ಅಜ್ಜಾವರ- ಮಂಡೆಕೋಲು ರಸ್ತೆ ಕಾಮಗಾರಿ ಶೀಘ್ರ ಆರಂಭಿಸಿ
Team Udayavani, Nov 5, 2017, 3:00 PM IST
ಸುಳ್ಯ: ಕೇಂದ್ರ ರಸ್ತೆ ಅಭಿವೃದ್ಧಿ ನಿಗಮ (ಸಿಆರ್ಎಫ್) 6 ಕೋಟಿ ರೂ. ಗಳನ್ನು ಮಂಜೂರುಗೊಳಿಸಿದ್ದರೂ ಅಜ್ಜಾವರ – ಮಂಡೆಕೋಲು ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳದಿರುವ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಸಂಬಂಧಿತ ಮುಖ್ಯ ಎಂಜಿನಿಯರ್ಗೆ ದೂರವಾಣಿ ಮೂಲಕ ತತ್ಕ್ಷಣ ಕಾರ್ಯ ಪ್ರವೃತ್ತವಾಗುವಂತೆ ಸೂಚಿಸಿದ್ದಾರೆ.
ಶನಿವಾರ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಕಾಮಗಾರಿ ಆರಂಭಗೊಳ್ಳದ ಕುರಿತು ಅಜ್ಜಾವರ- ಮಂಡೆಕೋಲು ಗ್ರಾಮದ ರಸ್ತೆ ಅನುಷ್ಠಾನ ಸಮಿತಿಯವರು ಗಮನಸೆಳೆದರು. ಈ ಸಂದರ್ಭ ದೂರವಾಣಿ ಮೂಲಕ ಸಂಪರ್ಕಿಸಿ ಸಚಿವರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಅವರನ್ನು ತಾಂತ್ರಿಕ ಮಂಜೂರಾತಿ ದೊರಕಿದ್ದರೂ ಶೀಘ್ರ ಟೆಂಡರ್ ಮುಖಾಂತರ ತುರ್ತಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭ ಶಾಸಕ ಅಂಗಾರ ಹಾಗೂ ಜಿ.ಪಂ. ಮತ್ತು ತಾ.ಪಂ. ಜನಪ್ರತಿನಿಧಿಗಳು ಮತ್ತು ಪಕ್ಷ ಪ್ರಮುಖರು ಉಪಸ್ಥಿತರಿದ್ದರು.
‘ಉದಯವಾಣಿ ಗುರುತಿಸಿದ್ದ ಕುಗ್ರಾಮ’
ಸಂಬಂಧಿತ ಅಧಿಕಾರಿಯೊಂದಿಗೆ ಸಚಿವ ಡಿ.ವಿ. ಸದಾನಂದ ಗೌಡರು, ತನ್ನೂರಿನ ಈ ಕುಗ್ರಾಮ ಅಭಿವೃದ್ಧಿಯ ತೊಡಕಿನ ಬಗ್ಗೆ ಪ್ರಶ್ನಿಸಿದರಲ್ಲದೇ, ಹಿಂದೆ ಉದಯವಾಣಿ ಪತ್ರಿಕೆ ಮಂಡೆಕೋಲು ಗ್ರಾಮವನ್ನು ಕುಗ್ರಾಮವನ್ನಾಗಿ ಗುರುತಿಸಿತ್ತು ಎಂದು ಪ್ರಸ್ತಾಪಿಸಿ, ತುರ್ತು ಅವಶ್ಯವಿರುವ ಗ್ರಾಮದ ರಸ್ತೆ ಅಭಿವೃದ್ಧಿಯ ಬೇಡಿಕೆಯನ್ನು ತುರ್ತಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.