ಮೀಸಲಿಗೆ ನಿತೀಶ್ ಸಮರ್ಥನೆ
Team Udayavani, Nov 7, 2017, 6:20 AM IST
ಪಟ್ನಾ: ಸರಕಾರದಿಂದ ಹೊರಗುತ್ತಿಗೆ ಪಡೆಯುವ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸುವ ತಮ್ಮ ಸರಕಾರದ ನಿಲುವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಪಟ್ನಾದ ತಮ್ಮ ನಿವಾಸದಲ್ಲಿ ನಡೆಸಿದ “ಲೋಕ್ ಸಂವಾದ್’ (ಜನತಾ ದರ್ಶನ) ಕಾರ್ಯಕ್ರಮದ ನಂತರ ಮಾತನಾಡಿದ ಅವರು, “”ಸರಕಾರದ ಹೊರಗುತ್ತಿಗೆ ಮೀಸಲಾತಿ ನಿಲುವನ್ನು ಟೀಕಿಸುತ್ತಿರುವವರು 2003ರ ಬಿಹಾರ ಮೀಸಲಾತಿ ನಿಯಮಗಳ ಬಗ್ಗೆ ಅಲ್ಪ ಜ್ಞಾನ ಹೊಂದಿರುವವರು” ಎಂದು ಕಿಡಿಕಾರಿದ್ದಾರೆ.
“”ರಾಜ್ಯ ಸರಕಾರದಿಂದ ಕಾಮಗಾರಿ ಗುತ್ತಿಗೆ ಪಡೆಯುವ ಕಂಟ್ರಾಕ್ಟರ್ ಒಬ್ಬ ತಾನೇ ಕೂಲಿಯಾಳುಗಳನ್ನಿಟ್ಟು ಕೆಲಸ ಮಾಡಿಸುತ್ತಾನೆ. ತಾನೇ ಅವರಿಗೆ ಸಂಬಳ ನೀಡುತ್ತಾನೆ. ಹಾಗಾಗಿ, ಅವನ ತಂಡಕ್ಕೆ ಮೀಸಲಾತಿ ಅನ್ವಯವಾಗುವುದಿಲ್ಲ. ಆದರೆ, ಹೊರಗುತ್ತಿಗೆ ವಿಚಾರದಲ್ಲಿ ಹಾಗಾಗುವುದಿಲ್ಲ. ಇಲ್ಲಿ ಸರಕಾರವೇ ಸಂಸ್ಥೆಯೊಂದರಿಂದ ಸೇವೆಯನ್ನು ಪಡೆಯುತ್ತದೆ ಮತ್ತು ಆ ಸಂಸ್ಥೆಯ ನೌಕರರಿಗೆ ಸರಕಾರವೇ ಸಂಬಳ ನೀಡುತ್ತದೆ. ಹಾಗಾಗಿ, ಇಲ್ಲಿ ಮೀಸಲಾತಿ ಯನ್ನು ಅನ್ವಯಿಸಬಹುದು” ಎಂದರು.
ಇದೇ ವೇಳೆ, ಅಪಮೌಲ್ಯ, ಜಿಎಸ್‌ಟಿ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರಿಸಿದ ನಿತೀಶ್, “”ಜಿಎಸ್‌ಟಿ ತೆರಿಗೆ ಪದ್ಧತಿಯು ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಪರಿಕಲ್ಪನೆಯಾಗಿತ್ತು. ಇನ್ನು, ಅಪಮೌಲ್ಯವು ಕಪ್ಪು ಹಣವನ್ನು ಮಟ್ಟಹಾಕಲು ಕೈಗೊಳ್ಳಲಾದ ಮಹತ್ತರವಾದ ಹೆಜ್ಜೆ. ಆದರೆ, ಈಗೇಕೆ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.