ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ಆಸ್ಪತ್ರೆ ಬಂದ್
Team Udayavani, Nov 4, 2017, 10:18 AM IST
ಕಲಬುರಗಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯವ್ಯಾಪಿ ಕರೆಯ ಮೇರೆಗೆ ಶುಕ್ರವಾರ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದರಲ್ಲದೇ ಬೃಹತ್ ಪ್ರತಿಭಟನೆ ನಡೆಸಿದರು.
ಖಾಸಗಿ ವೈದ್ಯರೆಲ್ಲ ಮುಷ್ಕರ ಕೈಗೊಂಡ ಪರಿಣಾಮ ರೋಗಿಗಳು ವೈದ್ಯಕೀಯ ಸೇವೆ ಸಿಗದೇ ಪರದಾಡಿದರು. ಆಸ್ಪತ್ರೆಗಳ ಓಪಿಡಿ ಬೀಕೋ ಎನ್ನುತ್ತಿದ್ದವು. ಮುಷ್ಕರದಲ್ಲಿ ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳು, ಕರ್ನಾಟಕ ಖಾಸಗಿ ಅಸ್ಪತ್ರೆಗಳ ಒಕ್ಕೂಟ, ವಿವಿಧ ತಜ್ಞ ವೈದ್ಯರ ಸಂಘಟನೆಗಳು, ನರ್ಸಿಂಗ್ ಹೋಮ್ಸ್ ಅಸೋಶಿಯೇಶನ್, ರಕ್ತನಿಧಿಗಳು ಸೇರಿದಂತೆ ಇತರರೆಲ್ಲರೂ ಪಾಲ್ಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳು ಇಲ್ಲದೇ ಭಣಗುಡುತ್ತಿದ್ದವು.
ಬಂದ್ ಕರೆಯಿಂದಾಗಿ ನಗರದ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು
ಸಾರ್ವಜನಿಕ ಆಸ್ಪತ್ರೆ, ಸಂಗಮೇಶ್ವರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಸೇರಿದಂತೆ ಬಹುತೇಕ ಜಿಲ್ಲೆಯಾದ್ಯಂತ ಇರುವ ಎಲ್ಲ 700 ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಖಾಸಗಿ ವೈದ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರಲ್ಲದೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಭಾರತೀಯ ವೈದ್ಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ| ಕಿರಣ ದೇಶಮುಖ, ಹಿರಿಯ ವೈದ್ಯರಾದ ಡಾ| ಎಸ್. ಎಸ್. ಪಾಟೀಲ, ಡಾ| ಇಂದಿರಾ ಶಕ್ತಿ, ಡಾ| ಜಗನ್ನಾಥ ಬಿಜಾಪುರ, ಡಾ| ಎನ್.ಜಿ ಗಚ್ಚಿನಮನಿ, ಡಾ| ಆಂದೋಲಾ, ಡಾ| ಸಂತೋಷ ಮಂಗಶೆಟ್ಟಿ, ಡಾ| ಅಲೋಕ ಸಿ. ಪಾಟೀಲ ರೇವೂರ, ಡಾ| ಸಚೀನ ಶಹಾ ಇದ್ದರು.
ಸೇಡಂ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕೈಗೊಂಡ ಒಂದು ದಿನದ ಸಾಂಕೇತಿಕ ಬಂದ್ ಯಶಸ್ವಿಯಾಯಿತಾದರೂ ರೋಗಿಗಳು ಪರದಾಡಿದರು. ಬೆಳಗ್ಗೆಯಿಂದ ಹೊರ ರೋಗಿಗಳಿಗೆ ಅವಕಾಶ ನೀಡದೆ ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಿದ್ದವು ಇದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡಿದರಾದರೂ ಸರಿಯಾದ ಸೌಕರ್ಯ ಸಿಗದೆ ಹಿಂದಿರುಗಿದ ಪ್ರಸಂಗಗಳು ನಡೆದವು.
ಭಾರತೀಯ ವೈದ್ಯಕೀಯ ಸಂಘದೊಂದಿಗೆ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ಅನೇಕ ವೈದ್ಯರು ತಮ್ಮ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಎಸಿ ಡಾ| ಸುಶೀಲಾ ಅವರಿಗೆ ಸಲ್ಲಿಸಿದರು.
ಹಿರಿಯ ವೈದ್ಯ ಡಾ| ಎಸ್.ಬಿ. ಸುಂಕದ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸದಾನಂದ ಬೂದಿ, ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಡಾ| ಮೋಹನರೆಡ್ಡಿ ರುದ್ರವಾರ, ಡಾ| ಶ್ರೀನಿವಾಸರೆಡ್ಡಿ ಕೋಲಕುಂದಾ, ಡಾ| ಶಿವಶಂಕರ ತಳ್ಳಳ್ಳಿ, ಡಾ| ಉದಯಕುಮಾರ ಶಹಾ, ಡಾ| ಶರತಕುಮಾರ ದೇಸಾಯಿ, ನಿಸರ್ಗ ಆಸ್ಪತ್ರೆ ನಿರ್ದೇಶಕ ಡಾ| ಶ್ರೀನಿವಾಸ ಮೊಕದಮ್, ಡಾ| ರಾಜಕುಮಾರ ಬಿರಾದಾರ, ಡಾ| ಎಸ್.ಎಚ್. ಲಗಶೆಟ್ಟಿ ಇವಣಿ, ಡಾ| ಜಗನ್ನಾಥ ಗಡ್ಡದ ಡಾ| ಶ್ರೀನಿವಾಸ ರಂಜೋಳಕರ್, ಡಾ| ಸಲ್ಲಾವುದ್ದಿನ್, ಡಾ| ಸಂಗಪ್ಪ ಮುಧೋಳ, ಡಾ| ಸಂತೋಷ ಚವ್ಹಾಣ, ಡಾ| ಮೋಯಿನ್, ಸಿದ್ಧರಾಜ ತೊಟೇಂದ್ರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.