ವಿಶ್ವಬ್ಯಾಂಕ‌ಲ್ಲಿ ಇದ್ದವರಿಂದ್ಲೇ ವರದಿ ಬಗ್ಗೆ ಟೀಕೆ: ಪ್ರಧಾನಿ

Team Udayavani, Nov 5, 2017, 6:50 AM IST

pm.jpg

ನವದೆಹಲಿ/ಕಾಂಗ್ರಾ: ವಿಶ್ವಬ್ಯಾಂಕ್‌ನ ಉದ್ದಿಮೆ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ದೇಶ 100ನೇ ಸ್ಥಾನ ಪಡೆದಿರುವ ಬಗ್ಗೆ ಕಾಂಗ್ರೆಸ್‌ ಕಟಕಿ ಪ್ರಧಾನಿ ನರೇಂದ್ರ ಮೋದಿಯವರನ್ನು ವಸ್ತುಶಃ ಕೆರಳಿಸಿದೆ. ಹಿಂದಿನ ಸಂದರ್ಭಗಳಲ್ಲಿ ವಿಶ್ವಬ್ಯಾಂಕ್‌ನಲ್ಲಿ ಕೆಲಸ ಮಾಡಿದವರೇ ಈಗ ಅದೇ ಸಂಸ್ಥೆಯ ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.

ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧವೇ ಮಾತುಗಳನ್ನಾಡಿದ ಪ್ರಧಾನಿ ಮೋದಿ, “ನಾನು ವಿಶ್ವಬ್ಯಾಂಕ್‌ ಪ್ರಧಾನ ಕಚೇರಿಯ ಕಟ್ಟಡವನ್ನೇ ನೋಡಿಲ್ಲ. ಆದರೆ ನಮ್ಮ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ನಂಬಿಕೆ ನನ್ನದು. ನಾವು ಈಗ ಮಾಡಿದ ಕೆಲಸವನ್ನು ಅವರೇ(ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ) ಮಾಡಿದ್ದರೆ, ಈಗ ನಮಗೆ ಸಿಕ್ಕಿರುವ ಹೆಗ್ಗಳಿಕೆ ಅವರ ಅವಧಿಯಲ್ಲಿಯೇ ಸಿಕ್ಕಿರುತ್ತಿತ್ತು’ ಎಂದು ಟೀಕಿಸಿದರು.

ದಿವಾಳಿತನ ಕಾಯ್ದೆ ಮತ್ತು ವಾಣಿಜ್ಯಿಕ ವಿವಾದಗಳನ್ನು ಪರಿಹಾರ ಮಾಡುವ ನ್ಯಾಯಾಂಗ ಪ್ರಕ್ರಿಯೆ ಸುಧಾರಣೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡದ್ದನ್ನು ಈಗ ಶುರು ಮಾಡಿದ್ದೇವೆ ಎಂದರು ಪ್ರಧಾನಿ.

ಸುಧಾರಣಾ ಕ್ರಮಗಳ ಬಗ್ಗೆ ಆಕ್ಷೇಪ ಮಾಡುವ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ ಮೋದಿ, “ಅವರೂ ಕೆಲಸ ಮಾಡಲಿಲ್ಲ. ಈಗ ನಾವು ಮಾಡುವುದಕ್ಕೂ ಅಡ್ಡಿ ಮಾಡಿ, ಪ್ರಶ್ನಿಸುತ್ತಿದ್ದಾರೆ’ ಎಂದು ದೂರಿದರು. “ಇಂಡಿಯಾ ಬಿಸಿನೆಸ್‌ ರಿಫಾಮ್ಸ್‌ì’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಈಗ ಹೂಡಿಕೆ ಮಾಡಲು ಅತ್ಯುತ್ತಮ ಅವಕಾಶ ಇದೆ ಎಂದು ಘೋಷಿಸಿದರು. 

ಮೂರು ವರ್ಷದ ಸಾಧನೆಯೇ ಕಾರಣ: ವಿಶ್ವಬ್ಯಾಂಕ್‌ ವರದಿಯಲ್ಲಿ ಭಾರತವು 142ನೇ ಸ್ಥಾನದಿಂದ 100ನೇ ಸ್ಥಾನಕ್ಕೆ ಏರಲು ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ಆರ್ಥಿಕತೆಯ ವಿವಿಧ ಮಜಲುಗಳಲ್ಲಿ ಕೈಗೊಂಡ ಸುಧಾರಣೆಯೇ ಕಾರಣ. ಪಿಎಫ್ ನೋಂದಣಿ ಮತ್ತು ವಿಥ್‌ಡ್ರಾವಲ್‌, ಐಟಿ ರಿಟರ್ನ್ಸ್ ಸರಳೀಕರಣ, ವಾಣಿಜ್ಯ ವಿವಾದಗಳಿಗೆ ಸಂಬಂಧಿಸಿದಂತೆ ಇರುವ ನ್ಯಾಯಾಂಗ ಪ್ರಕ್ರಿಯೆ ಸರಳಗೊಳಿಸಿದ್ದು, ಸುಲಭ ವಿಧಾನದಲ್ಲಿ ವಿದ್ಯುತ್‌ ಸಂಪರ್ಕ, ನಿರ್ಮಾಣ ಕ್ಷೇತ್ರಕ್ಕೆ ಸುಲಭ ಪರವಾನಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಕ್ರಮಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದರು.

ಮತ್ತಷ್ಟು ಸರಳ?: ಇದೇ ಸಂದರ್ಭದಲ್ಲಿ ಜಿಎಸ್‌ಟಿ ಬಗ್ಗೆ ಪ್ರಸ್ತಾಪಿಸಿದ ಮೋದಿ, ಸಣ್ಣ ಉದ್ದಿಮೆದಾರರಿಗೆ ತೊಡಕಾಗಿರುವ ಜಿಎಸ್‌ಟಿಯಲ್ಲಿನ ಅಂಶಗಳ ನಿವಾರ ಣೆಗೆ ರಾಜ್ಯ ಹಣಕಾಸು ಸಚಿವರ ಸಮಿತಿ ಒಪ್ಪಿಕೊಂಡಿದೆ. ನ.9, 10ರಂದು ಗುವಾಹಟಿಯಲ್ಲಿ ನಡೆಯಲಿರುವ ಸಮಿತಿ ಸಭೆಯಲ್ಲಿ ಅದನ್ನು ಅನುಮೋದಿಸುವ ಸಾಧ್ಯತೆ ಇದೆ ಎಂದರು. 2017ರ ವರದಿಯಲ್ಲಿ ಮೇ 2016ರ ವರೆಗೆ ಇರುವ ಅಂಶಗಳು ಸೇರಿಕೊಂಡಿವೆ. ಜಿಎಸ್‌ಟಿ ಸುಧಾರಣೆಯಿಂದ ಉಂಟಾ ಗಿರುವ ಪ್ರಭಾವ ಮುಂದಿನ ವರ್ಷದ ವಿಶ್ವಬ್ಯಾಂಕ್‌ ವರದಿಯಲ್ಲಿ ಸೇರಿಕೊಳ್ಳಲಿದೆ ಎಂದರು ಪ್ರಧಾನಿ.

ಪ್ರಮುಖ ಸಾಧನೆ: ಇದೇ ಕಾರ್ಯಕ್ರಮದಲ್ಲಿ ಮಾತ ನಾಡಿದ ವಿಶ್ವಬ್ಯಾಂಕ್‌ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ, ಪಟ್ಟಿಯಲ್ಲಿ ಭಾರತ 40 ಸ್ಥಾನಗಳಷ್ಟು ಮೇಲಕ್ಕೇರಿರು ವುದು ಅತ್ಯಂತ ಅಪರೂಪದ ಬೆಳವಣಿಗೆ. ಜಿಎಸ್‌ಟಿ ಮತ್ತು ಇತರ ಸುಧಾರಣಾ ಕ್ರಮಗಳಿಂದ 2047ರ ಒಳ ಗಾಗಿ ದೇಶವು ಮೇಲ್‌ ಮಧ್ಯಮ ಆದಾಯದ ಆರ್ಥಿ ಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಸಮರ ನಿಲ್ಲದು
ತಮ್ಮ ಪ್ರತಿಕೃತಿ ದಹನ, ಮೊಂಬತ್ತಿ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ಕಾಂಗ್ರೆಸ್‌ ಕೈಗೊಂಡರೂ ಭ್ರಷ್ಟಾಚಾರ ವಿರುದ್ಧದ ನನ್ನ ಸಮರ ನಿಲ್ಲದು ಎಂದಿದ್ದಾರೆ ಪ್ರಧಾನಿ ಮೋದಿ. ಹಿಮಾಚಲದ ಕಾಂಗ್ರಾ, ಸುರೇಂದ್ರನಗರ್‌ ಎಂಬಲ್ಲಿ ಶನಿವಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕ್ರಮ ಖಂಡಿತ ಎಂದರು. ತನ್ನ ನಾಯಕರು ಹೊಂದಿದ ಆಕ್ರಮ ಆಸ್ತಿ ಕೂಡ ಇದರಿಂದ ಸರ್ಕಾ ರದ ವಶವಾಗಲಿದೆ ಎನ್ನುವುದು ಕಾಂಗ್ರೆಸ್‌ ಆತಂಕ ಎಂದು ಲೇವಡಿ ಮಾಡಿದರು. ನ.8 ಅನ್ನು ಕರಾಳ ದಿನ ಎಂದು ಆಚರಿಸುವ ಪ್ರತಿಪಕ್ಷಗಳನ್ನು ಟೀಕಿಸಿದ ಅವರು, ಆ ದಿನ ಕಪ್ಪುಹಣದ ದಿನ ಎಂದು ಆಚರಿಸ ಬೇಕು. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ದಿಂದ ಕೋಪಗೊಂಡಿರುವ ಕಾಂಗ್ರೆಸ್‌, ನ.8ರಂದು ನನ್ನ ಪ್ರತಿಕೃತಿ ದಹನ ಮಾಡಬಹುದು. ಆದರೆ, ನಾನು ಸರ್ದಾರ್‌ ಪಟೇಲ್‌ ಅವರ ಹಿಂಬಾಲಕ. ನಾನು ಯಾವುದಕ್ಕೂ ಬಗ್ಗುವುದಿಲ್ಲ ಎಂದರು.

ಟಾಪ್ ನ್ಯೂಸ್

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.