ಟಿಪ್ಪು ಬದಲು ಒಡೆಯರ್ ಜಯಂತಿ ಆಚರಿಸಿ
Team Udayavani, Nov 4, 2017, 11:00 AM IST
ಬೆಂಗಳೂರು: ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದ್ದ ಟಿಪ್ಪು ಜಯಂತಿಯನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಚರಣೆ ಮಾಡೋದು, ಅರಣ್ಯ ಇಲಾಖೆ ಕಾಡುಗಳ್ಳ ವೀರಪ್ಪನ್ ಜಯಂತಿ ಆಚರಣೆ ಮಾಡಿದಂತೆ ಎಂದು ಸಂಸದ ಪ್ರತಾಪ್ಸಿಂಹ ಹೇಳಿದ್ದಾರೆ.
ಅಡ್ವೋಕೇಟ್ಸ್ ಫಾರ್ ಡೆಮೊಕ್ರಸಿ ಸಂಘಟನೆ ಆಯೋಜಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಾತನಾಡಿ, ನಾವು ಕನಕ, ರಾಮ, ಹನುಮಂತ ಜಯಂತಿ ಆಚರಿಸುತ್ತೇವೆ. ಮಾಜಿ ಸಿಎಂ ಯಡಿಯೂರಪ್ಪ ಕನಕ ಜಯಂತಿ ಆಚರಣೆಗೆ ತಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನವರಾಗಿ, ನಾಲ್ವಡಿ ಕೃಷ್ಣರಾಜರ ಜಯಂತಿ ಆಚರಣೆ ಮಾಡುವುದಕ್ಕೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿ ಆಚರಣೆ ಮೂಲಕ ಸಿದ್ದರಾಮಯ್ಯ ಕೇವಲ ರಾಜಕೀಯ ಮಾಡ್ತಿಲ್ಲ. ನಮ್ಮನ್ನ ಅಭಿಮಾನ ಶೂನ್ಯರನ್ನಾಗಿ ಮಾಡುತ್ತಿದ್ದಾರೆ ಎಂದರು.
ವಿಮರ್ಶಕ ಡಾ.ಜಿ.ಬಿ.ಹರೀಶ್ ಮಾತನಾಡಿ, ಬ್ರಿಟಿಷರು ಟಿಪ್ಪು ಹತ್ಯೆಗೈದು ಮನುಕುಲ ಒಳಿತು ಮಾಡಿದ್ದಾರೆ. ಟಿಪ್ಪು ಸಾವಿಗೀಡಾಗದಿದ್ದರೆ ಇಂದು ಮೈಸೂರು ಉಳಿಯುತ್ತಿರುಲಿಲ್ಲ. ಟಿಪ್ಪು ಕಾಟ ತಾಳಲಾರದೆ ಚಾಮರಾಜನಗರದ ಜೈನರು ವೈನಾಡಿಗೆ ಓಡಿಹೋದರು. ಟಿಪ್ಪು ಒಬ್ಬ ದಕ್ಷಿಣದ ಔರಂಗಾಜೇಬ… ಎಂದು ಹೇಳಿದರು. ನಿವೃತ್ತ ನ್ಯಾ.ಪದ್ಮರಾಜ್, ವಕೀಲರಾದ ಅಮೃತೇಶ್, ನಟರಾಜ್ಶರ್ಮಾ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.