ಸಂಜೆ ಮೇಲೆ ಕರೀಬೇಡಿ

Team Udayavani, Nov 3, 2017, 11:55 AM IST

Devrantha-Manushya_(175).jpg

ಆ ನಿರೂಪಕಿ ಗೊಂದಲದಲ್ಲಿದ್ದರು. ಅವರೇ ಗೊಂದಲದಲ್ಲಿದ್ದರೋ ಅಥವಾ ಅವರನ್ನೇ ಗೊಂದಲಪಡಿಸಿದ್ದರೋ ಗೊತ್ತಿಲ್ಲ. ಒಟ್ನಲ್ಲಿ, ಮೈಕ್‌ ಹಿಡಿದು ಆ ಚಿತ್ರತಂಡದವರನ್ನೆಲ್ಲಾ ವೇದಿಕೆ ಮೇಲೆ ಕರೆದು ಕೂರಿಸಿದರು. ಬಳಿಕ ಈಗ ವೀಡಿಯೋ ಸಾಂಗ್‌ ನೋಡಿ ಅಂತ ವೇದಿಕೆ ಮೇಲಿದ್ದವರನ್ನು ಕೆಳಗಿಳಿಸಿದರು! ಕೆಲವೇ ಕ್ಷಣಗಳಲ್ಲಿ ವೀಡಿಯೋ ಸಾಂಗ್‌ ನೋಡೋಣ ಅಂತ ಮೈಕ್‌ನಲ್ಲಿ ಪದೇ ಪದೇ ಹೇಳ್ತಾನೆ ಇದ್ರು.

ಆದರೆ, ತಾಂತ್ರಿಕ ದೋಷವೋ ಏನೋ, ಐದು, ಹತ್ತು ನಿಮಿಷವಾದ್ರೂ ಹಾಡು ಮೂಡಿ ಬರಲೇ ಇಲ್ಲ. ಆಮೇಲೆ, ವೀಡಿಯೋ ಬದಲು ಆಡಿಯೋ ಕೇಳ್ಳೋಣವೆಂತಾಯ್ತು. ಮತ್ತೆ ವೇದಿಕೆ ಮೇಲೆ ಅತಿಥಿಗಳನ್ನ ಕರೆದು ಕೂರಿಸಿ, ಒಂದೊಂದು ಹಾಡು ಕೇಳಿಸಲು ನಿರ್ಧರಿಸಿದರು. ಅಷ್ಟೊತ್ತಿಗೆ ತಾಂತ್ರಿಕ ದೋಷಕ್ಕೆ ಮುಕ್ತಿ ದೊರೆತು, ತೆರೆಯ ಮೇಲೆ  ಹಾಡು ಬಂತು, ಟ್ರೇಲರ್‌ ಕೂಡ ಬಂತು. 

ಅಂದಹಾಗೆ, ಇಷ್ಟೆಲ್ಲಾ ಗಲಿಬಿಲಿ ಕಂಡುಬಂದದ್ದು “ದೇವ್ರಂಥ ಮನುಷ್ಯ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ. ನಾಯಕ ಪ್ರಥಮ್‌ 30 ನಿಮಿಷ ತಡವಾಗಿ ಬಂದರು. ಸೀದಾ ವೇದಿಕೆಗೆ ಬಂದ ಪ್ರಥಮ್‌, “ಕನ್ನಡದಲ್ಲಿ ಸುದೀಪ್‌ ಮತ್ತು ಯಶ್‌ ಚಿತ್ರಗಳ ಹಾಡು ಕೇಳ್ಳೋಕೆ ಸಖತ್‌ ಆಗಿರುತ್ತವೆ. ಅದೇ ರೇಂಜ್‌ನಲ್ಲಿ ಸಂಗೀತ ನಿರ್ದೇಶಕ ಪ್ರದ್ಯೋತನ್‌ ಈ ಚಿತ್ರದ ಹಾಡುಗಳನ್ನು ಕಟ್ಟಿ ಕೊಟ್ಟಿದ್ದಾರೆ.

ಇಲ್ಲಿ ನಿರ್ಮಾಪಕರೇ ದೇವ್ರಂಥ ಮನುಷ್ಯರು. ನನ್ನ ನಂಬಿ ಹಣ ಹಾಕಿದ್ದಾರೆ. ನಾನು ಲೈಫ‌ಲ್ಲಿ ಈವರೆಗೆ ಕುಡಿದಿಲ್ಲ, ನಾನ್‌ವೆಜ್‌ ತಿಂದಿಲ್ಲ. ಆದರೆ, ಇಲ್ಲಿ ನಿರ್ದೇಶಕರು ಹೇಳಿದಂತೆ ಮಾಡಿದ್ದೇನೆ. ಜನ ಒಪ್ಪಿದರೆ ಮಾತ್ರ ಗೆಲುವು, ಇಲ್ಲದಿದ್ದರೆ ಇಲ್ಲ’ ಅಂದರು ಪ್ರಥಮ್‌. ಕನ್ನಡ ಬಗ್ಗೆ ಭಾರೀ ಕಾಳಜಿ ಇದೆ ಅಂತೆಲ್ಲಾ ಕಿರಿಕ್‌ ಕೀರ್ತಿ ಬಗ್ಗೆ ಎಲ್ಲರೂ ಹೇಳಿದವರೇ ಹೆಚ್ಚು. ಅಂತಹ ಕೀರ್ತಿ ಈ ಚಿತ್ರದ ಹಾಡೊಂದರಲ್ಲಿ ಪ್ರಥಮ್‌ ಜತೆ ಹೆಜ್ಜೆ ಹಾಕಿದ್ದಾರೆ.

ಕನ್ನಡ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ಅವರು ವೇದಿಕೆ ಮೇಲೆ ಇಂಗ್ಲೀಷ್‌ ಪದ ಬಳಕೆ ಮಾಡಿದ ಮೇಲೆಯೇ ಗೊತ್ತಾಗಿದ್ದು! “ಕಳೆದ ವರ್ಷ ಬಿಗ್‌ಬಾಸ್‌ ಮನೆಯಲ್ಲಿ ನನ್ನ ಮಾತನ್ನು ಖಂಡಿಸುತ್ತಿದ್ದ ಪ್ರಥಮ್‌, ಈ ವರ್ಷ ನನ್ನ ಕರೆದುಕೊಂಡು ಚಿತ್ರ ಮಾಡಿದ್ದಾರೆ. ಸಿನಿಮಾ ಮುನ್ನ ಜನರನ್ನು ಖಂಡಿಸಬೇಡ, ಸಿನ್ಮಾ ರಿಲೀಸ್‌ ಆಗಲಿ’ ಅಂತ ಎಚ್ಚರಿಸಿದರು ಕೀರ್ತಿ.

ಸಂಗೀತ ನಿರ್ದೇಶಕ ಪ್ರದ್ಯೋತನ್‌ ಹಾಡುಗಳ ಬಗ್ಗೆ ಮಾತಾಡಿದರು. ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌ ಹೇಳಿದರು. ನಿರ್ದೇಶಕ ಕಿರಣ್‌ಶೆಟ್ಟಿ, ಸಿನ್ಮಾ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲಸ ಮಾಡಿದವರಿಗೆ, ಅವಕಾಶ ಕೊಟ್ಟವರಿಗೆ ನನ್ನದ್ದೊಂದು ಥ್ಯಾಂಕ್ಸ್‌ ಅಂತ ಹೇಳುವುದಕ್ಕಷ್ಟೇ ವೇದಿಕೆ ಬಳಸಿಕೊಂಡರು. 

ಅಂದು ಶ್ರುತಿರಾಜ್‌, ವೈಷ್ಣವಿ, ರಾಜಕೀಯ ಮುಖಂಡರಾದ ಅಂದಾನಪ್ಪ, ರಾಮಚಂದ್ರ ಶಿವಣ್ಣ, ನಿರ್ಮಾಪಕರಾದ ಮಂಜುನಾಥ್‌, ತಿಮ್ಮರಾಜ್‌, ವೆಂಕಟ್‌ಗೌಡ ಇತರರು ಇದ್ದರು. ಕೊನೆಯಲ್ಲಿ ಮಕ್ಕಳಿಂದ ಆಡಿಯೋ ಸಿಡಿ ರಿಲೀಸ್‌ ಮಾಡುವ ಹೊತ್ತಿಗೆ ಕಾರ್ಯಕ್ರಮಕ್ಕೂ ತೆರೆಬಿತ್ತು. ಅಷ್ಟೊತ್ತು ರೋಸಿದ್ದ ಪತ್ರಕರ್ತರು “ಸಂಜೆ ಮೇಲೆ ಪ್ರಸ್‌ಮೀಟ್‌ ಕರೀಬೇಡಿ’ ಅಂತ ನಗುತ್ತಲೇ ಹೊರಬಂದರು! 

ಟಾಪ್ ನ್ಯೂಸ್

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

6-bng

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.