ಕಲ್ಲು ಕಲ್ಲಿನಲ್ಲೂ ಅನುರಣಿಸಿದ ಸಂಗೀತ, ಸಾಂಸ್ಕೃತಿಕ ರಸದೌತಣ


Team Udayavani, Nov 6, 2017, 10:56 AM IST

hami.jpg

ಹಂಪಿ: ಐತಿಹಾಸಿಕ ಹಂಪಿಯ ಕಲ್ಲು ಕಲ್ಲಿನಲಿ, ಮಣ್ಣಿನ ಕಣಕಣದಲ್ಲಿ ಮೂರು ದಿನಗಳ ಕಾಲ ಅಕ್ಷರಶಃ ಮಾರ್ದನಿಸಿದ್ದು ಸಂಗೀತ.. ಸಂಗೀತ.. ಸಂಗೀತ… ಎಂತಹ ಕಲ್ಲು ಮನಸಿನವರನ್ನು ಸೂಜಿಗಲ್ಲಿನಂತೆ ಸೆಳೆದಿದ್ದು ಜಾನಪದ ನೃತ್ಯ, ಭರತನಾಟ್ಯ, ತೈವಾನ್‌, ಆಮೆರಿಕಾ ಕಲಾವಿದರ ಫ್ಯೂಜನ್‌ ಡ್ಯಾನ್ಸ್‌, ಯುವ ಜನಾಂಗದ ಹೃದಯದಲ್ಲಿ ಸಂಗೀತದ ಕಿಚ್ಚೆಬ್ಬಿಸಿದ್ದು ಕುನಾಲ… ಗಾಂಜಾವಾಲ, ಮನೋಮೂತಿ, ಗುರುಕಿರಣ್‌ ಮತ್ತು ತಂಡದವರ ಸಂಗೀತ ಸಂಜೆ. ಸಾಹಿತ್ಯ ಆಸಕ್ತರ ಮನದಲ್ಲಿ ಚಿಂತನೆಗೀಡು ಮಾಡಿದ್ದು ಮಹಿಳಾ, ಯುವ ಕವಿಗೋಷ್ಠಿ. 

ಕವನ, ವಾಚನ, ಕಲಾಸಕ್ತರಲ್ಲಿ ಅಚ್ಚರಿಯ ಮೂಡಿಸಿದ್ದು, ಕವಿ ಕಾವ್ಯ ಕುಂಚ ಗಾಯನ. ಅವಕಾಶ ಮಾಡಿಕೊಟ್ಟಲ್ಲಿ
ಇತರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು ಎಂಬುದಕ್ಕೆ ವೇದಿಕೆಯಾಗಿದ್ದು ವಿಕಲಚೇತನರ ಉತ್ಸವ. ಐತಿಹಾಸಿಕ
ಹಂಪಿಯ ಗತವೈಭವವ ಮೆಲುಕು ಹಾಕುವ ಜೊತೆಗೆ ಈಗಿನ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದ ಹಂಪಿ
ಉತ್ಸವ-2017ರ ವಿವಿಧ ಸಾಂಸ್ಕೃತಿಕ ಕಾಯಕ್ರಮಗಳ ಒಟ್ಟಾರೆ ಚಿತ್ರಣ ಇದು. ಕನ್ನಡನಾಡಿನ ಪ್ರಮುಖ ಅರಸರಲ್ಲಿ ಒಬ್ಬರಾದ ಕೃಷ್ಣದೇವರಾಯ ಅಪ್ರತಿಮ ಶೂರ ಮಾತ್ರವಲ್ಲ ಕಲೆ, ಸಾಂಸ್ಕೃತಿಕ ಮಹಾನ್‌ ಪೋಷಕರು ಎಂಬುದು ಜನಜನಿತ.

ನಾಡು ಮೆಚ್ಚಿದ ಅರಸನ ಆಶಯದಂತೆ ಸರ್ಕಾರ ಮೂರು ದಿನ ನಡೆಸಿದ ಹಂಪಿ ಉತ್ಸವದಲ್ಲಿ ಬಹುತೇಕ ಸಾಂಸ್ಕೃತಿಕ
ಕಾಯಕ್ರಮಕ್ಕೆ ಆತಿ ಹೆಚ್ಚಿನ ಪ್ರಾಧ್ಯಾನತೆ ನೀಡಿತ್ತು ಎಂಬುದಕ್ಕೆ 14 ವೇದಿಕೆಯಲ್ಲಿ ನಡೆದ ಬಹುತೇಕವು ಸಾಂಸ್ಕೃತಿಕ ಕಾಯಕ್ರಮ. ನೆಲದ ಸಾಂಸ್ಕೃತಿಕತೆಯ ಮೂಸೆಯಲ್ಲಿ ಮೂಡಿ ಬಂದು ಈ ಕ್ಷಣಕ್ಕೂ ಎಂತವರಲ್ಲೂ ಸಂಗೀತದ ಅಭಿರುಚಿಯ ಜಾಗೃತಿ ಮೂಡಿಸುವ ಜಾನಪದ ಹಾಡುಗಳಿಂದ ಹಿಡಿದು ಆಬ್ಬರದ ಸಂಗೀತದ ಮಧ್ಯೆದಲ್ಲಿ ಸಾಹಿತ್ಯವೇ ಕಾಣ ಸಿಗದ ಚಲನಚಿತ್ರಗಳ ಹಾಡುಗಳವರೆಗೆ ಸಾಂಸ್ಕೃತಿಕ ಕಾಯಕ್ರಮ ವೇದಿಕೆಯಾಗಿತ್ತು.

ಕನ್ನಡ ಮತ್ತು ಹಿಂದಿಯಲ್ಲಿ ತನ್ನದೇ ಕಲಾಭಿಮಾನಿಗಳ ಹೊಂದಿರುವ ಕುನಾಲ… ಗಾಂಜಾವಾಲ, ಈಗಿನ ಯುವ
ಜನಾಂಗದ ಐಕಾನ್‌ ಟಿಪ್ಪು, ಹುಡುಗ- ಹುಡುಗಿಯರ ಹೃದಯದಲ್ಲಿ ಸಂಗೀತದ ಕಿಚ್ಚು- ಹುಚ್ಚೆಬ್ಬಿಸುವ ಗುರುಕಿರಣ್‌, ಸುಮಧುರ ಗೀತೆಗಳ ಮೂಲಕ ಮುದ ನೀಡುವ ಮನೋಮೂತಿ ಸಂಗೀತ ಸುಧೆ ಧಾರೆ ಹರಿಸಿದರು. ಹಂಪಿ
ಉತ್ಸವಕ್ಕೆ ಬಂದವರ ಉತ್ಸಾಹವನೂ ಮೂಡಿಗೊಳಿಸಿದರು.

ಕೊರೆಯುವ ಚಳಿಯಲ್ಲೂ ಬೆಚ್ಚನೆಯ ಅನುಭವಕ್ಕೆ ಕಾರಣರಾದರು. ಭರತನಾಟ್ಯ ಕ್ಷೇತ್ರದಲ್ಲಿ ಭಾರತ ಮಾತ್ರವಲ್ಲ
ವಿದೇಶದಲ್ಲೂ ಮನೆ ಮಾತಾಗಿರುವ ಪ್ರತಿಭಾ ಪ್ರಹ್ಲಾದ್‌, ವೈಜಯಂತಿ ಕಾಶಿ ಇತರರರು ನೃತ್ಯದ ಮೂಲಕ ಲಕ್ಷಾಂತರ
ಜನರ ಮನ ಗೆದ್ದರು. ಸರೋದ್‌ ವಾದನದಲ್ಲಿ ತಮ್ಮದೇ ಖ್ಯಾತಿ ಹೊಂದಿರುವ ಮೈಸೂರಿನ ಪಂಡಿತ್‌ ರಾಜೀವ ತಾರಾನಾಥ್‌ ಕಚೇರಿ, ಸೂಫಿ ಹಾಡುಗಳ ಖ್ಯಾತಿಯ ಮುಂಬಯಿನ ಮೀರ್‌ ಮುಕ್ತಿಯಾರ್‌ ಆಲಿ, ಸುಗಮ ಸಂಗೀತದ ದಿಗ್ಗಜರಾದ ರತ್ನಮಾಲಾ ಪ್ರಕಾಶ್‌, ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂತಿ, ಸುನೀತಾ ಇತರರು ಸುಗಮ ಸಂಗೀತ ಸಂಜೆ ಸಂಗೀತದ ರಸದೌತಣ ಉಣಬಡಿಸಿತು. ಜಿ. ಚಂದ್ರಕಾಂತ್‌, ಕಲಾವತಿಯವರು ನಡೆಸಿಕೊಟ್ಟ ತ್ರಿಭಾಷಾ ವಚನ ಗಾಯನ ಜನರ ಮಂತ್ರಮುಗ್ಧನ್ನಾಗಿಸಿತು. ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಕನ್ನಡದ ವಚನಗಳು ಪ್ರಸ್ತುತಗೊಂಡವು.

ರಂಗಗೀತೆಯ ನಾಡಿನ ಮನೆ ಮಾತಾಗಿರುವ ಸುಭದ್ರಮ್ಮ ಮನ್ಸೂರ್‌ ಪ್ರಸ್ತುತಪಡಿಸಿದ ರಂಗಗೀತೆ ರಂಗಾಸಕ್ತರ
ಮುದಗೊಳಿಸಿದವು. ತೈವಾನ್‌-ಅಮೇರಿಕಾದ ಟರ ಕ್ಯಾತ್ರಿನೆ ಪಾಂಡಿಯಾ ಮತ್ತು ಬಿಲ್ಲಿಚಾಂಗ್‌ ತಂಡದ ಫ್ಯೂಜನ್‌ ಡ್ಯಾನ್ಸ್‌ ಯುವಕರ ಹುಚ್ಚೆಬ್ಬಿಸಿತು.
ರಾ. ರವಿಬಾಬು

ಕಾರ್ತಿಕ ಚಳಿಯಲ್ಲಿ ಶಾನ್‌ ಗಾಯನದ ವಿದ್ಯುತ್‌ ಸಂಚಾರ
ಹಂಪಿ: ದುನಿಯಾ ಮೆ ಲೋಗೋನ್‌ ನೆ ದಿಲ್‌ ಅಪ್ನೆ ಫಿರ್‌ ತಾಮಿಯೇ, ಆಯಾ ಹೂನ್‌ ಲೇಕರ್‌ ಮೈ ಫಿರ್‌ ಕಿತ್ನೆ ಹಂಗಾಮೆ! ಡಾನ್‌ ಚಲನಚಿತ್ರದ ಪ್ರಖ್ಯಾತ ಹಾಡನ್ನು ತಮ್ಮ ಸಿರಿಕಂಠದಲ್ಲಿ ಪ್ರಸ್ತುತಪಡಿಸುತ್ತಾ ಹಾವಭಾವಗಳೊಂದಿಗೆ ನೆರೆದಿದ್ದ ಸಂಗೀತ ಪ್ರೇಮಿಗಳಲ್ಲಿ ಖ್ಯಾತ ಬಾಲಿವುಡ್‌ ಹಾಗೂ ಬಹುಭಾಷಾ ಗಾಯಕ ಶಾನ್‌ ಕಾರ್ತಿಕದ ಚಳಿಯಲ್ಲಿ ಬೆಚ್ಚನೆಯ ಭಾವ ಮೂಡಿಸಿದರು. ಹಂಪಿ ಉತ್ಸವ-2017ರ ಅವತರಣಿಕೆಯಲ್ಲಿ ಗಾಯತ್ರಿ ಪೀಠದ ಭವ್ಯ ವೇದಿಕೆಯಲ್ಲಿ ವೈವಿಧ್ಯಮಯ ರಾಗ-ಭಾವಗಳ ಮಾಲಿಕ ಶಾನ್‌ ಶನಿವಾರ ನಡುರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಸೋಲೋ, ರೋಮ್ಯಾಂಟಿಕ್‌ ಹಾಗೂ ಯುಗಳ ಗೀತೆಗಳನ್ನು ಪ್ರಸ್ತುತಪಡಿಸಿದರು. 

ನೀನು ನಿಂತರೆ, ಕುಡಿ ನೋಟವೇ ಮುಂತಾದ ಕನ್ನಡ ಹಾಡುಗಳನ್ನೂ ಹಾಡಿದ ಶಾನ್‌ ಹೆಚ್ಚಾಗಿ ಹಿಂದಿ ಚಲನಚಿತ್ರ ಗೀತೆಗಳನ್ನೇ ಹಾಡಿದರು. ಜೊತೆಗೆ ತಮ್ಮ ವಿವಿಧ ರಾಗ-ಭಾವಗಳಿದ್ದ ಹಾಡುಗಳ ತುಣುಕುಗಳನ್ನು ಪೋಣಿಸಿದ ಗೀತ ಮಾಲೆಯನ್ನೂ ಚಳಿಯಲ್ಲಿ ಬೆವರುತ್ತಾ ಹಾಡಿ, ಕುಣಿದು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ರಂಜಿಸಿದರು. ಆಬ್‌ ಸೆ ತೆರೆ ನೈನಾ, ಬಚ್‌ನಾ ಹೈ ಹಸೀನೋ, ಬಿನ್‌ ಕುಚ್‌ ಕಹೇ-ಬಿನ್‌ ಕುಚ್‌ ಸುನೇ ಸೇರಿದಂತೆ ಹತ್ತಾರು ಹಿಂದಿ ಚಲನಚಿತ್ರಗಳ ಹಾಡುಗಳನ್ನು ಸಹ ಗಾಯಕಿ ಹಿಮಾಲಿ ಹಾಗೂ ವೃತ್ತಿಪರ ಹಿನ್ನೆಲೆ ಸಂಗೀತಗಾರ ರೊಂದಿಗೆ ಹಾಡಿದ ಶಾನ್‌ ನೆರೆದಿದ್ದ ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ತಮ್ಮ ಪವರ್‌ಫುಲ್‌ ಗಾನ ಲಹರಿಯಿಂದ ರಂಜಿಸಿದರು.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.