ವೈದ್ಯರಾಗುವ “ದಿವ್ಯಾಂಗರ” ಕನಸು ನನಸು
Team Udayavani, Nov 6, 2017, 6:00 AM IST
ಹೊಸದಿಲ್ಲಿ: ಇನ್ನು ಮುಂದೆ ವೈದ್ಯಕೀಯ ಪದವಿ ಪಡೆದು ಡಾಕ್ಟರ್ ಆಗಲು ಯಾರಿಗೂ ದೈಹಿಕ ಅಸಮರ್ಥತೆ ಅಡ್ಡಿ ಯಾಗುವುದಿಲ್ಲ. ಅಂಕವಿಕಲರು ಎಂಬ ಕಾರಣಕ್ಕೆ ವೈದ್ಯರಾಗುವ ಕನಸನ್ನು ಚಿವುಟಲು ಯಾರಿಗೂ ಅಧಿಕಾರವಿರುವುದಿಲ್ಲ.
ಅಂಗವಿಕಲ ವಿದ್ಯಾರ್ಥಿಗಳು, ಭಾರತದ ವೈದ್ಯಕೀಯ ಅಧ್ಯಯನ ನಿಯಂತ್ರಕದ ನಡು ವಿನ 2 ದಶಕಗಳ ಸಂಘರ್ಷಕ್ಕೆ ಈಗ ತೆರೆ ಬಿದ್ದಿದೆ. ಮುಂದಿನ ವರ್ಷದಿಂದ ಗಂಭೀರ ಅಂಗವಿಕಲರ ಸಹಿತ 21 ವಿಭಾಗಗಳ ಅಂಗ ನ್ಯೂನತೆ ಇರುವವರು ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾಡಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅವಕಾಶ ಕಲ್ಪಿಸಿದೆ. ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಖಡಕ್ ಆದೇಶಕ್ಕೆ ಮಣಿದಿರುವ ಎಂಸಿಐ ತನ್ನ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ.
ವಿವಿಧ ಕೆಟಗರಿಯ ಅಸಮರ್ಥತೆಗೆ ಅನು ಗುಣವಾಗಿ ನಿರ್ದಿಷ್ಟ ವೈದ್ಯಕೀಯ ಉದ್ಯೋಗ ನೀಡುವ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಎಂಸಿಐ ಕಾರ್ಯದರ್ಶಿ ರೀನಾ ನಯ್ಯರ್ ತಿಳಿಸಿದ್ದಾರೆ.
21 ಕೆಟಗರಿಗಳು: ದೃಷ್ಟಿಹೀನತೆ, ದೃಷ್ಟಿ ನ್ಯೂನತೆ, ಶ್ರವಣ ದೋಷ, ಚಲನಾ ಸಾಮರ್ಥ್ಯ ಇಲ್ಲದಿರುವಿಕೆ, ಕುಬj ದೇಹ, ಬೌದ್ಧಿಕ ಅಸಮರ್ಥತೆ, ಸ್ಕೆರೋಸಿಸ್ (ಗಡಸು ಗಟ್ಟಿಕೆ) ಸಹಿತ 21 ರೀತಿಯ ದೈಹಿಕ ನ್ಯೂನತೆ ಗಳಿರುವವರನ್ನೂ ಈ ಪಟ್ಟಿಗೆ ಸೇರಿಸಲಾಗಿದೆ.
ಸುಪ್ರೀಂ ಕೋರ್ಟ್ ಏನು ಹೇಳಿತ್ತು?: ಆಗಸ್ಟ್‌ನಲ್ಲಿ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಆ ವಿದ್ಯಾರ್ಥಿಗೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸುವಂತೆ ಆದೇಶಿಸಿತ್ತು. ಮಾತ್ರವಲ್ಲದೆ ಕೂಡಲೇ ನಿಯಮವನ್ನು ಬದಲಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತೆ ಸೂಚಿಸಿತ್ತು. ಅದರಂತೆ ಎಂಸಿಐ ಡಾ| ವೇದ್ ಪ್ರಕಾಶ್ ಮಿಶ್ರಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು ಕಾಯ್ದೆಯ ಸಂಪೂರ್ಣ ಅನುಷ್ಠಾನಕ್ಕೆ ಶಿಫಾ ರಸು ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರೆಗೆ ಇದ್ದ ನಿಯಮ?
ಶೇ.70ಕ್ಕಿಂತ ಕಡಿಮೆ ಅಂಗವಿಕಲರಾದ, ಅದರಲ್ಲೂ ಕಾಲುಗಳ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರವೇ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವ ಅವಕಾಶವಿತ್ತು. ಈ ಷರತ್ತು ದೇಶದಲ್ಲಿರುವ ಅಂಗವಿಕಲತೆಗೆ ಸಂಬಂಧಿಸಿದ ಇತರ ಎಲ್ಲ ಕಾನೂನುಗಳಿಗೂ ವಿರುದ್ಧವಾಗಿತ್ತು. ಹೀಗಾಗಿ ಅನೇಕ ಅಂಗವಿಕಲ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಅವಕಾಶ ಕೋರಿ ವೈಯಕ್ತಿಕವಾಗಿ ಕಾನೂನು ಹೋರಾಟ ಆರಂಭಿಸಿದ್ದರು. ಆದರೆ ಗಂಭೀರ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳು ವೈದ್ಯ ಪದವಿ ಪಡೆಯಲು ಅರ್ಹರಲ್ಲ ಎಂದೇ ಎಂಸಿಐ ವಾದಿಸುತ್ತಾ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.