಛಾಯಾ ಚಿತ್ರಗ್ರಾಹಕ ಹೊಸ ಸವಾಲುಗಳನ್ನು ನಿಭಾಯಿಸಿಕೊಂಡು ಬೆಳೆಯಬೇಕು ಎಂದು ಪ್ರಭು ಹಾಸ್ಪಿಟಲ್ ನ ಮುಖ್ಯಸ್ಥ ಡಾ| ಕೃಷ್ಣಮೋಹನ ಪ್ರಭು ಹೇಳಿದರು. ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಸೌತ್ ಕೆನರಾ ಫೂಟೋಗ್ರಾಫರ್ ಅಸೋಸಿಯೇಶನ್ನ ಮೂಡಬಿದಿರೆ ವಲಯದ 2017-19ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಕೆಪಿಎ ಅಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರ. ಕಾರ್ಯದರ್ಶಿ ದಯಾನಂದ ಬಂಟ್ವಾಳ, ಮೂಡಬಿದಿರೆ ವಲಯದ ಗೌರವಾಧ್ಯಕ್ಷ ಭಾನುಪ್ರಕಾಶ್ ರಾವ್, ಸೌತ್ ಕೆನರಾ ಫೊಟೋಗ್ರಾಫರ್ ವಿವಿಧೋದ್ದೇಶ ಸಂಘದ ನಿರ್ದೇಶಕ ರಾಮ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮಾನ
ಎಸ್ಕೆಪಿಎ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಮಣಿ ಕೋಟೆಬಾಗಿಲು, ಎಸ್ಕೆಪಿಎ ನಿಕಟಪೂರ್ವ ಪ್ರ. ಕಾರ್ಯದರ್ಶಿ ಮಧು ಮಂಗಳೂರು ಹಾಗೂ ಮೂಡಬಿದಿರೆಯ ಹಿರಿಯ ಪತ್ರಕರ್ತರನ್ನು ಸಮ್ಮಾನಿಸಲಾಯಿತು. ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಿತ ರತನ್ ಬಾರಾಡಿ ಅವರನ್ನು ಪುರಸ್ಕರಿಸಲಾಯಿತು.
ಸಂಘದ ಸದಸ್ಯ ಇರುವೈಲ್ನ ಉದಯ ಭಟ್ಟರ ಪುತ್ರ, ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶ್ರೇಯಸ್
ಭಟ್ಗೆ ಪ್ರೋತ್ಸಾಹ ಧನ, ಎಂ.ಎಸ್. ವಸಂತ ಅವರ ಪುತ್ರಿಯ ವಿವಾಹದ ಬಗ್ಗೆ ಸಹಾಯಧನ ವಿತರಿಸಲಾಯಿತು.
ನೂತನ ಅಧ್ಯಕ್ಷ ರವಿ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ವರದಿ ವಾಚಿಸಿ
ವಂದಿಸಿದರು. ಕೋಶಾಧಿಕಾರಿ ಜಗದೀಶ್ ಕೆ. ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ವಿಲ್ಫ್ರೆಡ್ ಮೆಂಡೋನ್ಸಾ ಮತ್ತು ಇಕ್ಬಾಲ್ ನಿರೂಪಿಸಿದರು. ‘ಮಜಾಭಾರತ’ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ಮತ್ತು ಬಳಗದವರಿಂದ ನಗೆ ಹಬ್ಬ ಕಾರ್ಯಕ್ರಮ ಮಣಿ ಕೋಟೆಬಾಗಿಲು ನಿರ್ವಹಣೆಯೊಂದಿಗೆ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.