ನರ್ತಕಿ ಮುಂದೆ ಭರ್ಜರಿ ಸಂಭ್ರಮ
Team Udayavani, Nov 6, 2017, 10:30 AM IST
ಧ್ರುವ ಸರ್ಜಾ ನಟಿಸಿರುವ, ಚೇತನ್ ಕುಮಾರ್ ನಿರ್ದೇಶನದ “ಭರ್ಜರಿ’ ಚಿತ್ರ 50 ದಿನ ಪೂರೈಸಿರೋದು ನಿಮಗೆ ಗೊತ್ತೇ ಇದೆ. ಈ ಖುಷಿಯನ್ನು ಭಾನುವಾರ ಚಿತ್ರತಂಡ ನರ್ತಕಿ ಚಿತ್ರಮಂದಿರದಲ್ಲಿ ಸಂಭ್ರಮಿಸಿತು. ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್ ಹಾಗೂ ಚೇತನ್ ಕುಮಾರ್ ಸೇರಿದಂತೆ ಚಿತ್ರತಂಡ ಜೊತೆಯಾಗಿ ಕೇಕ್ ಕತ್ತರಿಸಿತು.
ತಮ್ಮ ನೆಚ್ಚಿನ ನಟ ಚಿತ್ರಮಂದಿರಕ್ಕೆ ಭೇಟಿ ಕೊಡುವ ವಿಷಯ ತಿಳಿದ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಕಟೌಟ್ ಅಕ್ಕಪಕ್ಕ ನಿಂತುಕೊಂಡು ತಮ್ಮ ನಟನನ್ನು ಕಣ್ತುಂಬಿಕೊಳ್ಳುವ ದೃಶ್ಯ ಕೂಡಾ ಕಂಡು ಬಂತು. ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸುವ ಮೂಲಕ ಚಿತ್ರ ಗೆದ್ದ ಸಂತಸ ವ್ಯಕ್ತಪಡಿಸಿದರು.
“ಭರ್ಜರಿ’ ಚಿತ್ರ ಬರೋಬ್ಬರಿ 71 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಮಲ್ಟಿಪ್ಲೆಕ್ಸ್ನ ಸ್ಕ್ರೀನ್ಗಳನ್ನೂ ಸೇರಿಸಿದರೆ 90ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಚಿತ್ರ 50 ದಿನ ಪೂರೈಸಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. 50 ದಿನ ಪೂರೈಸಿದ ಚಿತ್ರ ಶತದಿನ ಆಚರಿಸುತ್ತಾ ಎಂದು ನೀವು ಕೇಳಿದರೆ ಖಂಡಿತಾ ಪೂರೈಸುತ್ತದೆ ಎಂಬ ಉತ್ತರ ಸಿಗುತ್ತದೆ. ಸುಮಾರು 12 ರಿಂದ 13 ಸೆಂಟರ್ಗಳಲ್ಲಿ “ಭರ್ಜರಿ’ 100 ದಿನ ಪೂರೈಸಲಿದೆ.
“ಭರ್ಜರಿ’ ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಹರಿಪ್ರಿಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಅವಿನಾಶ್, ಶ್ರೀನಿವಾಸಮೂರ್ತಿ, ಉದಯ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.