ಮತ ಪಟ್ಟಿ ಪರಿಷ್ಕರಣೆ ತನಿಖೆ ಆಗಲಿ 

Team Udayavani, Nov 5, 2017, 11:55 AM IST

m1-mata-parish.jpg

ಮೈಸೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಗೋಲ್‌ಮಾಲ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಾಸಕ ಎಂ.ಕೆ.ಸೋಮಶೇಖರ್‌ ಆಗ್ರಹಿಸಿದರು. ನಗರದ ಕೆ.ಆರ್‌.ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ಮತದಾರರನ್ನು ತೆಗೆದು ಹಾಕಲಾಗಿದೆ ಎಂಬ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಆರೋಪಕ್ಕೆ ತಿರುಗೇಟು ನೀಡಿದರು.

ಕಳೆದ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರಿಗಳಾದ ಕೃಷ್ಣ ಮತ್ತು ರಂಗನಾಥ ಅವರು ರಾಮದಾಸ್‌ ಅವರ ಮನೆಯಲ್ಲೇ ಕುಳಿತು ಮತದಾರರ ಪಟ್ಟಿಯಲ್ಲಿ 20 ಸಾವಿರ ನಕಲಿ ಮತದಾರರನ್ನು ಸೇರ್ಪಡೆಗೊಳಿಸಿದ್ದಾರೆ. ಈ ಕುರಿತಂತೆ ನ್ಯಾಯಾಂಗ ತನಿಖೆ ಜತೆಗೆ ಸಿಬಿಐ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆ.ಆರ್‌.ಕ್ಷೇತ್ರ ವ್ಯಾಪ್ತಿಯಲ್ಲಿ 2013ರಲ್ಲಿ 2.16 ಲಕ್ಷ ಮತದಾರರಿದ್ದರೆ, 2017ರಲ್ಲಿ 2.36 ಲಕ್ಷ ಇದ್ದು, ಆ ಮೂಲಕ 19,377  ನಕಲಿ ಮತದಾರರನ್ನು ಸೇರಿಸಲಾಗಿದೆ. ಎಲ್ಲೆಲ್ಲಿ ಖಾಲಿ ನಿವೇಶನವಿದೆಯೋ, ಅಲ್ಲಿ ನಕಲಿ ಮತದಾರರನ್ನು ಸೇರಿಸಲಾಗಿದೆ. ಅದರಂತೆ ಶ್ರೀರಾಂಪುರದ ಮನೆಯೊಂದರಲ್ಲಿ ಕೇವಲ ಇಬ್ಬರು ವಾಸಿಸುತ್ತಿದ್ದು, ಅಲ್ಲಿ 18 ಮತಗಳು ಹಾಗೂ ಮತ್ತೂಂದು ಮನೆಯಲ್ಲಿ 21 ಮತದಾರರನ್ನು ಸೃಷ್ಟಿಸಲಾಗಿದೆ. ಈ ನಕಲಿ ಮತದಾರರನ್ನು ರಾಮದಾಸ್‌ರ ಶಿಷ್ಯರೇ ಹುಟ್ಟು ಹಾಕಿದ್ದಾರೆಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್‌ ಸಿಗುವುದಿಲ್ಲವೋ ಎಂಬ ಆತಂಕದಲ್ಲಿರುವ ರಾಮದಾಸ್‌ ಅವರು ಸುದ್ದಿಯಲ್ಲಿಲ್ಲದಿದ್ದರೆ ಜನ ತಮ್ಮನ್ನು ಮರೆತು ಬಿಡುತ್ತಾರೆಂಬ ಆತಂಕದಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಮಾಜಿ ಸಚಿವರು ಆರೋಪಿಸುವಂತೆ ಅಸ್ಲಾಂ ಎಂಬುವವರು ಯಾರೆಂಬುದೇ ತಮಗೆ ಗೊತ್ತಿಲ್ಲ,

ಹೀಗಿದ್ದರೂ ಅಲ್ಪಸಂಖ್ಯಾತರ ಹೆಸರನ್ನು ಸೃಷ್ಟಿಸಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ನಕಲಿ ಮತದಾರರನ್ನು ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಜಿಲ್ಲಾದಿಕಾರಿಗಳಿಗೆ ತಾವು ಬರೆದ ಪತ್ರಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಪಾಲಿಕೆ ಸದಸ್ಯ ಸುನೀಲ್‌, ಸೋಮಶೇಖರ್‌ ಇದ್ದರು.

ಟಾಪ್ ನ್ಯೂಸ್

Exam 3

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

NIkhil KUMMI

Byelection; ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ನಿಖಿಲ್‌?

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

1 ವರ್ಷದ ಆಶೀರ್ವಾದ ಕೇಳಿದ ಸಿಎಂ ಸಿದ್ದರಾಮಯ್ಯ: ಕುತೂಹಲ

1 ವರ್ಷದ ಆಶೀರ್ವಾದ ಕೇಳಿದ ಸಿಎಂ ಸಿದ್ದರಾಮಯ್ಯ: ಕುತೂಹಲ

10ನೇ ಬಾರಿ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌ ಒಡೆಯರ್‌10ನೇ ಬಾರಿ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌ ಒಡೆಯರ್‌

10ನೇ ಬಾರಿ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌ ಒಡೆಯರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Exam 3

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

NIkhil KUMMI

Byelection; ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ನಿಖಿಲ್‌?

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.