ಚಿಟ್ಟೆ ಹಾರಲಿಕ್ಕೆ ರೆಡಿ
Team Udayavani, Nov 3, 2017, 11:56 AM IST
ಈ ಚಿತ್ರ ಮುಗಿಯುತ್ತೋ, ಇಲ್ಲವೋ ಎಂಬ ನಂಬಿಕೆಯೇ ಇರಲಿಲ್ಲವಂತೆ ಪ್ರಸನ್ನ ಅವರಿಗೆ. ಅದೇ ಕಾರಣಕ್ಕೆ ಅವರು “ಚಿಟ್ಟೆ’ ಎಂಬ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿಯನ್ನು ಪ್ರಚಾರ ಮಾಡುವುದಕ್ಕೆ ಹೋಗಿರಲಿಲ್ಲ. ಈಗ ಚಿತ್ರ ಮುಗಿಯುವ ಹಂತಕ್ಕೆ ಬಂದಿದೆ. ಪ್ರಸನ್ನರಿಗೂ ಧೈರ್ಯ ಬಂದಿದೆ. ಅದೇ ಧೈರ್ಯ ಅವರನ್ನು ಚಿತ್ರದ ಬಗ್ಗೆ ಹೇಳಿಕೊಳ್ಳುವಂತೆ ಮಾಡಿದೆ. ಅದೊಂದು ಮಧ್ಯಾಹ್ನ ಅವರು ತಮ್ಮ ಧೈರ್ಯ ಮತ್ತು ಚಿತ್ರತಂಡದವರ ಜೊತೆಗೂಡಿ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.
ಎಲ್ಲಾ ಸರಿ, ಚಿತ್ರ ಮುಗಿಯುವುದಿಲ್ಲ ಎಂದು ಪ್ರಸನ್ನರಿಗೆ ಯಾಕನಿಸಿತು. “ಆ ಸಂದರ್ಭಗಳೇ ಹಾಗಿದ್ದವು’ ಎಂಬ ಉತ್ತರ ಅವರಿಂದ ಬರುತ್ತದೆ. “ನಾನು “ರಂಗಪ್ಪ ಹೋಗಿಬಿಟ್ನಾ’ ಚಿತ್ರದ ನಂತರ ತುಂಬಾ ಕಲಿತೆ. ನಾನು ಸಿನಿಮಾ ಮಾಡಿದಿದ್ದಕ್ಕೂ ಅದೇ ಕಾರಣ. ಕೆಲವರು ಬಂದು ಸಿನಿಮಾ ಮಾಡಿಕೊಡಿ ಅಂತೇನೋ ಕೇಳಿದರು. ಆದರೆ, ಆ ಚಿತ್ರದಿಂದಾದ ನೋವು, ಹೊಸ ಚಿತ್ರ ನಿರ್ದೇಶಿಸುವುದಕ್ಕೆ ಒಪ್ಪುತ್ತಿರಲಿಲ್ಲ. ಸರಿಯಾದ ನಿರ್ಮಾಪಕರು ಬಂದರೆ ಮಾತ್ರ ಚಿತ್ರ ಮಾಡೋದಾಗಿ ನಿರ್ಧರಿಸಿದ್ದೆ.
ಈಗಲೂ ನನಗೆ ಸಿನಿಮಾ ಮಾಡಬೇಕೆಂಬ ಐಡಿಯಾ ಇರಲಿಲ್ಲ. ಕೆಲವು ಸ್ನೇಹಿತರಿದ್ದಾರೆ. ಅವರು ನೀರಿಗೆ ತಳ್ಳಿದರು. ನಾವಿದ್ದೇವೆ ಈಜು ಎಂದರು. ಮೊಸಳೆಗಳೇ ಇರುವ ನೀರಿನಲ್ಲಿ ಈಜುತ್ತಾ ಹೋದೆ. ಅವರು ದಡದ ಮೇಲೇ ನಿಂತು ಕೈ ಆಡಿಸುತ್ತಿದ್ದರು. ನಾನು ಈಜುತ್ತಾ ಈಜುತ್ತಾ ದಡಕ್ಕೆ ಹತ್ತಿರ ಬಂದುಬಿಟ್ಟಿದ್ದೇನೆ’ ಎಂದು ತಾವು ಸಂಭಾಷಣೆ ಬರೆಯುವ ರೀತಿಯಲ್ಲೇ ತಮಾಷೆಯಾಗಿ ಹೇಳಿದರು ಪ್ರಸನ್ನ.
ಅಂದು “ಚಿಟ್ಟೆ’ಯ ಬಗ್ಗೆ ಮಾತಾಡುತ್ತಾ, ಆಡುತ್ತಾ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪೋಸ್ಟರ್ ತೋರಿಸಿ ಮಾತನಾಡಿದ ಅವರು, “ಚಿಟ್ಟೆ ಎಂಬ ಹೆಸರಿನೊಳಗೆ ಬಳಸಿರುವ ಕೆಂಪು ಬಣ್ಣ ನೋಡಿದರೆ, ಇದರಲ್ಲೇನೋ ರೋಚಕವಾಗಿರುವ ವಿಷಯ ಇದೆ ಎಂದನಿಸಬಹುದು. ಹೌದು, ಇಲ್ಲಿ ತಲ್ಲಣ ಎನಿಸುವಂತಹ ಒಂದು ವಿಷಯ ಇದೆ. “ಚಿಟ್ಟೆ’ ಎಂಬ ಹೆಸರು ಇಡೋಕೆ ಕಾರಣವೂ ಇದೆ. ಬಟರ್‌ಫ್ಲೈ ಎಫೆಕ್ಟ್ ಎಂಬ ವಿಷಯದ ಬಗ್ಗೆ ಕೇಳಿರಬಹುದು.
ಒಂದು ಸಣ್ಣ ವಿಷಯ ಹೇಗೆ ದೊಡ್ಡ ಘಟನೆಗೆ ಕಾರಣವಾಗುತ್ತದೆ ಎಂಬುದಕ್ಕೆ ಬಟರ್‌ಫ್ಲೈ ಎಫೆಕ್ಟ್ ಎನ್ನುತ್ತಾರೆ. ಅದೇ ತರಹ ಯಾರೋ ತಮ್ಮ ಸಣ್ಣ ತಪ್ಪಿನಿಂದ, ಇನ್ನಾéರಧ್ದೋ ಬದುಕಿನಲ್ಲಿ ದೊಡ್ಡ ಆಘಾತ ಉಂಟು ಮಾಡುತ್ತಾರೆ. ಆ ತಪ್ಪು ನಮಗೆ ಚಿಕ್ಕದಿರಬಹುದು. ಅದು ಬೇರೆಯವರಿಗೆ ದೊಡ್ಡ ಆಘಾತವೇ ಆಗುತ್ತದೆ. ಅದೇ ವಿಷಯವನ್ನಿಟ್ಟುಕೊಂಡು, ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ.
ಈ ಚಿತ್ರದಲ್ಲಿ ನವರಸಗಳಿವೆ. ಚಿತ್ರ ಮನರಂಜಿಸುತ್ತಲೇ, ಹೃದಯ ತಟ್ಟುತ್ತಾ, ಭಾವುಕಗೊಳಿಸುತ್ತಾ ಹೋಗುತ್ತದೆ’ ಎಂದು ಹೇಳುತ್ತಾರೆ ಪ್ರಸನ್ನ. “ಚಿಟ್ಟೆ’ ಚಿತ್ರದಲ್ಲಿರುವುದು ಕೇವಲ ಐದೇ ಐದು ಪಾತ್ರಗಳಂತೆ. ನಾಯಕನಾಗಿ ಯಶಸ್ ಸೂರ್ಯ ಇದ್ದರೆ, ನಾಯಕಿಯಾಗಿ ಹರ್ಷಿಕಾ ಪೂಣಾತ್ಛ ಇದ್ದಾರೆ. ಇನ್ನು “ಜಟ್ಟ’ ಗಿರಿರಾಜ್, ದೀಪಿಕಾ ಮತ್ತು ನಾಗೇಶ್ ಕಾರ್ತಿಕ್ ನಟಿಸಿದ್ದಾರೆ. ಈ ಪೈಕಿ ಯಶಸ್, “ಕುರುಕ್ಷೇತ್ರ’ ಚಿತ್ರದ ಶೂಟಿಂಗ್‌ನಲ್ಲಿದ್ದುದರಿಂದ ಬಂದಿರಲಿಲ್ಲ.
ಗಿರಿರಾಜ್ ಮತ್ತು ದೀಪಿಕಾ ಸಹ ಬೇರೆ ಕಡೆ ಚಿತ್ರೀಕರಣದಲ್ಲಿದ್ದ ಕಾರಣ ಬಂದಿರಲಿಲ್ಲ. ಹರ್ಷಿಕಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. “ನಾನು ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಷ್ಟು ಚಿತ್ರಗಳಲ್ಲಿ, ಅಭಿನಯ ಮಾಡಿ ತೋರಿಸುತ್ತಿದ್ದ ನಿರ್ದೇಶಕರೆಂದರೆ ಅದು ಸುನೀಲ್ ಕುಮಾರ್ ದೇಸಾಯಿ ಒಬ್ಬರೇ. ಪ್ರಸನ್ನ ಸಹ ಅದೇ ತರಹ ಪ್ರತಿಯೊಂದನ್ನು ಅಭಿನಯಿಸಿ ತೋರಿಸುತ್ತಿದ್ದರು. ಅವರಿಗೆ ಎಷ್ಟು ಬೇಕು ಎಂಬುದು ಚೆನ್ನಾಗಿ ಗೊತ್ತಿದೆ.
ಅಷ್ಟನ್ನೇ ಚೆನ್ನಾಗಿ ತೆಗೆಯುತ್ತಿದ್ದರು. ಅವರು ಏನು ಹೇಳಿದ್ದರೋ, ಅದನ್ನು ಮಾಡುವ ಪ್ರಯತ್ನ ಮಾಡಿದ್ದೀನಿ’ ಎಂದರು ಹರ್ಷಿಕಾ. ಇದು ಪ್ರಸನ್ನ ನಿರ್ದೇಶನದ ಎರಡನೇ ಚಿತ್ರವಷ್ಟೇ ಅಲ್ಲ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಬಿ. ಶ್ರೀನಿವಾಸರಾವ್ ಎನ್ನುವವರ ಜೊತೆಗೆ ಸೇರಿ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿದ್ದರೆ, ಕೆಜೆಟನ್ ಡಯಾಸ್ ಅವರ ಹಿನ್ನೆಲೆ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.