ಹಳೇ ಹಾಡಿಗೆ ಶಾನ್ವಿ-ಶ್ರದ್ಧಾ ಡ್ಯಾನ್ಸ್!
Team Udayavani, Nov 1, 2017, 3:29 PM IST
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಚಿತ್ರ ನಟಿಯರಾದ ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾತ್ಸವ್ ಅವರು “ರೆಟ್ರೋ 2 ಮಟ್ರೋ’ ಶೀರ್ಷಿಕೆಯಡಿ ಕನ್ನಡದ ಜನಪ್ರಿಯ ಗೀತೆಗಳಿಗೆ ಕಾರೊಂದರಲ್ಲಿ ಕುಳಿತು ವಿನೂತನ ಶೈಲಿಯಲ್ಲಿ ಚಿತ್ರಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಜೋರು ಸದ್ದು ಮಾಡುತ್ತಿದೆ.
ಕಾರೊಂದರ ಮುಂದಿನ ಸೀಟಲ್ಲಿ ಕುಳಿತು, ಕನ್ನಡದ ಜನಪ್ರಿಯ ನಟರ, ಜನಪ್ರಿಯ ಕನ್ನಡ ಚಿತ್ರಗೀತೆಗಳಿಗೆ ಕುಳಿತಲ್ಲೇ ನಟನೆ ಮಾಡುವ ಮೂಲಕ ಕನ್ನಡಕ್ಕೆ ವಿಶೇಷ ನಮನ ಸಲ್ಲಿಸಿದ್ದಾರೆ. “ಸತ್ಯ ಹರಿಶ್ಚಂದ್ರ’ ಚಿತ್ರದ “ಕುಲದಲ್ಲಿ ಕೀಳ್ಯಾವುದೋ …’, “ನಾಗರಹಾವು’ ಚಿತ್ರದ “ಹಾವಿನ ದ್ವೇಷ …’, “ಮಂಡ್ಯದ ಗಂಡು’ ಚಿತ್ರದ “ಮಂಡ್ಯದ ಗಂಡು …’, “ಗೀತಾ’ ಚಿತ್ರದ “ಸಂತೊಷಕ್ಕೆ ಹಾಡು ಸಂತೋಷಕ್ಕೆ …’ ಸೇರಿದಂತೆ ಅನೇಕ ಹಾಡುಗಳಿಗೆ ಅಭಿನಯಿಸಿದ್ದಾರೆ.
ಅದರಲ್ಲೂ ಕಾರಲ್ಲಿ ಕುಳಿತಲ್ಲೇ, ಆ ಚಿತ್ರದ ಹೀರೋಗಳು ಹಾಕಿದ ಕಾಸ್ಟ್ಯೂಮ್ನಂತೆಯೇ ಈ ನಟಿಯರೂ ಅಂಥದ್ದೇ ಕಾಸ್ಟ್ಯೂಮ್ ಧರಿಸಿ ಮಾಡಿರುವುದು ವಿಶೇಷ. ಅಂದಹಾಗೆ, ಲೋಲ್ಬಾಗ್, ಫಿಲ್ಮಿ ಫನ್, ಟ್ರೋಲ್ ಹೈಕ್ಳು ಖ್ಯಾತಿಯ ಪ್ರದೀಪ್ ದೊಡ್ಡಯ್ಯ ಕೂಡ ಹಿಂಬದಿ ಸೀಟಲ್ಲಿ ಕುಳಿತು ಅವರಿಗೆ ಸಾಥ್ ಕೊಟ್ಟಿದ್ದಾರೆ. ಸದ್ಯಕ್ಕೆ ಈ ವೀಡಿಯೋ ಫೇಸ್ಬುಕ್ ಸೇರಿದಂತೆ ಉಳಿದ ಸಾಮಾಜಿಕ ತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.