ವಾಕಿ -ಟಾಕಿ ಬಳಕೆ: ಕೊಹ್ಲಿಗೆ ICC ಕ್ಲೀನ್ ಚಿಟ್
Team Udayavani, Nov 2, 2017, 5:00 PM IST
ಹೊಸದಿಲ್ಲಿ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಟಿ-20 ಪಂದ್ಯದ ವೇಳೆ ಡಗೌಟ್ ನಲ್ಲಿ ಕುಳಿತು ವಾಕಿ ಟಾಕಿ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ಗುರುವಾರ ಕ್ಲೀನ್ ಚಿಟ್ ನೀಡಿದೆ.
ಫಿರೋಜ್ ಶಾ ಕೊಟ್ಲಾ ದಲ್ಲಿ ಪಂದ್ಯ ನಡೆಯುತ್ತಿರುವಾಗಲೇ ವಾಕಿ ಟಾಕಿ ಬಳಸಿ ಪೆವಿಲಿಯನ್‌ನಲ್ಲಿದ್ದವರ ಸಂಪರ್ಕದಲ್ಲಿರುವ ದೃಶ್ಯಾವಳಿಗಳು ಟಿವಿಯಲ್ಲಿ ಬಿತ್ತರಗೊಂಡಿದ್ದವು. ಕೊಹ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಐಸಿಸಿ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು,’ಕೊಹ್ಲಿ ಅವರು ನಿಯಮ ಉಲ್ಲಂಘನೆ ಮಾಡಿಲ್ಲ. ಅವರು ಅನುಮತಿ ಪಡೆದೇ ವಾಕಿ ಟಾಕಿ ಬಳಕೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ಐಸಿಸಿಯ ಭ್ರಷ್ಟಾಚಾರ ವಿರೋಧಿ ಭದ್ರತಾ ಸಮಿತಿಯ ನಿಯಮದಂತೆ ಡ್ರೆಸ್ಸಿಂಗ್ ರೂಮ್ ಮತ್ತುಮೈದಾನದಲ್ಲಿ ಆಟಗಾರರು ಸೇರಿದಂತೆ ತಂಡದ ಇತರ ಸದಸ್ಯರು ಮೊಬೈಲ್ ಬಳಸುವಂತಿಲ್ಲ. ಬದಲಾಗಿ ವಾಕಿ ಟಾಕಿ ಬಳಸಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.