ಜೀವನಕ್ಕೆ ಹಾಲು, ಬದುಕುವುದಕ್ಕೆ ತುಪ್ಪ
Team Udayavani, Nov 3, 2017, 11:55 AM IST
ಆಗ ಬರಬಹುದು, ಈಗ ಬರಬಹುದು ಎಂದು ಕಾದಿದ್ದ “ಹಾಲು ತುಪ್ಪ’ ಇದೀಗ ಕೊನೆಗೂ ಇಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ರಾಘವೇಂದ್ರ ಎನ್ನುವವರು ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೇಳಿಕೊಳ್ಳುವುದಕ್ಕೆಂದೇ ನಿರ್ಮಾಪಕ ದೊಡ್ಮನೆ ವೆಂಕಟೇಶ್ ಬಂದಿದ್ದರು.
ಅವರ ಜೊತೆಗೆ ನಿರ್ದೇಶಕ ಶಶಾಂಕ್ ರಾಜ್, “ತಿಥಿ’ ಖ್ಯಾತಿಯ ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ, ನಾಯಕ ಪವನ್, ಸಂಗೀತ ನಿರ್ದೇಶಕ ಇಂದ್ರಸೇನಾ ಎಲ್ಲರೂ ಇದ್ದರು. ಈ ಚಿತ್ರವನನು ಬಿಡುಗಡೆ ಮಾಡುವುದಕ್ಕೆ ಹಲವು ಹಳೆಯ ವಿತರಕರನ್ನು ಸಂಪರ್ಕಿಸಿದರಂತೆ ವೆಂಕಟೇಶ್. ಯಾರೂ ಸರಿಯಾಗಿ ಸ್ಪಂದಿಸದ ಕಾರಣ, ರಾಘವೇಂದ್ರ ಅವರ ಮೊರೆ ಹೋಗಿದ್ದಾರೆ.
“ನಾನೂ ಆರಂಭದಲ್ಲಿ ಹೊಸಬನಾಗಿದ್ದೆ. ಹೊಸಬರಿಗೆ ಅವಕಾಶ ನೀಡಿದರೆ ತಾನೇ, ಅವರೇನೆಂದು ಗೊತ್ತಾಗುವುದು’ ಎಂದರು ವೆಂಕಟೇಶ್. ಈ ಹಳ್ಳಿ ಸೊಗಡಿನ ಕಥೆಗೆ ದೇಸಿ ಸಂಗೀತ ಸಂಯೋಜಿಸಿದ್ದಾರಂತೆ ಸಂಗೀತ ನಿರ್ದೇಶಕ ಇಂದ್ರಸೇನಾ. “ದೇವರ ಸೃಷ್ಟಿ ಹಾಲು, ಮನುಷ್ಯ ಸೃಷ್ಟಿ ಮಾಡಿದ್ದು ತುಪ್ಪ. ಜೀವನಕ್ಕೆ ಹಾಲು, ಬದುಕುವುದಕ್ಕೆ ತುಪ್ಪ ಬೇಕು.
ಈ ಚಿತ್ರದ ಮೂಲಕ ಹಾಲು-ತುಪ್ಪ ನಮಗೆಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ’ ಎಂದು ವ್ಯಾಖ್ಯಾನ ಮಾಡಿದರು ಇಂದ್ರಸೇನಾ. ಚಿತ್ರದಲ್ಲಿ ಗಡ್ಡಪ್ಪನವರು ನಾಟಿ ವೈದ್ಯನಾಗಿ ನಟಿಸಿದರೆ, ಅವರ ಮೊಮ್ಮಗನಾಗಿ ಗಡ್ಡಪ್ಪ ಅಭಿನಯಿಸಿದ್ದಾರೆ. ಇನ್ನು ಅವರ ಮೊಮ್ಮಗನ ಪಾತ್ರದಲ್ಲಿ ನಾಯಕ ಪವನ್ ಇದ್ದಾರೆ. ವೃತ್ತಿಯಲ್ಲಿ ಮಾಡಲ್ ಆಗಿರುವ ವಿಂಧ್ಯಾ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.