ಹುಣ್ಣಿಮೆ ಹಾಡಿಗೆ 100ನೇ ಸಂಭ್ರಮ


Team Udayavani, Nov 4, 2017, 3:13 PM IST

hunnime-haadu.jpg

ಬೆಂಗಳೂರಿನ ಹಳೇ ಬಡಾವಣೆ ಮಲ್ಲೇಶ್ವರಂನಲ್ಲಿ ಸದಾ ಸಾಂಸ್ಕೃತಿಕ ತಂಗಾಳಿ ಬೀಸುತ್ತಿರುತ್ತೆ. ಎತ್ತರದ ಕಟ್ಟಡಗಳ ನಡುವೆ ಚಂದ್ರನೇ ಕಾಣುವುದಿಲ್ಲ ಎಂಬ ಕೊರಗಿನಲ್ಲಿರುವ ಬೆಂಗಳೂರಿಗೆ ಚಂದ್ರಮವನ್ನು ಅದೇ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಮಲ್ಲೇಶ್ವರಂ ತೋರಿಸುತ್ತಿದೆ. ಪ್ರತಿ ಪೌರ್ಣಿಮೆಗೆ ಅಲ್ಲಿ ಹುಣ್ಣಿಮೆ ಹಾಡು ಆಯೋಜನೆ ಆಗುತ್ತೆ. ಕಾಡುಮಲ್ಲೇಶ್ವರ ಗೆಳೆಯರ ಬಳಗ ಈ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುತ್ತೆ.

ದಾಸ, ಶರಣ, ಸೂಫಿ, ಕಬೀರ, ಜಾನಪದ ಪರಂಪರೆ, ಪ್ರಗತಿಪರ, ಸಾಮಾಜಿಕ ಚಿಂತನೆಗೆ ಹಚ್ಚುವ ಹಾದಿಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದ ಕಲಾವಿದರು ಇಲ್ಲಿ ಗಾನದ ಹೊನಲನ್ನು ಹರಿಸಲಿದ್ದಾರೆ. ಜನಪದ, ವಚನ, ತತ್ವಪದ, ಶಾಸ್ತ್ರೀಯ, ಹಿಂದೂಸ್ಥಾನಿ, ಭಜನೆ, ಸುಗಮ, ಭಾವಗೀತೆಗಳನ್ನು ಪರಿಸರ ಪ್ರೀತಿಯ, ಮನುಜ ಪ್ರೇಮದ ಹಾಡುಗಳನ್ನು ಹಾಡಿದ್ದಾರೆ.

ಈ ಹುಣ್ಣಿಮೆ ಹಾಡಿಗೆ ಈಗ 100ನೇ ಸಂಭ್ರಮ. ನ.4ರ ಶನಿವಾರ ಬೆಳಗ್ಗೆ 9ಕ್ಕೆ ಹಸಿರು ಚೈತನ್ಯೋತ್ಸವ ಮೂಲಕ ಕಾರ್ಯಕ್ರಮ ಚಾಲನೆ ಗೊಳ್ಳಲಿದೆ. ಸಂಜೆ 6.30ಕ್ಕೆ ಉಸ್ತಾದ್‌ ಹಫೀಜ್‌ ಬಾಲೇಖಾನ್‌, ಉಸ್ತಾದ್‌ ರಯೀಜ್‌ ಬಾಲೇಖಾನ್‌ ಹಾಗೂ 25 ಸಿತಾರ್‌ ಕಲಾವಿದರಿಂದ “ಸಿತಾರ್‌ ತರಂಗ- ದಾಸಶರಣ ಪದಮಾಧುರ್ಯ’ ನಡೆಯಲಿದೆ.

ನ.5ರ ಬೆಳಗ್ಗೆ ಮೊಟ್ಟ ಮೊದಲ ಬಾರಿಗೆ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ. ಇದೇ ವೇಳೆ ಕೋಲಾರದ “ಈ ಭೂಮಿ’ ಕಲಾ ತಂಡದವರಿಂದ ತಮಟೆ ಮೆರುಗು ಜನರನ್ನು ಆಕರ್ಷಿಸಲಿದೆ. ಸಂಜೆ 6.30ಕ್ಕೆ ಖ್ಯಾತ ವಯೋಲಿನ್‌ ವಾದಕರಾದ ಚೆನ್ನೈನ ವಿದ್ವಾನ್‌ ಕುಮರೇಶ್‌ ಮತ್ತು ವಿದ್ವಾನ್‌ ಗಣೇಶ್‌ ತಂಡದವರಿಂದ “ವಯೋಲಿನ್‌ ವೈಭವ’ ಆಯೋಜಿಸಲಾಗಿದೆ.

ನ.6ರ ಸೋಮವಾರ “ಹುಣ್ಣಿಮೆ ಹಾಡು’ ಶತ ಸಂಭ್ರಮದ ಸಮಾರೋಪ ನಡೆಯಲಿದ್ದು, ತದನಂತರ ಸಂ.6.30ಕ್ಕೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ “ಸಂಗೀತ ಸುಧೆ’ ಗಾಯನ ಕಾರ್ಯಕ್ರಮ ನಡೆಯಲಿದೆ.

ಎಲ್ಲಿ?: ಕಾಡುಮಲ್ಲೇಶ್ವರ ಬಯಲುಮಂಟಪ, ಮಲ್ಲೇಶ್ವರ
ಯಾವಾಗ?: ನ.4, 5 ಮತ್ತು 6
ಸಂಪರ್ಕ: 9886707204

ಟಾಪ್ ನ್ಯೂಸ್

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.