ಸುಸ್ಥಿರ ಹಾದಿಯ ಹುಡುಕಾಟದಲ್ಲಿ…


Team Udayavani, Nov 6, 2017, 6:00 PM IST

susutira.jpg

ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 19ನೇ “ಜಾಗತಿಕ ಸಾವಯವ ಸಮಾವೇಶ’ಕ್ಕೆ ದೇಶ-ದೇಶಗಳಿಂದ ರೈತರು, ವಿಜಾnನಿಗಳು, ಆಹಾರ ತಜ್ಞರು ಹಾಗೂ ಉದ್ದಿಮೆದಾರರು ಬರಲಿದ್ದಾರೆ. ನ. 9ರಿಂದ 11ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಈ ಸಮಾವೇಶ ಸಾವಯವ ಚಳವಳಿಗೆ ಹೊಸ ಆಯಾಮ ನೀಡಿ, ಅದನ್ನು ಇನ್ನಷ್ಟು ಬಲಿಷ್ಠಗೊಳಿಸಲು ನೆರವಾಗುವ ನಿರೀಕ್ಷೆ ಇದೆ.

ಬರೀ ಎರಡು ದಶಕಗಳ ಹಿಂದೆ ಕೃಷಿ ವಿಜಾnನಿಗಳು ಮಂತ್ರದಂತೆ ರಸವಿಷಗಳ ಹೆಸರುಗಳನ್ನು ಯಾವುದೇ ಮುಜುಗರ ಇಲ್ಲದಂತೆ ಜಪಿಸುತ್ತಿದ್ದುದನ್ನು ನೆನಪಿಸಿಕೊಳ್ಳಿ. ಅವು ಪರಿಸರ ಹಾಗೂ ಆರೋಗ್ಯದ ಮೇಲೆ ಎಂಥ ಮಾರಕ ಪರಿಣಾಮ ಬೀರುತ್ತವೆ ಎಂಬುದು ಗೊತ್ತಿದ್ದರೂ  ದರಾಚೆದಿನ ಪರಿಣಾಮಗಳ ಬಗ್ಗೆ ಆಧುನಿಕ ಕೃಷಿ ವಿಜಾnನ ಹೆಚ್ಚು ಯೋಚನೆ ಮಾಡಿರಲಿಲ್ಲ (ಈಗಲೂ ಕೃಷಿಯಲ್ಲಿ ಏನಾದರೂ ಸಮಸ್ಯೆ ಎದುರಾದರೆ ಒಂದಷ್ಟು ವಿಜಾnನಿಗಳು, ರಾಸಾಯನಿಕಗಳನ್ನು
ಬಿಟ್ಟು ಬೇರೆ ಏನನ್ನೂ ಹೇಳುವುದಿಲ್ಲ, ಆ ಮಾತು ಬೇರೆ).

ರಸವಿಷಗಳು ತಂದಿಟ್ಟ ಬಿಕ್ಕಟ್ಟನ್ನು ಜಗತ್ತು ಈಗ ಕೋಪದಿಂದ ನೋಡುತ್ತಿರುವ ಹೊತ್ತಿನಲ್ಲಿ ಸಾವಯವ ಕೃಷಿ ಒಂದು ಅತ್ಯುತ್ತಮ ಪರ್ಯಾಯ ಎಂಬುದು ಸಾಬೀತಾಗುತ್ತಿದೆ. ಯಾವುದೇ ಗಟ್ಟಿ ನೆಲೆ ಇಲ್ಲದೇ ರೈತರೇ ಸ್ವಯಂಸ್ಫೂರ್ತಿಯಿಂದ ಕಟ್ಟಿಕೊಳ್ಳುತ್ತಿರುವ ಸಾವಯವ ಕೃಷಿಯು ಒಂದು ಚಳವಳಿ ಯಾಗಿಯೂ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ನವದೆಹಲಿಯಲ್ಲಿ ಇದೇ 9ರಿಂದ ನಡೆಯಲಿರುವ ಮೂರು ದಿನಗಳ “ಜಾಗತಿಕ ಸಾವಯವ ಸಮಾವೇಶ’ (ಆರ್ಗಾನಿಕ್‌
ವರ್ಲ್ಡ್ ಕಾಂಗ್ರೆಸ್‌-2017) ಸಾವಯವ ಆಂದೋಲನಕ್ಕೆ ಗಟ್ಟಿತನವನ್ನು ನೀಡುವ ಆಶಾವಾದ ಇದೆ.

ಸಾವಯವ ಕೃಷಿಯು ಭಾರತಕ್ಕೆ ಹೊಸದೇನಲ್ಲ. ಇಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಿದ್ದುದು ಇದೇ ವ್ಯವಸಾಯ. ಹರಪ್ಪ- ಮೆಹೇಂಜೊದಾರೊ ಕಾಲದಲ್ಲೂ ಸುಸ್ಥಿರ ಕೃಷಿಯ ಕುರುಹುಗಳು ಸಿಕ್ಕಿವೆ. ಸಸ್ಯಗಳಿಗೆ ದಾಳಿ ಮಾಡುವ ಕೀಟ ಹಾಗೂ ರೋಗವನ್ನು ಪರಿಸರಕ್ಕೆ ಧಕ್ಕೆಯಾಗದಂತೆ ನಿಯಂತ್ರಿಸುತ್ತಿದ್ದ ವಿಧಾನಗಳು ಹಳೆಯ ಗ್ರಂಥಗಳಲ್ಲಿವೆ. ಅಷ್ಟಕ್ಕೂ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದ್ದ ಸಾಂಪ್ರದಾಯಿಕ ತಳಿಗಳು ರೋಗ-ಕೀಟನಿರೋಧಕ ಶಕ್ತಿಯನ್ನೇ ಪಡೆದಿದ್ದವು. 

ಭಾರತದಲ್ಲಿ ಅರವತ್ತರ ದಶಕದಲ್ಲಿ ಕಾಲಿಟ್ಟ “ಹಸಿರು ಕ್ರಾಂತಿ’ಯು ಆಹಾರ ಸ್ವಾವಲಂಬನೆಯನ್ನು ಸಾಧಿಸಿತು. ಅಧಿಕ ಆಹಾರ ಉತ್ಪಾದಿಸಿ, ರಫ್ತು ಮಾಡುವ ಮಟ್ಟಕ್ಕೂ ದೇಶಬೆಳೆಯಿತು. ಆದರೆ ಅದಕ್ಕೆ ಅನ್ನದಾತರು ತೆತ್ತ ಬೆಲೆ ಎಷ್ಟು? ಅಧಿಕ, ಅತ್ಯಧಿಕ ಉತ್ಪಾದನೆ ಎಂದೆಲ್ಲ ಪ್ರಚೋದಿಸುತ್ತ ನೆಲ- ಜಲವನ್ನು ವಿಷಮಯಗೊಳಿಸುತ್ತ ಸಾಗಿದ ಹಸಿರು ಕ್ರಾಂತಿಯು, ರೈತನಿಂದ ನೆಮ್ಮದಿಯನ್ನು ಕಸಿದುಕೊಂಡಿದ್ದು ವಾಸ್ತವ. ಇಷ್ಟು ದಿನ ರಾಸಾಯನಿಕಗಳ ಜಪ ಮಾಡುತ್ತಿದ್ದ ಕೃಷಿ ಸಂಶೋಧಕರು ಈಗ ಸಾವಯವದ ಜಪ ಮಾಡುತ್ತಿರುವುದು “ಹಸಿರು ಕ್ರಾಂತಿ’ಯ ಭ್ರಮೆಯಿಂದ ಅಷ್ಟರ ಮಟ್ಟಿಗೆ ಆಚೆ ಬಂದಿರುವುದರ ಸಂಕೇತವೇ ಆಗಿದೆ.

ಜಗತ್ತಿನಲ್ಲಿ ಸಾವಯವ ಚಳವಳಿಯು ತನ್ನ ರೆಂಬೆ-ಕೊಂಬೆ ಚಾಚಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿಯೇ “ಜಾಗತಿಕ ಸಾವಯವ ಸಮಾವೇಶ’ ನಡೆಯುತ್ತಿದೆ. 120 ದೇಶಗಳ 815 ಸಂಘ-ಸಂಸ್ಥೆಗಳೊಂದಿಗೆ ಸಾವಯವ ಚಳವಳಿಯನ್ನು ಬಲಿಷ್ಠಗೊಳಿಸುವ ಕೆಲಸದಲ್ಲಿ ತೊಡಗಿರುವ “ಸಾವಯವ ಕೃಷಿ ಚಳವಳಿಯ ಅಂತರರಾಷ್ಟ್ರೀಯ ಒಕ್ಕೂಟ’ದ (ಐಫೋಮ್‌)ನೇತೃತ್ವದಲ್ಲಿ ಮೂರು ವರ್ಷಗಳಿಗೊಮ್ಮೆ ಈ ಸಮಾವೇಶ ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಸಮಾವೇಶದ ಉಸ್ತುವಾರಿಯನ್ನು ಭಾರತೀಯ ಸಾವಯವ ಕೃಷಿ ಸಂಸ್ಥೆ (ಒಫಾಯ್‌) ವಹಿಸಿಕೊಂಡಿದೆ. ವಿವಿಧ ದೇಶಗಳಿಂದ ನಾಲ್ಕು ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿ ವಿಜಾnನಿಗಳು, ರೈತರು, ಸಂಘಟನೆಗಳ ಪ್ರತಿನಿಧಿಗಳು, ಉದ್ದಿಮೆದಾರರು ಭಾಗವಹಿಸುವ ಸಮಾವೇಶದಲ್ಲಿ ಅನುಭವ ಹಂಚಿಕೆ, ಅನುಶೋಧನೆ, ಶುದಟಛಿ ಆಹಾರ ಹಾಗೂ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಹಲವು ಗೋಷ್ಠಿಗಳು ಇರಲಿವೆ. ಜಗತ್ತಿನ ವಿವಿಧ ಭಾಗಗಳಿಂದ ಆಯ್ದ ರೈತರು ತಮ್ಮ ಯಶಸ್ವಿ ಕೃಷಿ ವಿಧಾನವನ್ನು ಹಂಚಿಕೊಳ್ಳುವ ಗೋಷ್ಠಿಗಳು ಸಮಾವೇಶದ ಪ್ರಮುಖ ಆಕರ್ಷಣೆ. ಕರ್ನಾಟಕದಿಂದ ಸುಮಾರು ಇಪ್ಪತ್ತು ಕೃಷಿಕರು ಭಾಗವಹಿಸಲಿರುವುದೂ ವಿಶೇಷ. ‘ಕೃಷಿಯೇ ಮೂಲವಾಗಿರುವ ಭಾರತದಲ್ಲಿ ಈಗ ಆ ಕಸುಬು ದಿಕ್ಕೆಟ್ಟು ನಿಂತಿದೆ. ಆಹಾರ ವಿಷಮಯವಾಗಿದೆ; ರೈತನ ಬದುಕು ಹೀನಾಯ ಸ್ಥಿತಿ ತಲುಪಿದೆ. ಸಾವಯವ ವಿಧಾನವೇ ಇದಕ್ಕೆ ಪರಿಹಾರ’ ಎನ್ನುವ “ಒಫಾಯ್‌’ ನಿರ್ದೇಶಕ ಹಾಗೂ ಪರಿಸರವಾದಿ ಡಾ. ಕ್ಲಾಡ್‌ ಅಲ್ವಾರಿಸ್‌, ನಿಧಾನವಾಗಿಯಾದರೂ ಸಾವಯವ ಆಂದೋಲನದ ವ್ಯಾಪ್ತಿ ವಿಸ್ತಾರವಾಗುತ್ತಿದೆ ಎಂದು ಸಂತಸದಿಂದ ಹೇಳುತ್ತಾರೆ.

“ಸಾವಯವ ಭಾರತದ ಮೂಲಕ ಸಾವಯವ ಜಗತ್ತು’ ಎಂಬ ಧ್ಯೇಯವಾಕ್ಯ ಈ ಬಾರಿಯ ಸಮಾವೇಶದ್ದು. ಹಸಿರು ಕ್ರಾಂತಿಯ ಬಳಿಕ ನಿರ್ಲಕ್ಷ್ಯಕ್ಕೆ ಈಡಾಗಿದ್ದ ಸಾವಯವ ಕೃಷಿಗೆ ಸರ್ಕಾರಗಳ ಬೆಂಬಲವಂತೂ ದೂರದ ಮಾತೇ ಆಗಿತ್ತು. ಹಾಗಿದ್ದರೂ ಪ್ರಜಾnವಂತ ರೈತರು ಹಾಗೂ ರೈತಪರ ಸಂಘಟನೆಗಳ ಬಲದೊಂದಿಗೆ ಸಾವಯವ ಕೃಷಿ ವಿಧಾನ ಕ್ರಮೇಣ ಮುಖ್ಯವಾಹಿನಿಗೆ ಬಂದಿತು. ‘ವಿಷಮಯವಾದ ಪರಿಸರ ಹಾಗೂ ಆಹಾರವನ್ನು ಮತ್ತೆ ಸರಿದಾರಿಗೆ ತರಲು ಸಾವಯವ ಕೃಷಿ ವಿಧಾನವೇ ಸೂಕ್ತ’ ಎಂಬ ಮಾಹಿತಿಗೆ ಈಗ ಸಹಮತ ಸಿಗುತ್ತಿದೆ.
ವಿವರಗಳಿಗೆ:https://owc.ifoam.bio/2017

– ಆನಂದತೀರ್ಥ ಪ್ಯಾಟಿ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.